ನವದೆಹಲಿ : xiaomi fitness tracker Mi Band 6 ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಮಾರ್ಚ್ 29 ರಂದು Mi Band 6 ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ. ಈ ಹೊಸ ಫಿಟ್‌ನೆಸ್ ಟ್ರ್ಯಾಕರ್ ಹೊಸ ವೈಶಿಷ್ಟ್ಯಗಳು ಮತ್ತು ಅಪ್ಡೇಟ್ ಗಳನ್ನು ಒಳಗೊಂಡಿದೆ ಎನ್ನಲಾಗಿದೆ.
ಅದೇ ದಿನ ಕಂಪನಿಯು MI 11 Pro, MI 11 Ultra ಮತ್ತು ಹೊಸ Mi ಫೋನ್‌ಗಳನ್ನು ಸಹ ಪ್ರಕಟಿಸಲಿದೆ. ಟ್ವೀಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಂಪನಿ "ಹೊಚ್ಚ ಹೊಸ ಹ್ಯಾಶ್‌ಟ್ಯಾಗ್ Mi smart band 6 ಗೆ ನೀವು ಸಿದ್ಧರಿದ್ದೀರಾ? ವ್ಯಾಯಾಮಕ್ಕಾಗಿ (exercise) ಹೊಸ ಯೋಜನೆಯನ್ನು ರೂಪಿಸುವ ಸಮಯ ಬಂದಿದೆ ಎಂದು ಬರೆದುಕೊಂಡಿದೆ. ಮಾರ್ಚ್ 29 ರಂದು ಭಾರತೀಯ ಸಮಯ 19: 30 ಕ್ಕೆ xiaomi 2021 ರ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಲಿದ್ದು, ಲಾಂಚ್ ಆಗಲಿರುವ ಎಲ್ಲಾ ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳಿ ಎಂದು ಹೇಳಿದೆ.
ಮಿ ಬ್ಯಾಂಡ್ 6 ವೈಶಿಷ್ಟ್ಯಗಳು :
ಈ ಹೊಸ ಫಿಟ್‌ನೆಸ್ ಟ್ರ್ಯಾಕರ್ ಹೊಸ ವೈಶಿಷ್ಟ್ಯಗಳು ಮತ್ತು ಅಪ್ಡೇಟ್ ಗಳನ್ನು (Update) ಒಳಗೊಂಡಿದೆ ಎಂದು ಹೇಳಲಾಗುತ್ತದೆ. ಆದರೆ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಿಲ್ಲದಿರಬಹುದು. ಕಳೆದ ವಾರ ಹೊರಬಂದಿರುವ ಫೋಟೋವೊಂದರಲ್ಲಿ ಮಿ ಬ್ಯಾಂಡ್‌ನ ವಿನ್ಯಾಸವು (Design) ಅದರ ಹಿಂದಿನ ಮಾದರಿಯನ್ನೇ ಹೋಲುತ್ತದೆ ಎನ್ನುವುದನ್ನು ಸಾಬೀತುಪಡಿಸಿದೆ. ಬ್ಯಾಂಡ್ 5 ನಂತೆಯೇ ಇದರಲ್ಲೂ ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಬಲ್ ಇರಲಿದೆ .
ಆದರೆ ಬ್ಯಾಂಡ್‌ನ ಸ್ಕ್ರೀನ್ ನಲ್ಲಿ ಬದಲಾವಣೆಗಳು ಇರಬಹುದು ಎನ್ನಲಾಗಿದೆ. ಅಲ್ಲದೆ ಇದರ ಗಾತ್ರವು ಬ್ಯಾಂಡ್ 5 ಗಿಂತ ದೊಡ್ಡದಾಗಿರಲಿದೆ ಎನ್ನಲಾಗಿದೆ. ಇದು ಉತ್ತಮ ಟ್ರ್ಯಾಕಿಂಗ್ (Tracking) ಸೌಲಭ್ಯವನ್ನು ಹೊಂದಿದೆ. ಮತ್ತೊಂದು ವಿಶೇಷವೆಂದರೆ Mi Band 6 ರಲ್ಲಿ SOP 2 ಮಾನಿಟರಿಂಗ್ ಒಳಗೊಂಡಿರುವ ಸಾಧ್ಯತೆಗಳಿವೆ.
ಇದನ್ನೂ ಓದಿ : ಮೊಬೈಲ್ ಗೇಮ್ ಪ್ರಿಯರಿಗೆ ಸಿಹಿಸುದ್ದಿ ಶೀಘ್ರವೇ ಲಾಂಚ್ ಆಗಲಿದೆ PUBG
Mi Band 6 ನ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಅಂದಹಾಗೆ, ಫ್ಲಿಪ್‌ಕಾರ್ಟ್‌ನಲ್ಲಿ(Flipkart) MI smart band 5 ರ ಬೆಲೆ 2,999 ರೂ. ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.