Google Photos:ಈ ಟ್ರಿಕ್ಸ್ ಬಳಸಿದರೆ ಈಗಲೂ ಗೂಗಲ್ ಫೋಟೊ ಫ್ರೀಯಾಗಿ ಬಳಸಬಹುದು.!

ಗೂಗಲ್ ಫೋಟೋ ಫ್ರೀ ಸ್ಟೋರೇಜ್  ಸೌಲಭ್ಯ ಇಂದಿನಿಂದ ಕೊನೆಗೊಂಡಿದೆ.  ಗೂಗಲ್ ಹೊಸ ನೀತಿಯ ಪ್ರಕಾರ ಜಿಮೇಲ್ಅಕೌಂಟ್ ನಲ್ಲಿ  15 ಜಿಬಿ ಫ್ರೀ ಸ್ಟೋರೇಜ್ ಸಿಗುತ್ತದೆ. ಇದರಲ್ಲಿ ಗೂಗಲ್ ಫೋಟೋಸ್ ಕೂಡಾ ಸೇರಿದೆ.  ಈಗ ನಿಮಗೆ ಗೂಗಲ್ ಫೋಟೋಸ್ ಸ್ಟೋರೇಜ್ ಮ್ಯಾನೇಜ್ಮೆಂಟ್ ಸರಿಯಾಗಿ ಮಾಡಬೇಕಾದ ಅಗತ್ಯವಿದೆ.

Written by - Ranjitha R K | Last Updated : Jun 1, 2021, 10:18 AM IST
  • ಗೂಗಲ್ ಫೋಟೋ ಫ್ರೀ ಸ್ಟೋರೇಜ್ ಸೌಲಭ್ಯ ಇಂದಿನಿಂದ ಕೊನೆಗೊಂಡಿದೆ.
  • ಈಗ ನಿಮಗೆ ಗೂಗಲ್ ಫೋಟೋಸ್ ಸ್ಟೋರೇಜ್ ಮ್ಯಾನೇಜ್ಮೆಂಟ್ ಸರಿಯಾಗಿ ಮಾಡಬೇಕಾದ ಅಗತ್ಯವಿದೆ.
  • ಕೆಲವೊಂದು ಟ್ರಿಕ್ಸ್ ಯೂಸ್ ಮಾಡಿದರೆ ಜೂನ್ 1 ರ ಬಳಿಕವೂ ನೀವು ಗೂಗಲ್ ಫೋಟೋವನ್ನು ಉಚಿತವಾಗಿ ಬಳಸಬಹುದು.
 Google Photos:ಈ ಟ್ರಿಕ್ಸ್ ಬಳಸಿದರೆ ಈಗಲೂ ಗೂಗಲ್ ಫೋಟೊ ಫ್ರೀಯಾಗಿ ಬಳಸಬಹುದು.!  title=
ಗೂಗಲ್ ಫೋಟೋ ಫ್ರೀ ಸ್ಟೋರೇಜ್ ಸೌಲಭ್ಯ ಇಂದಿನಿಂದ ಕೊನೆಗೊಂಡಿದೆ. (photo zee news)

