ದುರ್ಗಾ ದೇವಿಗೆ ನಾಲಿಗೆ ಕತ್ತರಿಸಿ ಅರ್ಪಿಸಿದ ಭಕ್ತ..! ಕತ್ತರಿಸಿದ ನಾಲಿಗೆಗೆ ಮರುಜೀವ... ಅದ್ಭುತ ಪವಾಡ..

Devotee cut his tongue : ನವರಾತ್ರಿಯ ಸಮಯದಲ್ಲಿ ದುರ್ಗೆಯ 9 ಅವತಾರಗಳನ್ನು ಪೂಜಿಸಲಾಗುತ್ತದೆ. ದೇವಿಗೆ ಇಷ್ಟವಾದ ನೈವೇದ್ಯವನ್ನು ಅರ್ಪಿಸಿ, ಧೂಪವನ್ನು ಬೆಳಗಿ ಮಾತೆಯ ಕೃಪೆಗೆ ಭಕ್ತರು ಪಾತ್ರರಾಗುತ್ತಾರೆ.. ಆದರೆ, ಮಧ್ಯಪ್ರದೇಶದ ರತ್ನನಗರ ದೇವಸ್ಥಾನದಲ್ಲಿ ಭಕ್ತರೊಬ್ಬರು ತಮ್ಮ ನಾಲಿಗೆಯನ್ನು ಕತ್ತರಿಸಿ ದೇವಿಗೆ ಅರ್ಪಿಸಿದ್ದಾರೆ.

Written by - Krishna N K | Last Updated : Oct 10, 2024, 07:10 PM IST
    • ನವರಾತ್ರಿಯ ಸಮಯದಲ್ಲಿ ದುರ್ಗೆಯ 9 ಅವತಾರಗಳನ್ನು ಪೂಜಿಸಲಾಗುತ್ತದೆ.
    • ದೇವಿಗೆ ಇಷ್ಟವಾದ ನೈವೇದ್ಯವನ್ನು ಅರ್ಪಿಸಿ, ಧೂಪವನ್ನು ಬೆಳಗಲಾಗುತ್ತದೆ.
    • ಭಕ್ತರೊಬ್ಬರು ತಮ್ಮ ನಾಲಿಗೆಯನ್ನು ಕತ್ತರಿಸಿ ದೇವಿಗೆ ಅರ್ಪಿಸಿದ್ದಾರೆ.
ದುರ್ಗಾ ದೇವಿಗೆ ನಾಲಿಗೆ ಕತ್ತರಿಸಿ ಅರ್ಪಿಸಿದ ಭಕ್ತ..! ಕತ್ತರಿಸಿದ ನಾಲಿಗೆಗೆ ಮರುಜೀವ... ಅದ್ಭುತ ಪವಾಡ.. title=

Viral News : ದಸರಾ ಹಬ್ಬದಂದು 9 ದಿನಗಳ ಕಾಲ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ ಆಶ್ವಿಯುಜ ಮಾಸದಲ್ಲಿ ಈ ಪೂಜೆ ನಡೆಯುತ್ತದೆ. ಈ ವರ್ಷ ಅಕ್ಟೋಬರ್ 3 ರಂದು ನವರಾತ್ರಿ ಆಚರಣೆಗಳು ಪ್ರಾರಂಭವಾದವು.. ನಾಳೆ ಅದ್ಧೂರಿಯಾಗಿ ದಸರಾ ಉತ್ಸವ ಮೈಸೂರಿನಲ್ಲಿ ನಡೆಯಲಿದೆ..   

ಇನ್ನು ದೇಶದೆಲ್ಲೆಡೆ ಈ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಭಕ್ತರೊಬ್ಬರು ದೇವಿಗೆ ಅರ್ಪಿಸಿದ ನೈವೇದ್ಯ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಹೌದು, ರಾಮ್ ಸರಣ್ ಎಂಬ ಭಕ್ತ ತನ್ನ ನಾಲಿಗೆಯನ್ನು ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ ಎಂದು ದೇವಸ್ಥಾನದ ಅರ್ಚಕ ಜೈ ಕಿಶನ್ ಹೇಳಿದ್ದಾರೆ.  

