ಮಧುಮೇಹ ರೋಗಿಗಳು ಸಿಹಿ ತಿಂಡಿಯನ್ನು ತಿನ್ನುವಂತಿಲ್ಲ. ಸಿಹಿ ತಿಂಡಿಗಳು ಮಧುಮೇಹ ರೋಗಿಗಳಿಗೆ ವಿಷದಂತೆ ಕೆಲಸ ಮಾಡುತ್ತದೆ. ಏಕೆಂದರೆ ಮಧುಮೇಹಿಗಳು ರಕ್ತದ ಸಕ್ಕರೆ ಹೆಚ್ಚಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಆದರೆ ಸಿಹಿ ತಿಂಡಿಗಳ ಸೇವನೆಯಿಂದ ರಕ್ತದ ಸಕ್ಕರೆ ಹೆಚ್ಚಾಗುವ ಭಯವಿರುತ್ತದೆ. ರಕ್ತದ ಸಕ್ಕರೆ ಹೆಚ್ಚಾದರೆ ಆರೋಗ್ಯವನ್ನು ಹದಗೆಡಿಸುತ್ತದೆ. ಯಾರ ದೇಹದಲ್ಲಿ ರಕ್ತದ ಸಕ್ಕರೆ ಅಧಿಕವಾಗಿರುತ್ತದೆಯೋ ಅಂಥಹ ರೋಗಿಗಳನ್ನು ಶುಗರ್ ಪೇಷೆಂಟ್ ಎಂದೂ ಕರೆಯುವುದು ಇದೇ ಕಾರಣಕ್ಕೆ.