ಆಲೂಗೆಡ್ಡೆ ಚಿಪ್ಸ್ ತಿನ್ನುವ ಬಹುತೇಕರು ಅದರ ಪ್ಯಾಕೆಟ್ ನೋಡಿ ಚಿಪ್ಸ್ಗಿಂತ ಅದರಲ್ಲಿರುವ ಗಾಳಿಯೇ ಜಾಸ್ತಿ ಇದೆ ಎಂದು ಗೊಣಗಿಕೊಂಡಿರುತ್ತಾರೆ. ಆದರೂ, ಚಿಪ್ಸ್ ತಿನ್ನುವುದರಲ್ಲಿ ಯಾರೂ ಹಿಂದಿ ಬಿದ್ದಿಲ್ಲ. ಹೀಗಾಗಿಯೇ ಅನೇಕ ಬ್ರ್ಯಾಂಡ್ ಹೆಸರಿನ ಚಿಪ್ಸ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.ಅದರಲ್ಲಿ ಮುಂಚೂಣಿಯಲ್ಲಿರುವ ಬ್ರ್ಯಾಂಡ್ ಅಂದರೆ 'ಲೇಸ್'. ಪ್ರಮುಖ ಆಲೂಗೆಡ್ಡೆ ಚಿಪ್ಸ್ ಬ್ರ್ಯಾಂಡ್ 'ಲೇಸ್' ನ ಪೋಷಕ ಕಂಪನಿ ಪೆಪ್ಸಿಕೋಗೆ ತ್ರಿಸ್ಸೂರ್ ಲೀಗಲ್ ಮೆಟ್ರೊಲಜಿ ಆಫೀಸ್ 85 ಸಾವಿರ ರೂಪಾಯಿ ದಂಡ ವಿಧಿಸಿದೆ.