ZTE Blade L9 Smartphone: 7 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ..!

ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್ 2000mAH ಬ್ಯಾಟರಿ, 5 ಇಂಚಿನ ಡಿಸ್ಪ್ಲೇ ಮತ್ತು ಉತ್ತಮ ಕ್ಯಾಮೆರಾವನ್ನು ಹೊಂದಿದೆ.

Last Updated : Nov 9, 2021, 10:33 AM IST
  • ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಟ್ಟ ZTE Blade L9 ಸ್ಮಾರ್ಟ್‌ಫೋನ್
  • ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಅತ್ಯಂತ ಕಡಿಮೆ ಬೆಲೆಯ ಫೋನ್
  • ಕಪ್ಪು ಮತ್ತು ನೀಲಿ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್
ZTE Blade L9 Smartphone: 7 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ..! title=
ZTE Blade L9 ಸ್ಮಾರ್ಟ್‌ಫೋನ್

ನವದೆಹಲಿ: ಖ್ಯಾತ ಮೊಬೈಲ್ ತಯಾರಕ ಕಂಪನಿ ZTE ಮೆಕ್ಸಿಕೋದಲ್ಲಿ ZTE Blade L9 ಹೆಸರಿನ ಸ್ಮಾರ್ಟ್‌ಫೋನ್(ZTE Blade L9 Smartphone) ಬಿಡುಗಡೆ ಮಾಡಿದೆ. ಇದು ಕಡಿಮೆ ರೆಸಲ್ಯೂಶನ್ ಡಿಸ್ಪ್ಲೇ, ಯುನಿಸಾಕ್ ಚಿಪ್, ಆಂಡ್ರಾಯ್ಡ್ ಗೋ ಎಡಿಷನ್ ಓಎಸ್ ಮತ್ತು ಪವರ್ ಫುಲ್ ಬ್ಯಾಟರಿಯಂತಹ ವಿಶೇಷಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್ 2000mAH ಬ್ಯಾಟರಿ, 5 ಇಂಚಿನ ಡಿಸ್ಪ್ಲೇ ಮತ್ತು ಉತ್ತಮ ಕ್ಯಾಮೆರಾವನ್ನು ಹೊಂದಿದೆ. ZTE Blade L9ನ ಕ್ಯಾಮೆರಾ ಮತ್ತು ಉತ್ತಮ ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ZTE Blade L9ನ ವೈಶಿಷ್ಟ್ಯಗಳು

ZTE Blade L9 ಸ್ಮಾರ್ಟ್‌ಫೋನ್ 960 x 480 ಪಿಕ್ಸೆಲ್ ರೆಸಲ್ಯೂಶನ್ ಮತ್ತು 18:9 ಆಕಾರ ಅನುಪಾತ(Aspect Ratio)ವನ್ನು ಬೆಂಬಲಿಸುವ 5-ಇಂಚಿನ TFT ಡಿಸ್ಪ್ಲೇಯನ್ನು ಹೊಂದಿದೆ. ಇದು 1GB RAM, 32 GB ಸ್ಟೋರೇಜ್ ಮತ್ತು ಹೆಚ್ಚುವರಿ ಸ್ಟೋರೇಜ್ ಸಪೋರ್ಟ್ ಗಾಗಿ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಹೊಂದಿದೆ. ಇದು Android 11 Go ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ZTE Blade L9ನಲ್ಲಿರುವ SC7731E Unisoc ಚಿಪ್ ನಿಂದ ಫೋನ್ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಇದು 1.3GHz ಕ್ವಾಡ್-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ.

ಇದನ್ನೂ ಓದಿ: Amazon Offer! ಕೇವಲ ಮೂರು ಸಾವಿರ ರೂಪಾಯಿಗಳಿಗೆ ಖರೀದಿಸಿ Xiaomi 5G Smartphone

ZTE Blade L9ನ ಕ್ಯಾಮೆರಾ

ZTE Blade L9 ಸ್ಮಾರ್ಟ್‌ಫೋನ್ ಮೇಲ್ಭಾಗದ ಅಂಚಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆ(Video Call)ಗಳನ್ನು ಸೆರೆಹಿಡಿಯಲು 5-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಇದು LED ಫ್ಲಾಷ್ ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಹ್ಯಾಂಡ್‌ಸೆಟ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗೆ ಯಾವುದೇ ಬೆಂಬಲವಿಲ್ಲ. ಫೋನ್‌ನ ಮೂಲೆಯಲ್ಲಿ ಮೈಕ್ರೋ ಯುಎಸ್‌ಬಿ ಪೋರ್ಟ್ ಇದೆ ಮತ್ತು ಅದರ ಬಲಭಾಗದಲ್ಲಿ ವಾಲ್ಯೂಮ್ ಮತ್ತು ಪವರ್‌ಗಾಗಿ ಬಟನ್‌ಗಳಿವೆ. ಫೋನ್‌ನ ಮೇಲ್ಭಾಗದ ತುದಿಯಲ್ಲಿ 3.5 ಎಂಎಂ ಆಡಿಯೊ ಜಾಕ್ ಇದೆ. ಇದು 2,000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದು ಡ್ಯುಯಲ್ ಸಿಮ್, 3G, ವೈ-ಫೈ ಮತ್ತು ಬ್ಲೂಟೂತ್ 4.2 ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ನೀಡುತ್ತದೆ.

ZTE Blade L9ನ ಬೆಲೆ

ಕಪ್ಪು ಮತ್ತು ನೀಲಿ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುವ  ZTE Blade L9 ಸ್ಮಾರ್ಟ್‌ಫೋನ್ ಮೆಕ್ಸಿಕೋದಲ್ಲಿ MXN 1,699 (Rs 6,133) ಬೆಲೆ ಇದೆ.

ಇದನ್ನೂ ಓದಿ: APPLE IPHONE SE 3: ಹೊಸ ಮಾಡೆಲ್ ನೊಂದಿಗೆ ಬರಲಿರುವ Apple

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News