Shani Gochar 2023: ಶನಿ-ರಾಹು ಮೈತ್ರಿಯಿಂದ ಈ ರಾಶಿಗೆ ಸಂಕಷ್ಟ! ಅ.17ರವರೆಗೆ ಪ್ರತೀ ಹೆಜ್ಜೆಯೂ ಅಪಾಯಕಾರಿ!

Shani Gochar 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿಯನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಮಾರ್ಚ್ 15 ರಂದು ಶನಿಯು ಕುಂಭ ರಾಶಿಯಲ್ಲಿ ಚಲಿಸಿ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಈ ನಕ್ಷತ್ರವನ್ನು ರಾಹು ಆಳುತ್ತಾನೆ ಎಂದು ಹೇಳಲಾಗುತ್ತದೆ. ಹೀಗಾಗಿ ಶತಭಿಷಾ ನಕ್ಷತ್ರದಲ್ಲಿ ಶನಿಯು ಆಗಮಿಸುವುದರಿಂದ ಶನಿ-ರಾಹು ಮೈತ್ರಿ ಏರ್ಪಡುತ್ತಿದ್ದು, ಅಕ್ಟೋಬರ್ 17ರವರೆಗೆ ಇರುತ್ತದೆ.

Written by - Bhavishya Shetty | Last Updated : Apr 14, 2023, 07:50 AM IST
    • ಈ ರಾಶಿಗಳ ಜನರಿಗೆ ಅಕ್ಟೋಬರ್ 17 ರವರೆಗೆ ಹಾನಿ
    • ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿಯನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ.
    • ಮಾರ್ಚ್ 15 ರಂದು ಶನಿಯು ಕುಂಭ ರಾಶಿಯಲ್ಲಿ ಚಲಿಸಿ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ.
Shani Gochar 2023: ಶನಿ-ರಾಹು ಮೈತ್ರಿಯಿಂದ ಈ ರಾಶಿಗೆ ಸಂಕಷ್ಟ! ಅ.17ರವರೆಗೆ ಪ್ರತೀ ಹೆಜ್ಜೆಯೂ ಅಪಾಯಕಾರಿ! title=
Shani Gochar 2023

Shani Gochar 2023: ಶನಿ-ರಾಹುವಿನ ಸಂಯೋಜನೆಯು ಈ ರಾಶಿಗಳ ಜನರಿಗೆ ಅಕ್ಟೋಬರ್ 17 ರವರೆಗೆ ಹಾನಿಯನ್ನುಂಟುಮಾಡುತ್ತದೆ. ಇಟ್ಟ ಪ್ರತೀ ಹೆಜ್ಜೆಯಲ್ಲೂ ಅಪಾಯ ಕಟ್ಟಿಟ್ಟಬುತ್ತಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ರಾಶಿಯ ಜನರು ಜಾಗರೂಕರಾಗಿರುವುದು ಒಳಿತು.

ಇದನ್ನೂ ಓದಿ: Today Horoscope: ಈ 5 ರಾಶಿಯವರಿಗೆ ಇಂದು ಬೇಡ ಎಂದರೂ ಸಿಗುತ್ತೆ ಹಣ.. ಅದೃಷ್ಟ ಎಲ್ಲಾ ಇವರದ್ದೆ!

ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿಯನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಮಾರ್ಚ್ 15 ರಂದು ಶನಿಯು ಕುಂಭ ರಾಶಿಯಲ್ಲಿ ಚಲಿಸಿ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಈ ನಕ್ಷತ್ರವನ್ನು ರಾಹು ಆಳುತ್ತಾನೆ ಎಂದು ಹೇಳಲಾಗುತ್ತದೆ. ಹೀಗಾಗಿ ಶತಭಿಷಾ ನಕ್ಷತ್ರದಲ್ಲಿ ಶನಿಯು ಆಗಮಿಸುವುದರಿಂದ ಶನಿ-ರಾಹು ಮೈತ್ರಿ ಏರ್ಪಡುತ್ತಿದ್ದು, ಅಕ್ಟೋಬರ್ 17ರವರೆಗೆ ಇರುತ್ತದೆ. ಈ ಸಮಯದಲ್ಲಿ ಕೆಲ ರಾಶಿಗಳು ವಿಶೇಷವಾಗಿ ಜಾಗರೂಕರಾಗಿರಬೇಕು. ಅಂತಹ ರಾಶಿಗಳ ಬಗ್ಗೆ ತಿಳಿಯೋಣ.

ಶನಿ-ರಾಹು ಸಂಯೋಗದ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ತನ್ನದೇ ಆದ ಪರಿಣಾಮವನ್ನು ಬೀರುತ್ತದೆ. ಒಳ್ಳೆಯ ಕಾರ್ಯಗಳನ್ನು ಮಾಡುವ ಜನರು ಅದರ ಮಂಗಳಕರ ಪರಿಣಾಮವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಈ ಸಮಯದಲ್ಲಿ ಕೆಲ ಜನರು ಜಾಗರೂಕರಾಗಿರಬೇಕು.

