ಮಾರುಕಟ್ಟೆಯಲ್ಲಿರುವ ಅಗ್ಗದ 7 ಸೀಟರ್ ಇದುವೇ! ಮಾರಾಟದಲ್ಲಿಯೂ ಭರ್ಜರಿ ಹೆಚ್ಚಳ !

Maruti Eeco Sales :5 ಸೀಟರ್, 7 ಸೀಟರ್ ಆಯ್ಕೆಗಳಲ್ಲಿ ಬರುವ ಮಾರುತಿ ಸುಜುಕಿ Eeco, ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ  ಸ್ಥಾನ ಪಡೆದಿದೆ.   

Written by - Ranjitha R K | Last Updated : Feb 9, 2023, 03:35 PM IST
  • ಕೈಗೆಟುಕುವ ಮತ್ತು ಜನಪ್ರಿಯವಾದ ಸೆವೆನ್ ಸೀಟರ್
  • ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಈ ಕಾರಿಗೆ ಸ್ಥಾನ
  • ಮಾರುತಿ ಇಕೋ ಬೆಲೆ ಮತ್ತು ಎಂಜಿನ್ ವಿಶೇಷಣಗಳು ಏನು ?
ಮಾರುಕಟ್ಟೆಯಲ್ಲಿರುವ ಅಗ್ಗದ 7 ಸೀಟರ್ ಇದುವೇ! ಮಾರಾಟದಲ್ಲಿಯೂ ಭರ್ಜರಿ ಹೆಚ್ಚಳ ! title=

Maruti Eeco Sales : ಅತ್ಯಂತ ಕೈಗೆಟುಕುವ ಮತ್ತು ಜನಪ್ರಿಯವಾದ ಸೆವೆನ್ ಸೀಟರ್ ಎಂದಾಕ್ಷಣ ಮನಸ್ಸಿಗೆ ಬರುವುದು ಮಾರುತಿ ಸುಜುಕಿ ಎರ್ಟಿಗಾ. ಡಿಸೆಂಬರ್ 2022 ರಲ್ಲಿ, ಎರ್ಟಿಗಾ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.   ಆದರೆ, ಜನವರಿ 2023 ರಲ್ಲಿ, ಮಾರುತಿ ಸುಜುಕಿ ಎರ್ಟಿಗಾ ಕೂಡಾ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಲಿಸ್ಟ್ ನಿಂದ ಹೊರಗುಳಿದಿದೆ.   ಆದರೆ 5 ಸೀಟರ್, 7 ಸೀಟರ್ ಆಯ್ಕೆಗಳಲ್ಲಿ ಬರುವ ಮಾರುತಿ ಸುಜುಕಿ Eeco, ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ  ಸ್ಥಾನ ಪಡೆದಿದೆ. 

ಮಾರುತಿ ಇಕೋ ಮತ್ತು ಮಾರುತಿ ಎರ್ಟಿಗಾ ಮಾರಾಟ :
ಜನವರಿ 2023 ರಲ್ಲಿ Eecoವಿನ 11,709 ಯುನಿಟ್ ಗಳು ಮಾರಾಟವಾಗಿವೆ. ವಾರ್ಷಿಕ ಆಧಾರದ ಮೇಲೆ ನೋಡುವುದಾದರೆ ಇದು 11 ಪ್ರತಿಶತದಷ್ಟು ಹೆಚ್ಚು. ಜನವರಿ 2022 ರಲ್ಲಿ, ಕಂಪನಿಯು 10528, ಯನಿಟ್‌ಗಳನ್ನು ಮಾರಾಟ ಮಾಡಿದೆ. ಅದೇ ಸಮಯದಲ್ಲಿ, ಮಾರುತಿ ಎರ್ಟಿಗಾದ ಒಟ್ಟು 9750 ಯುನಿಟ್‌ಗಳನ್ನು ಜನವರಿ 2023 ರಲ್ಲಿ ಮಾರಾಟ ಮಾಡಲಾಗಿದೆ, . ಇದರೊಂದಿಗೆ ಇದು ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ 13 ನೇ ಸ್ಥಾನಕ್ಕೆ ಇಳಿದಿದೆ. ಇದು ದೇಶದ ಅತಿ ಹೆಚ್ಚು ಮಾರಾಟವಾಗುವ MPV ಆಗಿದೆ.

ಇದನ್ನೂ ಓದಿ : ಫಾರ್ಚುನರ್‌ಗೆ ಟಕ್ಕರ್ ನೀಡಲು ಕೈಗೆಟುಕುವ ಬೆಲೆಯಲ್ಲಿ ಹೊಸ ಎಸ್‌ಯುವಿ ಬಿಡುಗಡೆ ಮಾಡಿದ ಮಹೀಂದ್ರಾ

ಮಾರುತಿ ಇಕೋ ಬೆಲೆ ಮತ್ತು ಎಂಜಿನ್ ವಿಶೇಷಣಗಳು :
ಮಾರುತಿ ಇಕೋ ಬೆಲೆಯ ಬಗ್ಗೆ ಹೇಳುವುದಾದರೆ ಇದು  5.25 ಲಕ್ಷದಿಂದ  6.51 ಲಕ್ಷ ದವರೆಗೆ ಇರುತ್ತದೆ. ಇದು 5 ಸೀಟರ್ ಮತ್ತು 7 ಸೀಟರ್  ವಿನ್ಯಾಸಗಳಲ್ಲಿ ಬರುತ್ತದೆ. ಇದು 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನ ಹೊಂದಿರುತ್ತದೆ. 81PS ಪವರ್ ಮತ್ತು 104.4Nm ಟಾರ್ಕ್ ಅನ್ನು  ಜನರೆಟ್ ಮಾಡುತ್ತದೆ. CNG ರೂಪಾಂತರದೊಂದಿಗೆ ಕೂಡಾ ಈ ಕಾರು ಮಾರುಕಟ್ಟೆಯಲ್ಲಿ ಲಭ್ಯವಿದೆ.  

CNG ನಲ್ಲಿ ಎಂಜಿನ್ 72PS ಮತ್ತು 95Nm ಅನ್ನು  ಜನರೆಟ್ ಮಾಡುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಪಡೆಯುತ್ತದೆ. ಇದು ಪೆಟ್ರೋಲ್  ಎಂಜಿನ್ ನಲ್ಲಿ  19.71 kmpl ಮೈಲೇಜ್ ನೀಡಿದರೆ, CNG ಯಲ್ಲಿ 26.78 kmpl ನೀಡುತ್ತದೆ. 

ಇದನ್ನೂ ಓದಿ : ಒಟ್ಟಿಗೆ ನಾಲ್ಕು ಬೈಕ್ ಗಳನ್ನು ಲಾಂಚ್ ಮಾಡಿದ ಸುಜುಕಿ! ಬೆಲೆ ಕೂಡಾ ದುಬಾರಿಯೇನಿಲ್ಲ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News