ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ

  • Zee Media Bureau
  • Apr 17, 2023, 12:54 PM IST

ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆ ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 1100 ರೂಪಾಯಿ ಮತ್ತು ಬೆಳ್ಳಿಯ ಬೆಲೆ 1500 ರೂಪಾಯಿಗಳಷ್ಟು ಕಡಿಮೆಯಾಗಿದೆ. ಇದರೊಂದಿಗೆ ಪ್ರತಿ ಹತ್ತು ಗ್ರಾಂ ಚಿನ್ನ 60,200 ರೂ.ಗೆ ತಲುಪಿದೆ. ಅದೇ ಸಮಯದಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 75,500 ರೂ.ಗೆ ತಲುಪಿದೆ. ತಜ್ಞರ ಪ್ರಕಾರ, ಒಂದು ವಾರದ ಹಿಂದೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದವು. ಆದರೆ ಜಾಗತಿಕ ಆರ್ಥಿಕ ಹಿಂಜರಿತ, ಹಣದುಬ್ಬರ ಮತ್ತು ಡಾಲರ್ ಸೂಚ್ಯಂಕ ಇವೆರಡರ ಬೇಡಿಕೆಯ ಮೇಲೆ ಪ್ರಭಾವ ಬೀರಿದೆ. ಇದರಿಂದಾಗಿ ಬೇಡಿಕೆ ಕಡಿಮೆಯಾದ ಕಾರಣ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಬೆಲೆಗಳಲ್ಲಿನ ಈ ಹಂತದ ಕಡಿತವು ತಾತ್ಕಾಲಿಕವಾಗಿದೆ ಮತ್ತು ಶೀಘ್ರದಲ್ಲೇ ಅವುಗಳ ಬೆಲೆಗಳು ಮತ್ತೆ ಏರಿಕೆಯಾಗುತ್ತವೆ. ಹೀಗಿರುವಾಗ ಚಿನ್ನ, ಬೆಳ್ಳಿ ಖರೀದಿಸುವ ಯೋಚನೆಯಲ್ಲಿದ್ದವರಿಗೆ ಇದೊಂದು ಸುವರ್ಣಾವಕಾಶ.

Trending News