ಕಟಕ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಸಮಯದಲ್ಲಿ ಕರ್ಕಾಟಕ ರಾಶಿಯವರಿಗೆ ಶನಿಯ ಪ್ರಭಾವ ಕೊಂಚ ಇರುತ್ತದೆ ಶನಿಯು ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಿದಾಗ ಕರ್ಕಾಟಕ ರಾಶಿಯವರಿಗೆ ಸಮಸ್ಯೆಗಳು ಹೆಚ್ಚಾಗಲಿವೆ. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬೇಕಾಗಬಹುದು. ಅಷ್ಟೇ ಅಲ್ಲದೆ ವ್ಯಕ್ತಿಯ ಆರೋಗ್ಯ ಸಮಸ್ಯೆಗಳೂ ಕೂಡ ಹೆಚ್ಚಾಗುತ್ತದೆ. ಖಾಸಗಿ ಉದ್ಯೋಗದಲ್ಲಿರುವವರು ಕೂಡ ಈ ಅವಧಿಯಲ್ಲಿ ವಿಶೇಷ ಕಾಳಜಿ ವಹಿಸಬೇಕು. ಈ ಜನರು ಅಕ್ಟೋಬರ್ 17 ರವರೆಗೆ ಯಾವುದೇ ರೀತಿಯ ಹೂಡಿಕೆ ಮಾಡಬಾರದು.

ಕನ್ಯಾ ರಾಶಿ:

ಶನಿಯು ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಿದ ಕಾರಣ ಕನ್ಯಾ ರಾಶಿಯಲ್ಲಿ ಮಾನಸಿಕ ಗೊಂದಲ ಮತ್ತು ಏರುಪೇರುಗಳನ್ನು ಉಂಟುಮಾಡುತ್ತದೆ. ಈ ಸಮಯದಲ್ಲಿ, ಯೋಚಿಸದೆ ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ನಷ್ಟವನ್ನು ಭರಿಸಬೇಕಾಗಬಹುದು. ಕಠಿಣ ಪರಿಶ್ರಮದ ನಂತರವೂ ನಿಮಗೆ ಯಶಸ್ಸು ಸಿಗುವುದಿಲ್ಲ. ಮನೆಯ ಖರ್ಚುಗಳನ್ನು ಪೂರೈಸಲು ನೀವು ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು. ಅದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.

ವೃಶ್ಚಿಕ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಶ್ಚಿಕ ರಾಶಿಯ ಜನರು ರಕ್ತ ಸಂಬಂಧಿ ಕಾಯಿಲೆಗಳನ್ನು ಎದುರಿಸಬೇಕಾಗಬಹುದು. ಸರ್ಕಾರಿ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಪ್ರೇಮ ಸಂಬಂಧಗಳಲ್ಲಿ ಎಚ್ಚರಿಕೆಯಿಂದ ನಡೆಯುವುದು ಒಳ್ಳೆಯದು. ಇಲ್ಲದಿದ್ದರೆ, ಸಂಬಂಧ ಮುರಿಯುವ ಸಾಧ್ಯತೆಯಿದೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.

ಕುಂಭ ರಾಶಿ:

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕುಂಭವು ಶನಿಯ ಮೂಲ ರಾಶಿಯಾಗಿದೆ. ಆದರೆ ಈ ರಾಶಿಯವರಿಗೆ ಶನಿ-ರಾಹುವಿನೊಡನೆ ಮೈತ್ರಿ ಅಪಾತ ಪ್ರಭಾವವನ್ನು ಬೀರುತ್ತದೆ. ಈ ಸಮಯದಲ್ಲಿ ಈ ರಾಶಿಯ ಜನರು ಅಹಂಕಾರ ಮತ್ತು ಭ್ರಮೆಗಳಿಂದ ತೊಂದರೆಗೊಳಗಾಗಬಹುದು. ಜೀವನ ಸಂಗಾತಿಯೊಂದಿಗೆ ವಿವಾದಗಳು ಉಂಟಾಗಬಹುದು, ಈ ಕಾರಣದಿಂದಾಗಿ ಕುಟುಂಬದ ಶಾಂತಿಯು ತೊಂದರೆಗೊಳಗಾಗಬಹುದು.

ಇದನ್ನೂ ಓದಿ: Shocking: ಹಲಸಿನ ಮರದಲ್ಲಿ ಕಾಯಿಬಿಟ್ಟ ಗೇರುಬೀಜ...! ಪ್ರಕೃತಿ ವಿಸ್ಮಯ ವೈರಲ್

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News