Viral Video: ಫೋಟೋಗಾಗಿ ಲಿಪ್‌ಲಾಕ್‌, ನಂತರ ವಧು - ವರ ಕಂಟ್ರೋಲ್‌ ತಪ್ಪಿ ಕ್ಯಾಮೆರಾ ಮುಂದೆಯೇ ಮಾಡಿದ್ರು...!

Viral Video: ಮದುವೆ ಸಮಾರಂಭದ ವೇಳೆ ಹಾಗೂ ನಂತರ ಫೋಟೋಶೂಟ್ ಮಾಡಲಾಗುತ್ತದೆ. ಈ ಸಮಯದಲ್ಲಿ, ಛಾಯಾಗ್ರಾಹಕರು ಕ್ಯಾಮೆರಾದಲ್ಲಿ ಫೋಟೋಗಳನ್ನು ಸೆರೆಹಿಡಿಯುತ್ತಾ. ವಧು - ವರರ ಕೆಲವು ರೋಮ್ಯಾಂಟಿಕ್‌ ಫೋಟೋಗಳನ್ನು ತೆಗೆಯುವುದು ಸಾಮಾನ್ಯ.   

Written by - Chetana Devarmani | Last Updated : Jun 19, 2023, 10:34 PM IST
  • ಮದುವೆ ಸಮಾರಂಭದ ವಿಡಿಯೋ ವೈರಲ್‌
  • ಫೋಟೋಗಾಗಿ ಲಿಪ್‌ಲಾಕ್‌ ಮಾಡಿದ ಜೋಡಿ
  • ನಂತರ ಇವರ ಕೆಲಸ ಕಂಡು ದಂಗಾದ ಫೋಟೋಗ್ರಾಫರ್‌
Viral Video: ಫೋಟೋಗಾಗಿ ಲಿಪ್‌ಲಾಕ್‌, ನಂತರ ವಧು - ವರ ಕಂಟ್ರೋಲ್‌ ತಪ್ಪಿ ಕ್ಯಾಮೆರಾ ಮುಂದೆಯೇ ಮಾಡಿದ್ರು...! title=

Bride Groom Kissing Video: ಯಾವುದೇ ಶುಭ ಸಮಾರಂಭಗಳು ನಡೆದರೂ ಅಲ್ಲಿ ಫೋಟೋ ಸೆರೆ ಹಿಡುಯುವುದು ಸಾಮಾನ್ಯ. ಈವೆಂಟ್‌ಗಳಲ್ಲಿ ಅತ್ಯುತ್ತಮ ಕ್ಷಣಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅದಕ್ಕಾಗಿ ಬಜೆಟ್ ಅನ್ನು ಸಹ ನಿಗದಿಪಡಿಸಲಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮದುವೆಯ ಸಂದರ್ಭದಲ್ಲಂತೂ ಸಾಕಷ್ಟು ಫೋಟೋಗಳನ್ನು ತೆಗೆಯಲಾಗುತ್ತದೆ. ಮದುವೆ ಸಮಾರಂಭದ ಮೊದಲು ಮತ್ತು ನಂತರ ಫೋಟೋಶೂಟ್ ಮಾಡಲಾಗುತ್ತದೆ. ಈ ಸಮಯದಲ್ಲಿ ಛಾಯಾಗ್ರಾಹಕರು ಕ್ಯಾಮೆರಾದಲ್ಲಿ ಅನೇಕ ಫೋಟೋಗಳನ್ನು ಸೆರೆ ಹಿಡಿಯುತ್ತಾರೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ವೆಡ್ಡಿಂಗ್ ಫೋಟೋಗ್ರಫಿಯ ವಿಧಾನವೂ ಸಾಕಷ್ಟು ಬದಲಾಗಿದೆ.

