ಉರಿಗೌಡ, ನಂಜೇಗೌಡ ಹೆಸರು ಕೇವಲ ಕಾಲ್ಪನಿಕ ಕಥೆ. ಮುಂದಿನ ಚುನಾವಣೆಗಾಗಿ ಇದು ಬಿಜೆಪಿಯವರ ಗಿಮಿಕ್ ಅಷ್ಟೇ. ಕಮಲ ಕಲಿಗಳ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ. ಚುನಾವಣೆ ಹತ್ತಿರ ಬಂದಂತೆ ಅವರಿಗೆ ಇದು ನೆನಪಾಗುತ್ತದೆ. ಜಾತಿ ರಾಜಕಾರಣಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇಂತಹ ರಾಜಕೀಯಕ್ಕೆ ರಾಜ್ಯದ ಜನರು ಪಾಠ ಕಲಿಸಬೇಕು ಎಂದು ತುಮಕೂರಿನ ಜೆಡಿಎಸ್ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದ್ರು.