ತುಂಬಾ ಅಗ್ಗದ ರೀಚಾರ್ಜ್ ಪ್ಲಾನ್, ದಿನಕ್ಕೆ 9 ರೂಪಾಯಿಗೆ ಸಿಗಲಿದೆ ಈ ಎಲ್ಲಾ ಸೌಲಭ್ಯ

ವಿಐ  ತಮ್ಮ ಗ್ರಾಹಕರಿಗೆ ಅತ್ಯಾಕರ್ಷಕ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ.  ಇದು ಅತ್ಯಂತ ಅಗ್ಗದ ರಿಚಾರ್ಜ್ ಪ್ಲಾನ್

Written by - Ranjitha R K | Last Updated : Jun 1, 2021, 11:01 AM IST
  • ವೋಡಾಫೋನ್-ಐಡಿಯಾ ತುಂಬಾ ಅಗ್ಗದ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ.
  • ಕಡಿಮೆ ದುಡ್ಡಲ್ಲಿ ಬಹುತೇಕ ಎಲ್ಲಾ ಸೌಲಭ್ಯಗಳು ಸಿಗಲಿವೆ
  • ಅನ್ ಲಿಮಿಟೆಡ್ ವಾಯ್ಸ್ ಕಾಲ್, 100 ಎಸ್ ಎಂಎಸ್ ಎಲ್ಲಾ ಲಭ್ಯವಿದೆ.
ತುಂಬಾ ಅಗ್ಗದ ರೀಚಾರ್ಜ್ ಪ್ಲಾನ್, ದಿನಕ್ಕೆ 9 ರೂಪಾಯಿಗೆ ಸಿಗಲಿದೆ ಈ ಎಲ್ಲಾ ಸೌಲಭ್ಯ title=
ವೋಡಾಫೋನ್-ಐಡಿಯಾ ತುಂಬಾ ಅಗ್ಗದ ರೀಚಾರ್ಜ್ ಪ್ಲಾನ್ (file photo)

ನವದೆಹಲಿ : ವಿಐ (Vi) ತಮ್ಮ ಗ್ರಾಹಕರಿಗೆ ಅತ್ಯಾಕರ್ಷಕ ರೀಚಾರ್ಜ್ ಪ್ಲಾನ್ (Recharge plan) ಪರಿಚಯಿಸಿದೆ.  ಇದು ಅತ್ಯಂತ ಅಗ್ಗದ ರಿಚಾರ್ಜ್ ಪ್ಲಾನ್. ನಿಮ್ಮ ಮೊಬೈಲ್ ಅಗತ್ಯತೆಗಳು ಇಲ್ಲಿ ಲಭ್ಯವಿದೆ.  ಇದರಲ್ಲಿ ದಿನಕ್ಕೆ 10 ರೂಪಾಯಿ, 13 ರೂಪಾಯಿ ಮತ್ತು 7 ರೂಪಾಯಿ  ವೆಚ್ಚ ಮಾಡಬೇಕಾಗಿ ಬರುತ್ತದೆ ಅಷ್ಟೆ.

ವೊಡಾಫೋನ್ – ಐಡಿಯಾ 398 ರೂ. ಪ್ಲಾನ್
ಇದರಲ್ಲಿ ದಿನಕ್ಕೆ 3 ಜಿಬಿ ಡಾಟಾ ಸಿಗುತ್ತದೆ. ಪ್ಲಾನ್ ವಾಲಿಡಿಟಿ 28 ದಿನ.ಅನ್ ಲಿಮಿಟೆಡ್ ಕಾಲ್ (unlimited calls) ಇದರಲ್ಲಿದೆ. ದಿನಕ್ಕೆ 100 ಎಸ್ಎಂಎಸ್ ಮಾಡಬಹುದು.  ವಿಐ ಮೂವಿಸ್ (Vi movies)ಮತ್ತು ಟೀವಿ ನೋಡಬಹುದು. ಈ ಪ್ಲಾನ್ ಪ್ರಕಾರ ನಿಮಗೆ ದಿನಕ್ಕೆ 14.21 ರೂಪಾಯಿ ಖರ್ಚು ಮಾಡಬೇಕಾಗಿ ಬರುತ್ತದೆ.

ಇದನ್ನೂ ಓದಿ : Google Photos:ಈ ಟ್ರಿಕ್ಸ್ ಬಳಸಿದರೆ ಈಗಲೂ ಗೂಗಲ್ ಫೋಟೊ ಫ್ರೀಯಾಗಿ ಬಳಸಬಹುದು.!

401 ರೂಪಾಯಿ ಪ್ಲಾನ್
ವೊಡಾಫೋನ್ – ಐಡಿಯಾ ಈ ಪ್ಲಾನ್ ವಾಲಿಡಿಟಿ 28 ದಿನಗಳು. ಇದರಲ್ಲಿ ಪ್ರತಿದಿನ 3 ಜಿಬಿ ಡಾಟಾ ಸಿಗುತ್ತದೆ. ಜೊತೆಗೆ 16 ಜಿಬಿ ಎಕ್ಸ್ಟ್ರಾ ಡಾಟಾ ಸಿಗುತ್ತದೆ. ದಿನಕ್ಕೆ 100 SMS ಸಿಗುತ್ತದೆ. ಅನ್ ಲಿಮಿಟೆಡ್ ವಾಯ್ಸ್ ಕಾಲ್ ಇದ್ದೇ ಇದೆ. ಡಿಸ್ನಿ ಪ್ಲಸ್ (Disney plus), ಹಾಟ್ ಸ್ಟಾರ್ (Hotstar), ವಿಐ ಮೂವಿಸ್ ನೋಡಬಹುದು. ಈ ಪ್ಲಾನ್ ಗೆ ನೀವು ದಿನಕ್ಕೆ 14.31 ರೂ. ಖರ್ಚು ಮಾಡಬೇಕಾಗುತ್ತದೆ. 

249 ರೂ. ಪ್ಲಾನ್
ವೊಡಾಫೋನ್ ಐಡಿಯಾ (Vodafone Idea) 249 ರೂ. ಪ್ಲಾನಿನಲ್ಲಿ ದಿನವೂ 1.5 ಜಿಬಿ ಡಾಟಾ ಸಿಗುತ್ತದೆ. ಇದಕ್ಕೆ ನೀವು ದಿನಕ್ಕೆ 8.89 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅನ್ ಲಿಮಿಟೆಡ್ ವಾಯ್ಸ್ ಕಾಲ್ ಇದ್ದೇ ಇದೆ. 100 SMS ಕಳುಹಿಸಬಹುದು. ಇದರ ವಾಲಿಡಿಟಿ 28 ದಿನಗಳು. 

ಇದನ್ನೂ ಓದಿ : Twitter's New Feature: ಟ್ವಿಟರ್‌ನಲ್ಲಿ ಈಗ ಸಿಗಲಿದೆ ಫೇಸ್ಬುಕ್ ರೀತಿಯ ಈ ವೈಶಿಷ್ಟ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News