ನವದೆಹಲಿ : ಗೂಗಲ್ ಫೋಟೋ ಫ್ರೀ ಸ್ಟೋರೇಜ್ (google photo free storage) ಸೌಲಭ್ಯ ಇಂದಿನಿಂದ ಕೊನೆಗೊಂಡಿದೆ.  ಗೂಗಲ್ ಹೊಸ ನೀತಿಯ ಪ್ರಕಾರ ಜಿಮೇಲ್ಅಕೌಂಟ್ ನಲ್ಲಿ (gmail) 15 ಜಿಬಿ ಫ್ರೀ ಸ್ಟೋರೇಜ್ ಸಿಗುತ್ತದೆ. ಇದರಲ್ಲಿ ಗೂಗಲ್ ಫೋಟೋಸ್ (google photo) ಕೂಡಾ ಸೇರಿದೆ.  ಈಗ ನಿಮಗೆ ಗೂಗಲ್ ಫೋಟೋಸ್ ಸ್ಟೋರೇಜ್ ಮ್ಯಾನೇಜ್ಮೆಂಟ್ ಸರಿಯಾಗಿ ಮಾಡಬೇಕಾದ ಅಗತ್ಯವಿದೆ.  ಇದಕ್ಕಾಗಿ ಕಂಪನಿ ಹಲವು ಪ್ಲಾನ್ ಗಳನ್ನು ಪರಿಚಯಿಸಿದೆ. ದುಡ್ಡು ಕೊಟ್ಟು ಗೂಗಲ್ ಸ್ಪೇಸ್ ಖರೀದಿಸಬಹುದು.  ಸಾಮಾನ್ಯರಿಗೆ ಇದು ಹೆಚ್ಚುವರಿ ಹೊರೆಯಾಗುತ್ತದೆ. ಆದರೆ, ಕೆಲವೊಂದು ಟ್ರಿಕ್ಸ್ ಯೂಸ್ ಮಾಡಿದರೆ ಜೂನ್ 1 ರ ಬಳಿಕವೂ ನೀವು ಗೂಗಲ್ ಫೋಟೋವನ್ನು ಉಚಿತವಾಗಿ ಬಳಸಬಹುದು.  ಆ ಟ್ರಿಕ್ಸ್ ಯಾವುದು..?

1. ಅಟೋ ಬ್ಯಾಕಪ್ ಬಂದ್ ಮಾಡಿ
ಮೊತ್ತ ಮೊದಲು ಫೋಟೋ ಅಟೋ ಬ್ಯಾಕಪ್ ಬಂದ್ ಮಾಡಿ. ವಾಟ್ಸಾಪ್ (Whatsapp), ಟೆಲಿಗ್ರಾಂ  ಇತ್ಯಾದಿ ಫೋಟೋಗಳು ಗೂಗಲ್ ನಲ್ಲಿ (google) ಸ್ಟೋರ್ ಆಗುತ್ತಿರುತ್ತವೆ. ಇದನ್ನು ಆಫ್ ಮಾಡಿ.  ತಿಂಗಳಿಗೊಮ್ಮೆ ಗೂಗಲ್ ಫೋಟೋಸ್ ಗೆ (google photo) ಹೋಗಿ ಯಾವುದನ್ನು ಬ್ಯಾಕಪ್ ಮಾಡಬೇಕು ಯಾವುದು ಬೇಡ ಎಂಬುದನ್ನು ಸೆಲೆಕ್ಟ್ ಮಾಡಬಹುದು.

ಇದನ್ನೂ ಓದಿ :  5G Smartphones: ಭಾರತದಲ್ಲಿ 20,000 ರೂ. ಗಿಂತಲೂ ಕಡಿಮೆ ದರದಲ್ಲಿ ಲಭ್ಯವಿರುವ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳಿವು

2.  ಅನಗತ್ಯ ಫೈಲ್ಸ್ ಡಿಲೀಟ್ ಮಾಡಿ. 
ಹೊಸ ಪಾಲಿಸಿ ಅನುಷ್ಠಾನಕ್ಕೆ ಬರುವ ಮೊದಲು ಅನಗತ್ಯ ಮೇಲ್ ಯಾವುದು ಎಂಬುದನ್ನು ಗುರುತಿಸಿ, ಅದನ್ನು ಡಿಲೀಟ್ ಮಾಡಿ. ಹೊಸ ಸನ್ನಿವೇಶದಲ್ಲಿ ಜಿಮೇಲ್ (gmail) ಹಾಗೂ ಗೂಗಲ್ ಪೊಟೋಸ್ ಸೇರಿ 15 ಜಿಬಿ ಸ್ಟೋರೇಜ್ ಸಿಗುತ್ತದೆ. ಹಾಗಾಗಿ, ಅನಗತ್ಯ ಡಾಕ್ಯುಮೆಂಟ್, ಪೋಟೋಸ್, ಮೇಲ್ ಡಿಲಿಟ್ ಮಾಡಿ. ಇದರಿಂದ ನಿಮಗೆ ಸಾಕಷ್ಟು ಸ್ಪೇಸ್ ಸಿಗುತ್ತದೆ.

