ಎಲ್ಲರಿಗೂ ಇಷ್ಟವಾಗುವ Smartphone ಬಿಡುಗಡೆ ಮಾಡುತ್ತಿದೆ Xiaomi, ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ

ಮಾಡೆಲ್ ನಂಬರ್  2109119BC ಯೊಂದಿಗೆ ಹೊಸ Xiaomi ಫೋನ್ TENAA ನಲ್ಲಿ ಕಾಣಿಸಿಕೊಂಡಿದೆ. Xiaomi Civi Pro ಆಗಿರಬಹುದಾದ ಈ ಮಾಡೆಲ್ ಅನ್ನು,  Xiaomi Civi ಗೆ ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಪಟ್ಟಿ ಮಾಡಲಾಗಿದೆ. 

Written by - Ranjitha R K | Last Updated : Oct 5, 2021, 02:41 PM IST
  • ಶಿಯೋಮಿ ಶೀಘ್ರದಲ್ಲೇ Xiaomi Civi Pro ಅನ್ನು ಬಿಡುಗಡೆ ಮಾಡಬಹುದು.
  • ಸಾಧನವು 6.55-ಇಂಚಿನ OLED ಸ್ಕ್ರೀನ್ ಹೊಂದಿರುತ್ತದೆ.
  • Xiaomi Civi Pro ನಲ್ಲಿ 4,400mAh ಬ್ಯಾಟರಿಯನ್ನು ನೀಡಲಾಗಿದೆ
ಎಲ್ಲರಿಗೂ ಇಷ್ಟವಾಗುವ Smartphone ಬಿಡುಗಡೆ ಮಾಡುತ್ತಿದೆ Xiaomi, ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ  title=
ಶಿಯೋಮಿ ಶೀಘ್ರದಲ್ಲೇ Xiaomi Civi Pro ಅನ್ನು ಬಿಡುಗಡೆ ಮಾಡಬಹುದು. (photo zeenews)

ನವದೆಹಲಿ : Xiaomi Civi ಸ್ಮಾರ್ಟ್‌ಫೋನ್ ಕಳೆದ ವಾರ ಚೀನಾದಲ್ಲಿ 6.55 ಇಂಚಿನ ಫುಲ್-HD+ ಡಿಸ್‌ಪ್ಲೇ ಮತ್ತು ಸ್ನಾಪ್‌ಡ್ರಾಗನ್ 778G SoC ಯೊಂದಿಗೆ ಬಿಡುಗಡೆಯಾಯಿತು. ಮಾಡೆಲ್ ನಂಬರ್ 2109119BC ಯೊಂದಿಗೆ ಹೊಸ Xiaomi ಸ್ಮಾರ್ಟ್ಫೋನ್ ನ ಸ್ಪೆಸಿಫಿಕೆಶನ್ Xiaomi Civi ನಂತೆಯೇ ಕಂಡು ಬಂದಿದೆ.  ಈ ಹೊಸ ಹ್ಯಾಂಡ್‌ಸೆಟ್ ಅನ್ನು Xiaomi Civi Pro ಎಂದು ಕರೆಯಬಹದು ಎಂದು ಅಂದಾಜಿಸಲಾಗಿದೆ.  ಈ ಫೋನ್ 6.55 ಇಂಚಿನ OLED ಸ್ಕ್ರೀನ್ ಮತ್ತು 4,400mAh ಬ್ಯಾಟರಿಯನ್ನು ಹೊಂದಿದೆ. 

