ಸಾಧಿಸುವ ಛಲವೊಂದಿದ್ದರೆ ಸಾಧಕನ ಉತ್ಸಾಹದ ಮುಂದೆ ಸಾಗರವೂ ಸಣ್ಣ ಕೆರೆಯಂತೆ, ಅಸಾಧ್ಯ ಎನ್ನುವುದು ಅಂತವರಿಗೆ ಹಿನ್ನಡೆಯಲ್ಲ ಬದಲಿಗೆ ಸವಾಲಿನ ಥ್ರಿಲ್. ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಆಗದ ನಾವು ನೆಪ ಹೇಳುತ್ತಾ, ನಮ್ಮ ಸೋಮಾರಿತನಕ್ಕೆ ಮತ್ತಾವುದೋ ಸಮರ್ಥನೆ ಕೊಟ್ಟುಕೊಳ್ಳುತ್ತ ಜೀವನ ದೂಡುತ್ತೇವೆ. ಆದರೆ ನೆಪ ಹೇಳುವುದನ್ನು ಬಿಟ್ಟು ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುವೆ ಎಂಬ ಛಲದಂಕ ಮಲ್ಲರು ನಮ್ಮ ನಡುವೆ ಹಲವರಿದ್ದಾರೆ. ಅಲ್ಲದೆ ಅಂಗ ವೈಕಲ್ಯವನ್ನು ಮೆಟ್ಟಿ ನಿಂತು ಗೆದ್ದ ಧೀರರ ಹಲವು ಸಕ್ಸಸ್ ಸ್ಟೋರೀಸ್ ಕೇಳ್ತಿರ್ತೇವೆ. ಅಂತದೇ ಒಂದು ವಿಕಲಾಂಗವನ್ನ ಮೀರಿ ಬೆಳೆದ, ಊರು ಮೆಚ್ಚಿದ ಅಣ್ಣ ತಂಗಿಯರ ಯಶೋಗಾಥೆ ಇಲ್ಲಿದೆ ನೋಡಿ.