Funny Viral Video : ಹುಡುಗಿಯ ನೃತ್ಯದಿಂದ ಬೇಸತ್ತ ಎಮ್ಮೆ ಕಲಿಸಿತು ಸರಿಯಾದ ಪಾಠ .!

Funny Viral Video :ಇಲ್ಲಿ ಒಬ್ಬ ಯುವತಿ ಎಮ್ಮೆಗಳಿಗೆ ಮೇವು ಹಾಕುತ್ತಿರುವುದನ್ನು ಕಾಣಬಹುದು. ಆದರೆ ಮೇವು ಹಾಕುತ್ತಿದ್ದಂತೆ ಇದ್ದಕ್ಕಿದ್ದಂತೆ ವಿಚಿತ್ರವಾಗಿ ಕುಣಿಯಲು ಆರಂಭಿಸುತ್ತಾಳೆ. ಆ ಯುವತಿಯ ನೃತ್ಯ ಅದ್ಯಾಕೋ ಎಮ್ಮೆಗೂ  ಹಿಡಿಸಲಿಲ್ಲ ಎಂದೆನಿಸುತ್ತದೆ.

Written by - Ranjitha R K | Last Updated : Oct 6, 2022, 09:59 AM IST
  • ಎಮ್ಮೆಗೆ ಮೇವು ಹಾಕಲು ಬಂದ ಯುವತಿ
  • ಇದ್ದಕ್ಕಿದ್ದಂತೆ ಶುರು ಮಾಡುತ್ತಾಳೆ ನೃತ್ಯ
  • ವೈರಲ್ ಆಯಿತು ಎಮ್ಮೆಯ ನಡೆ
Funny Viral Video : ಹುಡುಗಿಯ ನೃತ್ಯದಿಂದ ಬೇಸತ್ತ ಎಮ್ಮೆ ಕಲಿಸಿತು ಸರಿಯಾದ ಪಾಠ .! title=
Funny Viral Video (photo instagram)

Funny Viral Video : ಸೋಷಿಯಲ್ ಮೀಡಿಯಾ ಜಗತ್ತೇ  ಹಾಗೆ. ಇಲ್ಲಿ ಸಾವಿರಾರು ಬಗೆಯ ವಿಡಿಯೋಗಳು ಸಿಗುತ್ತವೆ.  ಇದು ಒಂದು ರೀತಿಯ ಟೈಮ್ ಪಾಸ್. ಸುಮ್ಮನೆ ಸಮಯ ಕಳೆಯುವ ಸಲುವಾಗಿ ಇಲ್ಲಿ ಸಿಗುವ ವಿಡಿಯೋಗಳನ್ನು ನೋಡುತ್ತೇವೆಯಾದರೂ, ಇಲ್ಲಿ ಕಾಣ ಸಿಗುವ ವಿಡಿಯೋಗಳಲ್ಲಿಯೂ ನಾನಾ ರೀತಿಯ ಕತೆಗಳು ಅಡಗಿರುತ್ತವೆ. ಇವುಗಳ ಪೈಕಿ ಕೆಲವೊಂದು ನಮ್ಮನ್ನು ನಗಿಸುತ್ತವೆ. ಇನ್ನು ಕೆಲವು ದೃಶ್ಯಗಳು ಕಣ್ಣಂಚಲ್ಲಿ ನೀರು ತರಿಸುತ್ತವೆ. ಮತ್ತೆ ಕೆಲವು ನಮ್ಮನ್ನೇ ಯೋಚನೆಗೆ ದೂಡಿ ಬಿಡುತ್ತವೆ.   

ಅಂಥದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್  ಆಗಿದೆ. ಇಲ್ಲಿ ಒಬ್ಬ ಯುವತಿ ಎಮ್ಮೆಗಳಿಗೆ ಮೇವು ಹಾಕುತ್ತಿರುವುದನ್ನು ಕಾಣಬಹುದು. ಆದರೆ ಮೇವು ಹಾಕುತ್ತಿದ್ದಂತೆ ಇದ್ದಕ್ಕಿದ್ದಂತೆ ವಿಚಿತ್ರವಾಗಿ ಕುಣಿಯಲು ಆರಂಭಿಸುತ್ತಾಳೆ. ಆ ಯುವತಿಯ ನೃತ್ಯ ಅದ್ಯಾಕೋ ಎಮ್ಮೆಗೂ  ಹಿಡಿಸಲಿಲ್ಲ ಎಂದೆನಿಸುತ್ತದೆ. ಯುವತಿ ನೃತ್ಯ ಆರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ಆಕೆಯನ್ನು ಎತ್ತಿ ಬಿಸಾಡಿದೆ. 

ಇದನ್ನೂ ಓದಿ : Viral Video: ಸರಸರನೆ ಮರವೇರಿದ ದೈತ್ಯ ಗಾತ್ರದ ಹೆಬ್ಬಾವು, ಸ್ಪೀಡ್ ನೋಡಿ ನೀವು ಬೆಚ್ಚಿಬೀಳುವಿರಿ

ಪಾಪ.! ಮೇವು ಹಾಕಿರುವ ಋಣಕ್ಕಾದರೂ ಎಮ್ಮೆಗಳು, ತನ್ನ ಡಾನ್ಸ್ ವೀಕ್ಷಿಸಬಹುದು ಎಂದು ಕೊಂಡಿದ್ದಳೋ  ಏನೋ ಆ ಹುಡುಗಿ.  ಆದರೆ ಎಮ್ಮೆಗಳಿಗೂ ಆ ನೃತ್ಯ ವೀಕ್ಷಿಸುವುದು ಸಾಧ್ಯವಾಗಲಿಲ್ಲ ಎಂದು ಕಾಣುತ್ತದೆ. ಮೂಕ ಪ್ರಾಣಿಯಾದ್ದರಿಂದ ಯುವತಿಯ ಡಾನ್ಸ್ ನಿಲ್ಲಿಸಲು ಏನು ಮಾಡಬೇಕೋ ಮಾಡಿದೆ ಆ ಎಮ್ಮೆ.

 

ಇದನ್ನೂ ಓದಿ : Viral video : ಹೆಂಡತಿಯನ್ನು ಹೆಗಲ ಮೇಲೆ ಹೊತ್ತು ತಿರುಮಲ ಬೆಟ್ಟ ಹತ್ತಿದ ಪತಿರಾಯ.!

ವಿಡಿಯೋವನ್ನು ಕಳೆದ ಕೆಲವು ದಿನಗಳಲ್ಲಿ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ನೆಟ್ಟಿಗರು ಕೂಡ ಇದನ್ನು ಭರ್ಜರಿಯಾಗಿಯೇ  ಎಂಜಾಯ್ ಮಾಡಿದ್ದಾರೆ. ಸೈಕೋ_biihariandfun_factorss ಎಂಬ Instagram ಪುಟದಲ್ಲಿ ವೀಡಿಯೊವನ್ನು ಸಹ ಹಂಚಿಕೊಳ್ಳಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News