Viral Video: ಮಣ್ಣಿಂದ ಉಪ್ಪನ್ನು ಹೀರುತ್ತೆ ಚಿಟ್ಟೆಗಳು..! ಪ್ರಕೃತಿಯ ವಿಚಿತ್ರ ವಿಡಿಯೋ

Butterfly Video: ಸದ್ಯದ ನೈಸರ್ಗಿಕ ಪ್ರಪಂಚವು ದೃಶ್ಯ ಅದ್ಭುತಗಳಿಗೆ ಅನೇಕ ಬಾರಿ ಸಾಕ್ಷಿಯಾಗಿದೆ. ಅವುಗಳ ವಿಡಿಯೋವನ್ನು ಸೆರೆಹಿಡಿದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದರೆ, ಹೆಣ್ಣು ಚಿಟ್ಟೆಯನ್ನು ಮೆಚ್ಚಿಸಲು ಗಂಡು ಚಿಟ್ಟೆಗಳು ಹರಸಾಹಸ ಪಡುತ್ತಿರುವಂತೆ ಕಾಣಿಸುತ್ತದೆ.

Written by - Bhavishya Shetty | Last Updated : Apr 16, 2023, 06:41 PM IST
    • ಅದ್ಭುತವಾದ ಭೂದೃಶ್ಯಗಳು ಮತ್ತು ಭವ್ಯವಾದ ವನ್ಯಜೀವಿಗಳಿಂದ ಕೂಡಿರುವ ವಿಡಿಯೋ
    • ಸದ್ಯದ ನೈಸರ್ಗಿಕ ಪ್ರಪಂಚವು ದೃಶ್ಯ ಅದ್ಭುತಗಳಿಗೆ ಅನೇಕ ಬಾರಿ ಸಾಕ್ಷಿಯಾಗಿದೆ
    • ಹೆಣ್ಣು ಚಿಟ್ಟೆಯನ್ನು ಮೆಚ್ಚಿಸಲು ಗಂಡು ಚಿಟ್ಟೆಗಳು ಹರಸಾಹಸ ಪಡುತ್ತಿರುವಂತೆ ಕಾಣಿಸುತ್ತದೆ
Viral Video: ಮಣ್ಣಿಂದ ಉಪ್ಪನ್ನು ಹೀರುತ್ತೆ ಚಿಟ್ಟೆಗಳು..! ಪ್ರಕೃತಿಯ ವಿಚಿತ್ರ ವಿಡಿಯೋ title=
Butterfly Video

Butterfly Video: ಸೋಶಿಯಲ್ ಮೀಡಿಯಾದಲ್ಲಿ ದಿನಬೆಳಗಾದರೆ ಒಂದಿಲ್ಲೊಂದು ಮನಮುಟ್ಟುವಂತಹ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲೂ ನಿಸರ್ಗದ ಸೊಬಗನ್ನು ತೋರಿಸುವ ವೀಡಿಯೋಗಳನ್ನು ಕಂಡರೆ ನಿಜವಾಗಿಯೂ ಮನಸೆಳೆಯುತ್ತದೆ. ಅದ್ಭುತವಾದ ಭೂದೃಶ್ಯಗಳು ಮತ್ತು ಭವ್ಯವಾದ ವನ್ಯಜೀವಿಗಳಿಂದ ಕೂಡಿರುವ ವಿಡಿಯೋಗಳನ್ನು ಕಾಣುವುದೇ ಅಪರೂಪವಾಗಿದೆ.

ಇದನ್ನೂ ಓದಿ: Shahneel Gill: ‘ದಿಲ್’ ಗೆದ್ದಳು ಅಪ್ಸರೆ..! ಶುಭ್ಮನ್ ಗಿಲ್ ಸಹೋದರಿಯ ಮುಂದೆ ಬಾಲಿವುಡ್ ನಟಿಯರು ಝೀರೋ,,,

ಸದ್ಯದ ನೈಸರ್ಗಿಕ ಪ್ರಪಂಚವು ದೃಶ್ಯ ಅದ್ಭುತಗಳಿಗೆ ಅನೇಕ ಬಾರಿ ಸಾಕ್ಷಿಯಾಗಿದೆ. ಅವುಗಳ ವಿಡಿಯೋವನ್ನು ಸೆರೆಹಿಡಿದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದರೆ, ಹೆಣ್ಣು ಚಿಟ್ಟೆಯನ್ನು ಮೆಚ್ಚಿಸಲು ಗಂಡು ಚಿಟ್ಟೆಗಳು ಹರಸಾಹಸ ಪಡುತ್ತಿರುವಂತೆ ಕಾಣಿಸುತ್ತದೆ.

