ದಸರೆಗೆ ಬಂದಿರೋ ಯಾವ ಆನೆ ತೂಕ ಎಷ್ಟಿದೆ ಗೊತ್ತಾ..?

  • Zee Media Bureau
  • Aug 11, 2022, 04:12 PM IST


ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2022ಕ್ಕೆ ಆನೆಗಳ ಮೊದಲ ತಂಡ ಈಗಾಗಲೇ ಅರಮನೆಗೆ ಬಂದಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ದಸರಾ ಗಜಪಡೆಗೆ ತೂಕ ಹಾಕುವ ಪ್ರಕ್ರಿಯೆ ನಡೆಯಿತು. ಈ ಬಾರಿಯೂ ಮಾಜಿ ಕ್ಯಾಪ್ಟನ್ ಅರ್ಜನನೇ ಬಲಶಾಲಿಯಾಗಿದ್ದಾನೆ. ಅರ್ಜುನ-5660 ಕೆಜಿ, ಕಾವೇರಿ‌-3100 ಕೆಜಿ, ಕ್ಯಾಪ್ಟನ್ ಅಭಿಮನ್ಯು-4770 ಕೆಜಿ, ಮಹೇಂದ್ರ-4250, ಲಕ್ಷ್ಮೀ  2920, ಚೈತ್ರ 3050, ಭೀಮ 3920, ಧನಂಜಯ 4810, ಗೋಪಾಲಸ್ವಾಮಿ 5140 ಕೆಜಿ ತೂಕ ಹೊಂದಿವೆ

Trending News