New Kiss Device: ದೂರದಲ್ಲಿರುವ ಗರ್ಲ್ ಫ್ರೆಂಡ್ ಅಥವಾ ಪತ್ನಿಗೆ ಅಸಲಿ ಮುತ್ತು ಕೊಡಬೇಕೇ?... ವಿಡಿಯೋ ನೋಡಿ!

Modern Kissing Device: ಚೀನಾದ ವಿಶ್ವವಿದ್ಯಾನಿಲಯವೊಂದು ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದು, ತನ್ಮೂಲಕ ಪರಸ್ಪರ ದೂರದಲ್ಲಿ ವಾಸಿಸುವ ಸಂಗಾತಿಗಳು ಪರಸ್ಪರ ಕಿಸ್ ಮಾಡಬಹುದು. ಈ ಸಾಧನಕ್ಕೆ ಏಕಕಾಲದಲ್ಲಿ ಕೇವಲ ಇಬ್ಬರು ಮಾತ್ರ ಸಂಪರ್ಕ ಪಡೆದುಕೊಳ್ಳಬಹುದು.  

Written by - Nitin Tabib | Last Updated : Apr 14, 2023, 09:32 PM IST
  • ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ,
  • ಈ ಸಾಧನವನ್ನು ತಯಾರಿಸಿದ ವಿಜ್ಞಾನಿ ತನ್ನ ಗೆಳತಿಯಿಂದ ದೂರ ವಾಸಿಸುತ್ತಾನೆ ಮತ್ತು
  • ಅದರಿಂದಲೇ ಪ್ರೇರಣೆ ಪಡೆದ ಆತನ ಮನದಲ್ಲಿ ಈ ಕುರಿತಾದ ಪರಿಕಲ್ಪನೆ ಬಂದಿದೆ.
New Kiss Device: ದೂರದಲ್ಲಿರುವ ಗರ್ಲ್ ಫ್ರೆಂಡ್ ಅಥವಾ ಪತ್ನಿಗೆ ಅಸಲಿ ಮುತ್ತು ಕೊಡಬೇಕೇ?... ವಿಡಿಯೋ ನೋಡಿ! title=
ದೂರ ವಾಸಿಸುವ ಸಂಗಾತಿಗೆ ಮುತ್ತಿಕ್ಕಲು ಬಂತು ಸಾಧನ

New Kiss Device: ದಿನದಿಂದ ದಿನಕ್ಕೆ ತಂತ್ರಜ್ಞಾನ ಬದಲಾಗುತ್ತಿದೆ ಎಂಬುದಕ್ಕೆ ಹೊಸ ಉದಾಹರಣೆಯೊಂದು ಮಾರುಕಟ್ಟೆಗೆ ಬಂದಿದೆ. ಚೀನಾದ ವಿಶ್ವವಿದ್ಯಾನಿಲಯವೊಂದರ ವಿದ್ಯಾರ್ಹ್ತಿಗಳು ಅಂತರ್ಜಾಲದಲ್ಲಿ ಸಂಚಲನ ಮೂಡಿಸುವ ಸಾಧನವನ್ನು ತಯಾರಿಸಿದ್ದಾರೆ. ಪರಸ್ಪರ ದೂರದಲ್ಲಿ ವಾಸಿಸುವ ಸಂಗಾತಿಗಳಿಗಾಗಿ ಈ ಸಾಧನವನ್ನು ತಯಾರಿಸಲಾಗಿದೆ. ಸಾಮಾನ್ಯವಾಗಿ ದೂರದಲ್ಲಿ ವಾಸಿಸುವ ದಂಪತಿಗಳು ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗುವುದಿಲ್ಲ ಅಥವಾ ದೈಹಿಕವಾಗಿ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದಿಲ್ಲ. ಈ ಕೊರತೆಯನ್ನು ನೀಗಿಸಲು ಚೀನಾದ ವಿಶ್ವವಿದ್ಯಾಲಯವೊಂದು ಅದ್ಭುತ ಸಾಧನವೊಂದನ್ನು ಕಂಡುಹಿಡಿದಿದೆ.

