ಶೀಘ್ರದಲ್ಲೇ KSRTC ಬಸ್ ಟಿಕೆಟ್ ದರ ಪರಿಷ್ಕಣೆ ಸಾಧ್ಯತೆ?

ತರಕಾರಿ, ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ಜನ ಸಾಮಾನ್ಯರ ಜೇಬಿಗೆ ಈಗಾಗಲೇ ಕತ್ತರಿ ಬಿದ್ದಾಗಿದೆ. ಈ ದುಬಾರಿ ದುನಿಯಾದಲ್ಲಿ ರಾಜ್ಯದ ಜನರಿಗೆ ಮತ್ತೊಂದು ಶಾಕ್‌ ಕಾದಿದೆ. ರಾಜ್ಯದಲ್ಲಿ ಇದೀಗ ಬಸ್ ಟಿಕೆಟ್ ದರ ಏರಿಕೆ ಸರದಿ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಹೊತ್ತಿನಲ್ಲಿ ಬಸ್ ದರ ಏರಿಕೆ ಬರೆ ಸಾರ್ವಜನಿಕರ ಮೇಲೆ ಬೀಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ. ಬರೋಬ್ಬರಿ 38% ರಷ್ಟು ಟಿಕೆಟ್ ದರ ಏರಿಕೆಯ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಡಲಾಗಿದೆ. ಬಸ್ ಟಿಕೆಟ್‌ ದರ ಪರಿಷ್ಕರಣೆಗೆ ಕೆಎಸ್ಆರ್‌ಟಿಸಿ ಪಟ್ಟು ಹಿಡಿದಿದೆ. ಸದ್ಯ ಟಿಕೆಟ್ ದರ ಪರಿಷ್ಕರಣೆ ಚೆಂಡು ಸಿಎಂ ಬಸವರಾಜ್ ಬೊಮ್ಮಾಯಿ ಅಂಗಳದಲ್ಲಿದೆ. ಒಂದೆರಡು ದಿನಗಳಲ್ಲಿ ಕೆಎಸ್ಆರ್‌ಟಿಸಿ ಟಿಕೆಟ್ ರೇಟ್ ಹೆಚ್ಚಳ ಬಹುತೇಕ ಫಿಕ್ಸ್ ಎಂದು ಹೇಳಲಾಗುತ್ತಿದೆ.

  • Zee Media Bureau
  • Jul 7, 2022, 06:32 PM IST

ಬೆಂಗಳೂರು: ತರಕಾರಿ, ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ಜನ ಸಾಮಾನ್ಯರ ಜೇಬಿಗೆ ಈಗಾಗಲೇ ಕತ್ತರಿ ಬಿದ್ದಾಗಿದೆ. ಈ ದುಬಾರಿ ದುನಿಯಾದಲ್ಲಿ ರಾಜ್ಯದ ಜನರಿಗೆ ಮತ್ತೊಂದು ಶಾಕ್‌ ಕಾದಿದೆ. ರಾಜ್ಯದಲ್ಲಿ ಇದೀಗ ಬಸ್ ಟಿಕೆಟ್ ದರ ಏರಿಕೆ ಸರದಿ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಹೊತ್ತಿನಲ್ಲಿ ಬಸ್ ದರ ಏರಿಕೆ ಬರೆ ಸಾರ್ವಜನಿಕರ ಮೇಲೆ ಬೀಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ. ಬರೋಬ್ಬರಿ 38% ರಷ್ಟು ಟಿಕೆಟ್ ದರ ಏರಿಕೆಯ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಡಲಾಗಿದೆ. ಬಸ್ ಟಿಕೆಟ್‌ ದರ ಪರಿಷ್ಕರಣೆಗೆ ಕೆಎಸ್ಆರ್‌ಟಿಸಿ ಪಟ್ಟು ಹಿಡಿದಿದೆ. ಸದ್ಯ ಟಿಕೆಟ್ ದರ ಪರಿಷ್ಕರಣೆ ಚೆಂಡು ಸಿಎಂ ಬಸವರಾಜ್ ಬೊಮ್ಮಾಯಿ ಅಂಗಳದಲ್ಲಿದೆ. ಒಂದೆರಡು ದಿನಗಳಲ್ಲಿ ಕೆಎಸ್ಆರ್‌ಟಿಸಿ ಟಿಕೆಟ್ ರೇಟ್ ಹೆಚ್ಚಳ ಬಹುತೇಕ ಫಿಕ್ಸ್ ಎಂದು ಹೇಳಲಾಗುತ್ತಿದೆ.

Trending News