ಬಿಜೆಪಿಯವ್ರು ಎಚ್ಡಿಕೆ ಸರ್ಕಾರ ಬೀಳಿಸಿದ್ರು. ನಮ್ಮಿಂದ 14 ಮಂದಿ, ಜೆಡಿಎಸ್ನಿಂದ 3 ಜನ ಹೋದ್ರು. ಕುಮಾರಸ್ವಾಮಿ ಆಗೇನು ಹೇಳಲಿಲ್ಲ.. ಈಗ ಸಿದ್ದರಾಮಯ್ಯ ಕಳಿಸಿದ್ರು ಅಂತಿದ್ದಾನೆ. ಈಗೇನು ಹೇಳ್ತಾನೆ ಕುಮಾರಸ್ವಾಮಿ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಶಾಸಕರ ಕಷ್ಟ ಸುಖ ಕೇಳಿದ್ರೆ ಸರ್ಕಾರ ಬೀಳುತ್ತಿರಲಿಲ್ಲ. ಅವರೇ ಎರಡೋ ಮೂರೋ ವರ್ಷ ಸಿಎಂ ಆಗಿ ಮುಂದುವರಿಯುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.