ಇದನ್ನೂ ಓದಿ: Viral Video: ವಧು ಕೈಯಲ್ಲಿ ಕಂಟ್ರೋಲ್‌ ಆಗಲೇ ಇಲ್ಲ.. ಮಾಡೇ ಬಿಟ್ಟಳು ಈ ಕೆಲಸ! ರೊಮ್ಯಾಂಟಿಕ್‌ ವಿಡಿಯೋ ವೈರಲ್

ವಧು-ವರರ ಚುಂಬನದ ವಿಡಿಯೋ ವೈರಲ್ 

ಮದುವೆಯ ವಿಡಿಯೋಗಳು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಅತ್ಯಂತ ಆಸಕ್ತಿದಾಯಕ ದೃಶ್ಯಗಳಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತವೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೆಡ್ಡಿಂಗ್ ಫೋಟೋಶೂಟ್ ವಿಡಿಯೋ ಒಂದು ಸಾಕಷ್ಟು ವೈರಲ್ ಆಗಿದೆ. ಈ ದೃಶ್ಯ ಖಂಡಿತವಾಗಿಯೂ ನಿಮ್ಮನ್ನು ನಗಿಸುತ್ತದೆ. ವಿಡಿಯೋದಲ್ಲಿ ವಧು-ವರರು ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಅಲ್ಲಿ ಒಬ್ಬ ಛಾಯಾಗ್ರಾಹಕ ತನ್ನ ಕ್ಯಾಮೆರಾ ಲೆನ್ಸ್‌ನಿಂದ ಇಬ್ಬರನ್ನು ಸೆರೆಹಿಡಿಯುತ್ತಿರುವುದನ್ನು ಕಾಣಬಹುದು. ಛಾಯಾಗ್ರಾಹಕನ ಸೂಚನೆಯಂತೆ ವಧುವರರು ಹತ್ತಿರ ಬಂದು ಪರಸ್ಪರ ಚುಂಬಿಸಲು ಪ್ರಾರಂಭಿಸಿದರು.

 

 

ವಧು-ವರರಿಬ್ಬರೂ ಜೋರಾಗಿ ಚುಂಬಿಸತೊಡಗುತ್ತಾರೆ

ಹತ್ತಿರ ಬಂದ ಕೂಡಲೇ ವಧು-ವರರಿಬ್ಬರೂ ಜೋರಾಗಿ ಚುಂಬಿಸತೊಡಗುತ್ತಾರೆ. ಅಷ್ಟರಲ್ಲಿ ಒಬ್ಬರನ್ನೊಬ್ಬರು ಹಿಡಿದುಕೊಂಡರು. ತಕ್ಷಣವೇ ಛಾಯಾಗ್ರಾಹಕ ತಮ್ಮ ಕೈಗಳನ್ನು ಕೆಳಗೆ ಬಿಡಲು ಕೇಳುತ್ತಾನೆ. ವಧು ಮತ್ತು ವರರು ವಿಚಲಿತರಾಗದೆ, ತಮ್ಮ ಕೈಗಳನ್ನು ಬಿಡದೆ ಉತ್ಸಾಹದಿಂದ ಚುಂಬಿಸಲು ಪ್ರಾರಂಭಿಸುತ್ತಾರೆ. ವಧು - ವರರ ಈ ಕೆಲಸ ಕಂಡು ಛಾಯಾಗ್ರಾಹಕ ಅಚ್ಚರಿ ವ್ಯಕ್ತಪಡಿಸಿದ್ದು, ಶೂಟಿಂಗ್ ನಿಲ್ಲಿಸಿದ್ದಾರೆ. ವಧು ಮತ್ತು ವರರು ತಮ್ಮ ಭಾವೋದ್ರಿಕ್ತ ಕಿಸ್ ಅನ್ನು ಮುಂದುವರೆಸುತ್ತಾರೆ. ಬಳಿಕ ಛಾಯಾಗ್ರಾಹಕರು ಮಧ್ಯೆ ಬಂದು ಇಬ್ಬರನ್ನು ಬೇರ್ಪಡಿಸಲು ಯತ್ನಿಸಿದ್ದಾರೆ.

ಇದನ್ನೂ ಓದಿ: Shahrukh Kiss Video: ಶಾರುಖ್‌ ಖಾನ್‌ಗೆ ಬಲವಂತವಾಗಿ ಕಿಸ್‌ ಕೊಟ್ಟ ಮಹಿಳೆ, ವೈರಲ್‌ ಆಯ್ತು ವಿಡಿಯೋ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News