ಮಾಡೆಲ್ ನಂಬರ್  2109119BC ಯೊಂದಿಗೆ ಹೊಸ Xiaomi ಫೋನ್ TENAA ನಲ್ಲಿ ಕಾಣಿಸಿಕೊಂಡಿದೆ. Xiaomi Civi Pro ಆಗಿರಬಹುದಾದ ಈ ಮಾಡೆಲ್ ಅನ್ನು,  Xiaomi Civi ಗೆ ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಪಟ್ಟಿ ಮಾಡಲಾಗಿದೆ. ಹ್ಯಾಂಡ್‌ಸೆಟ್  6.55 ಇಂಚಿನ OLED ಸ್ಕ್ರೀನ್‌ನೊಂದಿಗೆ 3,840x2,160 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 2.4GHz ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಪಟ್ಟಿ ಮಾಡಲಾಗಿದೆ. ಇದಲ್ಲದೆ, ಇದು 6GB, 8GB, 12GB, ಮತ್ತು 16GB RAM ಆಯ್ಕೆಗಳೊಂದಿಗೆ 64GB, 128GB, 256GB, ಮತ್ತು 512GB ಇನ್ ಬಿಲ್ಟ್ ಸ್ಟೋರೇಜ್ ಆಯ್ಕೆಗಳೊಂದಿಗೆ ಬರುತ್ತದೆ. ಇದರ ಪ್ರಕಾರ, ಹ್ಯಾಂಡ್‌ಸೆಟ್ 4,400mAh ಬ್ಯಾಟರಿಯನ್ನು ಹೊಂದಿದೆ.

ಇದನ್ನೂ  ಓದಿ : Facebook, WhatsApp and Instagram Server Down: ಬರೀ 1 ಗಂಟೆ ಫೇಸ್​ಬುಕ್​, ವಾಟ್ಸ್​ಅಪ್ ಇನ್​ಸ್ಟಾಗ್ರಾಮ್​ ಸರ್ವರ್​ ಬಂದ್ ಆಗಿದ್ರಿಂದ ನಷ್ಟ ಎಷ್ಟಾಗಿದೆ ಗೊತ್ತಾ?

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಿಲ್ಲ Xiaomi Civi :
ಆದಾಗ್ಯೂ, Xiaomi ನ ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ವಾಂಗ್ ಹುವಾ Xiaomi Civi Pro ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಈ ಫೋನ್ ಬಗ್ಗೆ ತಾನು ಕೇಳಿಯೇ ಇಲ್ಲ ಎಂದಿದ್ದಾರೆ.  Xiaomi Civi ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಚೀನಾದ ಸ್ಮಾರ್ಟ್‌ಫೋನ್ ತಯಾರಕರು ಈ ಮೊದಲೇ ದೃಢಪಡಿಸಿದ್ದರು. ಶಿಯೋಮಿ ಸಿವಿ CNY 2,599  (ಸುಮಾರು  29,600 ರೂ) ನ ಆರಂಭಿಕ ಬೆಲೆಯೊಂದಿಗೆ ಅನಾವರಣಗೊಂಡಿದೆ. ಇದನ್ನು ನೀಲಿ, ಕಪ್ಪು ಮತ್ತು ಗುಲಾಬಿ ಬಣ್ಣದ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ.

Xiaomi Civi MIUI 12.5  ರನ್ ಮಾಡುತ್ತದೆ. ಇದು 6.55-ಇಂಚಿನ ಫುಲ್-ಎಚ್‌ಡಿ+ ಒಎಲ್‌ಇಡಿ 10-ಬಿಟ್ ಡಿಸ್‌ಪ್ಲೇ ಅನ್ನು 3D ಕರ್ವ್ಡ್ ಗ್ಲಾಸ್ ಮತ್ತು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಫೋನ್ ಸ್ನಾಪ್‌ಡ್ರಾಗನ್ 778 ಜಿ ಎಸ್‌ಒಸಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು 12 GB RAM ಮತ್ತು 256GB UFS 3.1 ಸ್ಟೋರೇಜ್‌ನೊಂದಿಗೆ ಬರುತ್ತದೆ. ಹ್ಯಾಂಡ್‌ಸೆಟ್‌ನ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ 64 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ನೀಡಲಾಗಿದೆ. 

ಇದನ್ನೂ  ಓದಿ : ಜಾಗತಿಕವಾಗಿ ಸ್ಥಗಿತಗೊಂಡ WhatsApp,Instagram ಮತ್ತು Facebook

Xiaomi ಸ್ವತಃ Xiaomi Civi Pro ಬಿಡುಗಡೆ ಅಥವಾ ವೈಶಿಷ್ಟ್ಯಗಳ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News