ನವದೆಹಲಿ : ಕಳೆದ ವಾರ ಕ್ಯೂಬಾ, ಇರಾನ್, ಸಿರಿಯಾ ಮತ್ತು ಸೂಡಾನ್ ನಂತಹ ಆಯ್ದ ದೇಶಗಳಲ್ಲಿ ತಮ್ಮ ಸ್ಮಾರ್ಟ್ ಫೋನ್ (Smart phone) ಬಳಸುವುದನ್ನು Xiaomi ನಿರ್ಬಂಧಿಸಿತ್ತು. ಮರುಮಾರಾಟಗಾರರ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಕಂಪನಿ ಈ ಕ್ರಮವನ್ನು ಕೈಗೊಂಡಿತ್ತು.
ಕಳ್ಳಸಾಗಣೆ ತಡೆಗೆ ಫೋನ್ ನಿರ್ಬಂಧ :
ಸ್ಮಾರ್ಟ್ಫೋನ್ (Smartphone) ಕ್ಯೂಬಾ, ಸಿರಿಯಾ, ಸುಡಾನ್ ಮತ್ತು ಇತರ ಕೆಲವು ದೇಶಗಳಿಗೆ ಅನಧಿಕೃತ ಪ್ರದೇಶಗಳಿಗೆ ಕಳ್ಳಸಾಗಣೆ ಮಾಡಲಾಗಿದೆಯೇ ಎನ್ನುವುದನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ಭಾಗವಾಗಿದೆ ಎಂದು Xiaomi ಹೇಳಿದೆ. ಈ ಕ್ರಮವನ್ನು ಕಳ್ಳಸಾಗಣೆ ವಿರೋಧಿ ಕ್ರಮವಾಗಿ ನೋಡಲಾಗುತ್ತಿದ್ದು, ಈ ಅನಧಿಕೃತ ಪ್ರದೇಶಗಳಲ್ಲಿ ಮರುಮಾರಾಟಗಾರರು ಶಿಯೋಮಿ ಸ್ಮಾರ್ಟ್ಫೋನ್ಗಳನ್ನು (Xiaomi Smartphone) ಮಾರಾಟ ಮಾಡುವುದನ್ನು ತಡೆಯುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ : ವೊಡಾಫೋನ್ ಐಡಿಯಾದ ಭರ್ಜರಿ ಆಫರ್ ; ಪ್ರತಿದಿನ 3 ಜಿಬಿ ಇಂಟರ್ನೆಟ್ ಜೊತೆಗೆ ಉಳಿದ ಎಲ್ಲಾ ಪ್ರಯೋಜನಗಳು
ಅಧಿಕೃತ ಮಾರುಕಟ್ಟೆಯಿಂದ ಫೋನ್ ಖರೀದಿಸಿದರೆ ನಿರ್ಬಂಧ ಇಲ್ಲ :
ಅಧಿಕೃತ ಮಾರುಕಟ್ಟೆಯಿಂದ ಫೋನ್ ಖರೀದಿಸಿದ ಬಳಕೆದಾರರು, ಅವರ ಫೋನ್ ಅನ್ನು ಮರುಪ್ರಾರಂಭಿಸಬಹುದು. ನಿಷೇಧಿತ ದೇಶಗಳ ಪಟ್ಟಿಯಲ್ಲಿ, ಕ್ಯೂಬಾದಂತಹ ದೇಶದಲ್ಲಿ ಶಿಯೋಮಿಯ ಸಕ್ರಿಯ ಸ್ಮಾರ್ಟ್ಫೋನ್ಗಳಲ್ಲಿ 15% ವರೆಗೆ ಇವೆ.
ಶಿಯೋಮಿ ಪ್ರಸ್ತುತ ನಡೆಯುತ್ತಿರುವ ತನಿಖೆಯು ಪ್ರಮುಖ ಫಲಿತಾಂಶಗಳನ್ನು ನೀಡಿದೆ ಎಂದು ಹೇಳುತ್ತದೆ. ಆದರೂ ಪಡೆದ ಫಲಿತಾಂಶಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಾಗಿಲ್ಲ. ಈ ದೇಶಗಳಲ್ಲಿ ಅಧಿಕೃತ ಮಾರುಕಟ್ಟೆಯಿಂದ ಖರೀದಿಸಿದ ಮೊಬೈಲ್ ಬಳಕೆದಾರರಿಗೆ (Mobile users), ಫೋನ್ ಕಾರ್ಯನಿರ್ವಹಿಸಲು ಸಂಪೂರ್ಣ ಅಕ್ಸೆಸ್ ನೀಡಲಾಗಿದೆ. ಆದರೆ ಅಧಿಕೃತ ಮಾರುಕಟ್ಟೆಯ ಹೊರಗಿನಿಂದ ಮೊಬೈಲ್ ಖರೀದಿಸಿದವರನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ : Earth Realigns With Neptune: ಇಂದು ಆಗಸ ಅದ್ಭುತ ಖಗೋಳ ಘಟನೆಗೆ ಸಾಕ್ಷಿಯಾಗಲಿದೆ, ಭೂಮಿಯ ತೀರಾ ಹತ್ತಿರಕ್ಕೆ ಬರಲಿದೆ ಈ ನಿಗೂಢ ಗ್ರಹ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.