Viral Video: ಜೀವಂತ ಹಾವನ್ನು ನುಂಗಿದ ಮತ್ತೊಂದು ಹಾವು! ಶಾಕಿಂಗ್‌ ವಿಡಿಯೋ ವೈರಲ್‌

Viral Video: ಕಾಟನ್ ಮೌತ್ ಹಾವು ಜೀವಂತ ರಾಟಲ್ ಸ್ನೇಕ್ ಅನ್ನು ಸುಲಭವಾಗಿ ನುಂಗುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Written by - Chetana Devarmani | Last Updated : Dec 11, 2022, 05:43 PM IST
  • ಜೀವಂತ ಹಾವನ್ನು ನುಂಗಿದ ಮತ್ತೊಂದು ಹಾವು
  • ಜೀವಂತ ರಾಟಲ್ ಸ್ನೇಕ್ ನುಂಗಿದ ಕಾಟನ್ ಮೌತ್
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video: ಜೀವಂತ ಹಾವನ್ನು ನುಂಗಿದ ಮತ್ತೊಂದು ಹಾವು! ಶಾಕಿಂಗ್‌ ವಿಡಿಯೋ ವೈರಲ್‌  title=
ಹಾವು

Viral Video: Cottonmouth ಈ ಹೆಸರು ಬಹುತೇಕ ಯಾರು ಕೇಳಿರಲಿಕ್ಕಿಲ್ಲ. ಕಾಟನ್ ಮೌತ್ ವಿಶ್ವದ ಅತ್ಯಂತ ಭಯನಾಕ ಹಾವಿನ ಜಾತಿಗಳಲ್ಲಿ ಒಂದಾಗಿದೆ. ಇವು ಆಗ್ನೇಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಂಡುಬರುವ ಅತ್ಯಂತ ವಿಷಕಾರಿ ಹಾವುಗಳಾಗಿವೆ. ಬಾಯಿಯ ಒಳಭಾಗದಲ್ಲಿ ಬಿಳಿ ಬಣ್ಣದಿಂದಾಗಿ ಅವುಗಳನ್ನು ಕಾಟನ್ ಮೌತ್ ಎಂದು ಕರೆಯಲಾಗುತ್ತದೆ. ಕಾಟನ್‌ಮೌತ್‌ಗಳು ಬೆದರಿಕೆ ಬಂದಾಗ ಮಾತ್ರ ಬಾಯಿ ತೆರೆಯುತ್ತವೆ.  

ಇದನ್ನೂ ಓದಿ : Viral Video : ಹಾವಿನ ಜೊತೆ ಹುಚ್ಚಾಟ ತಲೆಕೆಟ್ಟು ಸರ್ಪ ಕಚ್ಚಿದ್ದೆಲ್ಲಿ ನೋಡಿ..

ಕಾಟನ್‌ಮೌತ್‌ಗಳು ಉಭಯ ಜೀವಿಗಳು. ನೆಲದ ಮೇಲೆ ಓಡಬಹುದು ಮತ್ತು ನೀರಿನಲ್ಲಿ ಈಜಬಹುದು. ನೀರಿನಲ್ಲಿ ಹೆಚ್ಚು ಸಮಯ ಕಳೆಯುವ ಏಕೈಕ ವಿಷಕಾರಿ ಹಾವು ಇದಾಗಿದೆ. ಕಾಟನ್‌ಮೌತ್‌ಗಳು ಅನೇಕ ಸ್ಥಳೀಯ ಹೆಸರುಗಳನ್ನು ಹೊಂದಿವೆ. ಕಪ್ಪು ಮೊಕಾಸಿನ್‌ಗಳು, ಗ್ಯಾಪರ್‌ಗಳು, ಮ್ಯಾಂಗ್ರೋವ್ ರ್ಯಾಟಲ್ಸ್, ಸ್ನ್ಯಾಪ್ ಜಾವ್ಸ್, ಸ್ಟಬ್-ಟೈಲ್ ಹಾವುಗಳು, ವಾಟರ್ ಮಂಬಾಸ್ ಮತ್ತು ವಾಟರ್ ಪೈಲಟ್‌ಗಳು ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಅವು ಮನುಷ್ಯರನ್ನು ಕಚ್ಚುವುದು ಅಪರೂಪ. ಅವುಗಳಿಗೆ ಕೆರಳಿಸಿದಾಗ ಮಾತ್ರ ಕಚ್ಚುತ್ತವೆ.

ಕಾಟನ್‌ಮೌತ್‌ಗಳು ಗಾಢ ಕಂದು, ಕಪ್ಪು, ಆಲಿವ್, ಬ್ಯಾಂಡೆಡ್ ಕಂದು ಅಥವಾ ಹಳದಿ ಬಣ್ಣದಲ್ಲಿರುತ್ತವೆ. ಅವು 2 ರಿಂದ 4 ಅಡಿ ಉದ್ದವಿರುತ್ತವೆ. ಸಸ್ತನಿಗಳು, ಪಕ್ಷಿಗಳು, ಉಭಯ ಜೀವಿಗಳು, ಮೀನುಗಳು, ಹಾವುಗಳು, ಸಣ್ಣ ಆಮೆಗಳು ಮತ್ತು ಸಣ್ಣ ಅಲಿಗೇಟರ್‌ಗಳನ್ನು ತಿನ್ನುತ್ತವೆ. Copperhead ನಂತಹ ವಿಷಕಾರಿ ಹಾವುಗಳನ್ನು ಬೇಟೆಯಾಡಲು ಕಾಟನ್‌ಮೌತ್‌ಗಳು ಹಿಂಜರಿಯುವುದಿಲ್ಲ. ಇತರ ಜಾತಿಯ ಹಾವುಗಳನ್ನು ಸಹ ಸುಲಭವಾಗಿ ಹಿಡಿದು ನುಂಗುತ್ತವೆ.

ಇದನ್ನೂ ಓದಿ : Viral Video : ಅಡುಗೆಮನೆಯಲ್ಲಿ ಹೆಬ್ಬಾವುಗಳ ಸರಸ! ವಿಡಿಯೋ ವೈರಲ್‌

ಕಾಟನ್ ಮೌತ್ ಹಾವು ಜೀವಂತ ರಾಟಲ್ ಸ್ನೇಕ್ ಅನ್ನು ಸುಲಭವಾಗಿ ನುಂಗುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯೂಟ್ಯೂಬ್ ಚಾನೆಲ್ 'ojatro' ಕಾಟನ್ ಮೌತ್ ಮತ್ತೊಂದು ಹಾವನ್ನು ನುಂಗುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದೆ. ವಾಸ್ತವವಾಗಿ ಈ ವಿಡಿಯೋ 2012ರದ್ದು ಆದರೆ ಇದೀಗ ಮತ್ತೆ ವೈರಲ್ ಆಗುತ್ತಿದೆ. ಈ ವಿಡಿಯೋ 42,289,009 ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋವನ್ನು ವೀಕ್ಷಿಸಿದ ಅನೇಕರು ಆಶ್ಚರ್ಯ ಪಡುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News