ಇದನ್ನು “ಮಡ್ ಪಡ್ಲಿಂಗ್” ಎಂದು ಕರೆಯುತ್ತಾರೆ. ಮಣ್ಣಿನಲ್ಲಿರುವಲವಣಗಳನ್ನು ಸಂಗ್ರಹಿಸಲು ಚಿಟ್ಟೆಗಳು ಒಂದೆಡೆ ಸೇರುತ್ತವೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌;ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಮಣ್ಣಿನ ಕೊಚ್ಚೆಗುಂಡಿ ಮೇಲೆ ಚಿಟ್ಟೆಗಳು ಕುಳಿತಿರುವುದನ್ನು ಕಾಣಬಹುದು. ಇದಕ್ಕೆ ಶೀರ್ಷಿಕೆ ನೀಡಿದ ಅಧಿಕಾರಿ, “ಹೆಚ್ಚಾಗಿ ಇದನ್ನು ಗಂಡು ಚಿಟ್ಟೆಗಳು ಮಾಡುತ್ತವೆ. ಹೆಣ್ಣು ಚಿಟ್ಟೆಗಳನ್ನು ಆಕರ್ಷಿಸಲು ಮಣ್ಣಿನಲ್ಲಿರುವ ಲವಣಗಳು ಮತ್ತು ಫೆರೋಮೋನ್ಗಳನ್ನು ಸಂಗ್ರಹಿಸುತ್ತವೆ. ನೀರು, ಸಗಣಿ, ಮಣ್ಣು ಇತ್ಯಾದಿಗಳಿಂದ ಅವುಗಳನ್ನು ಸಂಗ್ರಹಿಸುತ್ತವೆ” ಎಂದು ಮಾಹಿತಿ ನೀಡಿದ್ದಾರೆ.

ಮೊದಲ ಟ್ವೀಟ್ ಅನ್ನು ಟ್ವಿಟರ್‌’ನಲ್ಲಿ ಒಂದು ದಿನದ ಹಿಂದೆ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ 1.6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಅನೇಕ ವಿಧವಿಧವಾದ ಕಮೆಂಟ್’ಗಳು ಕೂಡ ಬರುತ್ತಿವೆ

ಇದನ್ನೂ ಓದಿ: Hardik Pandya: ಪಬ್ಲಿಕ್’ನಲ್ಲಿಯೇ ಕಿಸ್ ಮಾಡಿ ಭಾರೀ ಚರ್ಚೆಗೆ ಸಿಲುಕಿದ ಹಾರ್ದಿಕ್ ಪಾಂಡ್ಯ!

ಟ್ವಿಟರ್ ಬಳಕೆದಾರರೊಬ್ಬರು "ಕೆಲವೊಮ್ಮೆ ತಾಯಿ ಭೂಮಿಯು ಪ್ರಕೃತಿಯ ಸರಳ ಮತ್ತು ಸುಂದರವಾದ ಭಾಗಗಳನ್ನು ಹೇಗೆ ಸೃಷ್ಟಿಸಿದ್ದಾಳೆ ಎಂದು ಯೋಚಿಸುತ್ತಾ ನಾನು ಆಶ್ಚರ್ಯಪಡುತ್ತೇನೆ" ಎಂದು ಹೇಳಿದ್ದಾರೆ. "ಅದ್ಭುತ! ಇದನ್ನು ಹಿಂದೆಂದೂ ಕೇಳಿರಲಿಲ್ಲ!” ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ. ಮೂರನೇ ನೆಟ್ಟಿಗ, “ರಿಷಿಕೇಶ ಬಳಿಯ ಅರಣ್ಯದಲ್ಲಿ ನೀಲಿ ಚಿಟ್ಟೆಯ ರಾಶಿಯನ್ನು ಕಂಡಿದ್ದೇವೆ. ಅವು ಆನೆಯ ಲದ್ದಿಯಂತೆ ಕಾಣಿಸುತ್ತಿತ್ತು” ಎಂದು ಬರೆದುಕೊಂಡಿದ್ದಾರೆ. "ಇದು ತುಂಬಾ ಸುಂದರವಾಗಿದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News