Today viral video : ನಮ್ಮ ಅಜ್ಜ, ಅಪ್ಪಂದಿರ ಕಾಲದಲ್ಲಿ ಕ್ಷೌರಿಕರು ಎಲ್ಲರಿಗೂ ಒಂದೇ ರೀತಿ ಕೂದಲನ್ನು ಕತ್ತರಿಸುತ್ತಿದ್ದರು. ಟ್ರೆಂಡ್ ಬದಲಾದಂತೆ, ಕ್ಷೌರಿಕರು ಕೂಡ ಬದಲಾಗಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಶೈಲಿಯಲ್ಲಿ ಹೇರ್ ಕಟ್ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಲೂನ್ಗಳಲ್ಲಿ ಪೈಪೋಟಿ ಹೆಚ್ಚಾಗಿದೆ. ಗ್ರಾಹಕರನ್ನು ಆಕರ್ಷಿಸಲು ಕ್ಷೌರಿಕರು ವಿಭಿನ್ನ ತಂತ್ರಗಳನ್ನು ಬಳಸುತ್ತಿದ್ದಾರೆ.
ಸಧ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಕ್ಷೌರಿಕನೊಬ್ಬ ತನ್ನ ಅಂಗಡಿಗೆ ಬಂದ ಗ್ರಾಹಕನ ಕೂದಲನ್ನು ವಿನೂತನ ಶೈಲಿಯಲ್ಲಿ ಕತ್ತರಿಸಿದ್ದಾನೆ. ಕತ್ತರಿ ಅಥವಾ ಕ್ಲಿಪ್ಪರ್ಗಳ ಬದಲಿಗೆ, ಕ್ಷೌರಿಕರು ಬೆಂಕಿಯಿಂದ ಕೂದಲನ್ನು ಕತ್ತರಿಸುತ್ತಾರೆ. ಅವರ ಹೇರ್ ಸ್ಟೈಲ್ ನೋಡಲು ತುಂಬಾ ಚೆನ್ನಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
Barbers will do anything but cut hair these days pic.twitter.com/5AWQjYFElX
— non aesthetic things (@PicturesFoIder) February 15, 2024
ಇದನ್ನೂ ಓದಿ:ದಂಗಲ್ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆ ಅಭಿನಯಿಸಿದ್ದ ಖ್ಯಾತ ಬಾಲನಟಿ ನಿಗೂಢ ಸಾವು!
ಈ ಬಗ್ಗೆ ನೆಟಿಜನ್ಗಳು ನಾನಾ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಈ ರೀತಿಯ ಹೇರ್ಕಟ್ ತುಂಬಾ ಅಪಾಯಕಾರಿ. ಗ್ಯಾಸ್ ಕಟರ್ನಿಂದ ಕೂದಲು ಕತ್ತರಿಸುವ ವೇಳೆ ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯವಿದೆ. ಈ ರೀತಿಯ ಹುಚ್ಚಾಗ ಬೇಡ ಅಂತ ನೆಟ್ಟಿಗರು ಗರಂ ಆಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.