ಕೇವಲ 800 ರೂ. ಗೆ ಖರೀದಿಸಿ Motorola ಸ್ಮಾರ್ಟ್ ಫೋನ್

Flipkart Big Saving Days: ವರ್ಷದ ಮೊದಲ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್‌ನಲ್ಲಿ ಪ್ರಾರಂಭವಾಗಿದೆ. ಈ ಸೇಲ್ ಜನವರಿ 22 ರವರೆಗೆ ನಡೆಯಲಿದೆ.

Written by - Ranjitha R K | Last Updated : Jan 20, 2022, 02:53 PM IST
  • ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್
  • ಜನವರಿ 22 ರವರೆಗೆ ನಡೆಯಲಿದೆ ಸೇಲ್
  • Motorola ನ ಸ್ಮಾರ್ಟ್‌ಫೋನ್‌ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ
ಕೇವಲ 800 ರೂ. ಗೆ  ಖರೀದಿಸಿ Motorola ಸ್ಮಾರ್ಟ್ ಫೋನ್  title=
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ (file photo)

ನವದೆಹಲಿ : Flipkart Big Saving Days: ವರ್ಷದ ಮೊದಲ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್‌ನಲ್ಲಿ ಪ್ರಾರಂಭವಾಗಿದೆ. ಈ ಸೇಲ್ ಜನವರಿ 22 ರವರೆಗೆ ನಡೆಯಲಿದೆ. ಫ್ಲಿಪ್‌ ಕಾರ್ಟ್ ಸೇಲ್ ನಲ್ಲಿ (flipkart sale) ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸ್ಮಾರ್ಟ್‌ಫೋನ್‌ಗಳ (smartphone) ಮೇಲೆ ಉತ್ತಮ ಕೊಡುಗೆಗಳನ್ನು ಕೂಡಾ ನೀಡಲಾಗುತ್ತಿದೆ. Motorola ನ ಪ್ರಬಲ ಸ್ಮಾರ್ಟ್‌ಫೋನ್‌ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸೇಲ್ ನಲ್ಲಿ Motorola G60 ಅನ್ನು ಕೇವಲ 799 ರೂ.ಗಳಲ್ಲಿ ಖರೀದಿಸಬಹುದು. 

Motorola G60 ಕೊಡುಗೆಗಳು ಮತ್ತು ರಿಯಾಯಿತಿಗಳು :
Motorola G60 6GB RAM + 128GB ಸ್ಟೋರೇಜ್ ರೂಪಾಂತರದ ಬಿಡುಗಡೆ ಬೆಲೆ 21,999 ರೂ. ಆಗಿದೆ. ಆದರೆ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ (flipkart sale) ಈ ಫೋನ್ 17,999  ರೂ.ಗೆ ಲಭ್ಯವಿದೆ. ಸೇಲ್ ಸಂದರ್ಭದಲ್ಲಿ ಫೋನ್ ಮೇಲೆ 4 ಸಾವಿರ ರಿಯಾಯಿತಿ ನೀಡಲಾಗುತ್ತಿದೆ.

ಇದನ್ನೂ ಓದಿ : Flipkart Sale: Vivo 5G ಫೋನ್ ಮೇಲೆ ಪಡೆಯಿರಿ ಭರ್ಜರಿ 24,000 ರೂ.ಗಳ ರಿಯಾಯಿತಿ

Motorola G60 ಬ್ಯಾಂಕ್ ಆಫರ್ :
Motorola G60 ಅನ್ನು ಖರೀದಿಸಲು ICICI ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ (credit card) ಅನ್ನು ಬಳಸಿದರೆ, ವು 750 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತದೆ. ದರೆ, ಫೋನ್ ಬೆಲೆ 17,249 ಆಗಿರುಲಿದೆ. 

Motorola G60 ಎಕ್ಸ್ಚೇಂಜ್ ಆಫರ್ :
Motorola G60 ನಲ್ಲಿ 16,450 ರೂಪಾಯಿಗಳ ವಿನಿಮಯ ಕೊಡುಗೆ (exchange offer) ಲಭ್ಯವಿದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ, ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನೆನಪಿರಲಿ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ ಇಷ್ಟು ರಿಯಾಯಿತಿ ಪಡೆಯುವುದು ಸಾಧ್ಯವಾಗುತ್ತದೆ. ಒಂದು ವೇಳೆ 16,450 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಪಡೆಯುವುದು ಸಾಧ್ಯವಾದರೆ ಈ ಫೋನ್ ಅನ್ನು 799 ರೂ. ಗಳಿಗೆ ಖರೀದಿಸಬಹುದು.ಅಂದರೆ  21,999 ರೂಗಳ ಫೋನ್ ಅನ್ನು ಕೇವಲ 799 ರೂಗಳಿಗೆ ಖರೀದಿಸಬಹುದು. 

ಇದನ್ನೂ ಓದಿ : ಜಿಯೋ, ಏರ್‌ಟೆಲ್‌ನ ನಿದ್ದೆಗೆಡಿಸಿದೆ ವೊಡಾಫೋನ್ ಐಡಿಯಾದ ಈ ಪ್ಲಾನ್, ಗ್ರಾಹಕರಿಗೆ ಸಿಗಲಿದೆ ಭರ್ಜರಿ ಲಾಭ

Motorola G60 ವಿಶೇಷತೆ : 
Motorola G60 6.7-ಇಂಚಿನ ಡಿಸ್ಪ್ಲೇ, 6000mAH ಶಕ್ತಿಯುತ ಬ್ಯಾಟರಿ,  108MP + 8MP + 2MPಯ ಟ್ರಿಪಲ್ ಕ್ಯಾಮೆರಾ ಯೂನಿಟ್ ಅನ್ನು ಹೊಂದಿದೆ. 32MP ಫ್ರಂಟ್ ಕ್ಯಾಮೆರಾ ಇದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News