3. ಜಿಮೇಲ್ ಸ್ಪಾಮ್ ಕ್ಲಿಯರ್ ಮಾಡಿ. 
ಜಿಮೇಲ್ ನಲ್ಲಿ ಸ್ಪಾಮ್ ಮೇಲ್ ಗಳೂ (Spam mail) ಸಿಕ್ಕಾಪಟ್ಟೆ ಇರುತ್ತವೆ.  ಇದು ಕೂಡಾ ನಿಮ್ಮ ಸ್ಟೋರೇಜನ್ನು ತುಂಬಿಸಿಬಿಡುತ್ತದೆ.  ಇದಕ್ಕಾಗಿ ನೀವು ಜಿಮೇಲ್ ಸ್ಪಾಮ್ ಮೇಲ್ ಗಳನ್ನು ಕ್ಲಿಯರ್ ಮಾಡಬಹುದು. ಸ್ಪಾಮ್ ಮೇಲ್ ಕ್ಲಿಯರ್ ಮಾಡಿದರೆ ಕನಿಷ್ಠ 2-3 ಜಿಬಿ ಸ್ಪೇಸ್ ಹೆಚ್ಚುವರಿಯಾಗಿ ಸಿಗುತ್ತದೆ. 

ಇದನ್ನೂ ಓದಿ :  Paytm ನಲ್ಲಿ Vaccination slot ಸರ್ಚ್ ಮಾಡುವುದು ಹೇಗೆ ತಿಳಿಯಿರಿ

4. ಗೂಗಲ್ ಡ್ರೈವ್
ಗೂಗಲ್ ಡ್ರೈವ್ (google drive) ಕೂಡಾ ಸಾಕಷ್ಟು ಸ್ಪೇಸ್ ಕೇಳುತ್ತದೆ. ಒಮ್ಮೆ ನಿಮ್ಮ ಗೂಗಲ್ ಡ್ರೈವ್ ಚೆಕ್ ಮಾಡಿ. ಅದರಲ್ಲಿ ನೀವು ಬಳಕೆ ಮಾಡದ ಯಾವುದಾದರೂ ದೊಡ್ಡ ಸೈಜಿನ ಫೈಲ್ ಇದ್ದರೆ ಅದನ್ನು ಡಿಲೀಟ್ ಮಾಡಿ ಅಥವಾ ಹಾರ್ಡ್ ಡಿಸ್ಕ್ ಗೆ ಹಾಕಿ.  ಇದರಿಂದಲೂ ಸಾಕಷ್ಟು ಸ್ಟೋರೇಜ್ ನಿಮಗೆ ಸಿಗಲಿದೆ.

5. ಅಸ್ಪಷ್ಟ ಮತ್ತು ಡುಪ್ಲಿಕೇಟ್ ಫೋಟೋಸ್ ಡಿಲೀಟ್ ಮಾಡಿ.
ಗೂಗಲ್ ಫೊಟೋ ಲೈಬ್ರೆರಿಗೆ (photo library) ವಿಸಿಟ್ ಮಾಡಿ. ಅದರಲ್ಲಿ ಅಸ್ಪಷ್ಟ ಫೊಟೋಸ್ ಮತ್ತು ಡುಪ್ಲಿಕೇಟ್ ಫೋಟೋ ಡಿಲೀಟ್ ಮಾಡಿದರೂ, ಸಾಕಷ್ಟು ಸ್ಪೇಸ್ ಉಳಿಸಬಹುದು.  

ಇದನ್ನೂ ಓದಿ :  Paytm ಬಳಕೆದಾರರೆ ಎಚ್ಚರ! Cashback ಪಡೆಯಲು ಹೋಗಿ ಖಾತೆ ಖಾಲಿಯಾಗುವ ಅಪಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News