ಇದನ್ನೂ ಓದಿ-China Claim On Moon: ಚಂದ್ರನ ಮೇಲೆ ಚೀನಾ 'ಕಬ್ಜಾ', ಶೀಘ್ರದಲ್ಲೇ ವಸಾಹತ್ತು ನಿರ್ಮಾಣ ಕಾರ್ಯ ಆರಂಭ!

ಚೀನಾದ ವಿಶ್ವವಿದ್ಯಾನಿಲಯ ತಯಾರಿಸಿದ ಈ ಸಾಧನ, ಪರಸ್ಪರ ದೂರದಲ್ಲಿ ವಾಸಿಸುವ ಸಂಗಾತಿಗಳಿಗೆ ನಿಜವಾದ ಚುಂಬನದ ಅನುಭವ ನೀಡುತ್ತದೆ. ವಾಸ್ತವದಲ್ಲಿ, ಮಾನವರಂತೆಯೇ ಈ ಸಾಧನದಲ್ಲಿ ತುಟಿಗಳನ್ನು ತಯಾರಿಸಲಾಗುತ್ತದೆ. ಈ ಸಾಧನವು ಅಪ್ಲಿಕೇಶನ್‌ಗೆ ಸಂಪರ್ಕಿಸುತ್ತದೆ. ಈ ಸಾಧನದಲ್ಲಿ ಮಾಡಿದ ತುಟಿಗಳಿಗೆ ನಿಮ್ಮ ಸಂಗಾತಿ ಚುಂಬಿಸಿದ ತಕ್ಷಣ, ಮತ್ತೊಂದೆಡೆ ಸಾಧನವು ಅದೇ ಶಕ್ತಿ ಮತ್ತು ಶಾಖದಿಂದ ನಿಮ್ಮನ್ನು ಚುಂಬಿಸುತ್ತದೆ. ಒಬ್ಬ ವ್ಯಕ್ತಿಯು ನಿಮ್ಮ ಮುಂದೆ ಇದ್ದಂತೆ ತೋರುತ್ತದೆ. ಪ್ರಸ್ತುತ, ಈ ಸಾಧನವು ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ತೀವ್ರ ಪ್ರತಿಕ್ರಿಯೆಗಳು ಬರುತ್ತಿವೆ. ಸಾಧನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಾವು ನಿಮಗಾಗಿ ಅದರ ವಿಡಿಯೋವನ್ನು ತಂದಿದ್ದೇವೆ.

ಇದನ್ನೂ ಓದಿ-Elon Musk In China: ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಗೆ ಬೆಚ್ಚಿ ಬಿದ್ದ ಚೀನಾ ವತಿಯಿಂದ 13000 ಉಪಗ್ರಹಗಳ ಉಡಾವಣೆ!

ಇಂತಹ ಕಲ್ಪನೆ ಮನದಲ್ಲಿ ಮೂಡಿದ್ದಾದರು ಹೇಗೆ?
ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಸಾಧನವನ್ನು ತಯಾರಿಸಿದ ವಿಜ್ಞಾನಿ ತನ್ನ ಗೆಳತಿಯಿಂದ ದೂರ ವಾಸಿಸುತ್ತಾನೆ ಮತ್ತು ಅದರಿಂದಲೇ ಪ್ರೇರಣೆ ಪಡೆದ ಆತನ ಮನದಲ್ಲಿ ಈ ಕುರಿತಾದ ಪರಿಕಲ್ಪನೆ ಬಂದಿದೆ. ಈ ಸಾಧನವನ್ನು ಲೈವ್ ಮಾಡಿದ ತಕ್ಷಣ, ಜನರು ಇದನ್ನು ತುಂಬಾ ಇಷ್ಟಪಟ್ಟಿದ್ದಾರೆ ಮತ್ತು ಇದೀಗ ಇದು ಪ್ರಪಂಚದಾದ್ಯಂತ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News