ಇದನ್ನೂ ಓದಿ:ವಿಮೆ ತಿರಸ್ಕರಿಸಿದ ಮ್ಯಾಗಮಾ ವಿಮಾ ಕಂಪನಿಗೆ 1 ಲಕ್ಷ 80 ಸಾವಿರ ರೂ, ದಂಡ 

ಈ ಭಕ್ತ ತನ್ನ ನಾಲಿಗೆಯನ್ನು ಸುಮಾರು ಮೂರು ಇಂಚು ಕತ್ತರಿಸಿ ದೇವಿಗೆ ಅರ್ಪಿಸಿದನೆಂದು ಹೇಳಲಾಗುತ್ತದೆ. ಅಲ್ಲದೆ, ಸ್ವಲ್ಪ ರಕ್ತವನ್ನೂ ಪಾತ್ರೆಯಲ್ಲಿ ತುಂಬಿ ಮಾತೆಗೆ ಅರ್ಪಿಸಿದ್ದಾನೆ.. ವಿಷಯ ತಿಳಿದ ನೆರೆಹೊರೆಯವರು ದೃಶ್ಯವನ್ನು ನೋಡಲು ದೇವಸ್ಥಾನಕ್ಕೆ ಆಗಮಿಸಿದ್ದಾರೆ. ರತ್ನಗಿರಿ ಅಮ್ಮನವರು ಅಂದ್ರೆ ನನಗೆ ಅಪಾರವಾದ ಭಕ್ತಿ ಮತ್ತು ನಂಬಿಕೆ ಇದೆ, ಅದಕ್ಕೆ ನನ್ನ ನಾಲಿಗೆಯನ್ನು ಅರ್ಪಿಸಿದೆ ಅಂತ ಭಕ್ತ ಹೇಳಿಕೊಂಡಿದ್ದಾನೆ ಎನ್ನಲಾಗಿದೆ..

ಈ ರತ್ನನಗರ ದೇವಾಲಯವನ್ನು 2015 ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯದಲ್ಲಿರುವ ದುರ್ಗಾ ಮಾತೆಯ ಮೇಲೆ ತಮಗೆ ಅಪಾರ ನಂಬಿಕೆಯಿದೆ ಎನ್ನುತ್ತಾರೆ ಭಕ್ತರು. ಲಹರ್ ನಗರದಲ್ಲಿರುವ ಈ ದೇವಾಲಯದಲ್ಲಿ ಅಮ್ಮನನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಮೇಲಾಗಿ ಭಕ್ತನಿಗೆ ನಾಲಿಗೆ ಮರಳಿ ಬರುತ್ತದೆ ಎಂಬ ನಂಬಿಕೆಯೂ ಸಹ ಇದೆ.. ಎನ್ನುತ್ತಾರೆ ದೇವಸ್ಥಾನಕ್ಕೆ ಬರುವ ಭಕ್ತರು.  

ಇದನ್ನೂ ಓದಿ:ಉದ್ಯಮಿ ರತನ್ ಟಾಟಾ ಬಗ್ಗೆ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಾಸ್ಕ್ ಹೇಳಿದ್ದೇನು ಗೊತ್ತಾ?

ನಿನ್ನೆ ಕೂಡ ದೇವಸ್ಥಾನದಲ್ಲಿ ಹವನ ಮಾಡಿದ ಭಕ್ತರು ಭಕ್ತಿಯಿಂದ ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ್ದಾರೆ. ಇನ್ನು ಕೆಲವರು ಇಷ್ಟಾರ್ಥಗಳು ನೆರವೇರಿದಾಗ ದೇವಿಯ ಮೇಲಿನ ಭಕ್ತಿಯನ್ನು ತೋರಿಸಲು ಹೀಗೆ ಮಾಡುತ್ತಾರೆ .(ಹಕ್ಕುತ್ಯಾಗ: ಇಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಪರಿಶೀಲಿಸಿಲ್ಲ.)   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News