ಸಾಕಿದವನ ಮೇಲೆಯೇ ಎರಗಿದ ದೈತ್ಯ ಹೆಬ್ಬಾವು : ಭಯಾನಕ ವಿಡಿಯೋ ನೋಡಿ..!

ಹಾವುಗಳು ಅಂದ್ರೆ ಯಾರಿಗೆ ತಾನೆ ಭಯ ಆಗಲ್ಲ ಹೇಳಿ. ಸಣ್ಣ ಮಿಡಿ ನಾಗರಹಾವು ನೋಡಿದ್ರೂ ಹುಲಿ ಕಂಡಂತೆ ಬೆಚ್ಚಿ ಬಿಳುವ ಜನರು ನಮ್ಮ ಮಧ್ಯ ಇದ್ದಾರೆ. ಹಾಗಂತ ಅವುಗಳ ಜೊತೆ ಆಟವಾಡುವ ಜನರನ್ನು ನಾವು ಕಾಣಬಹುದು. ಇಂತಹ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಸದ್ಯ ದೈತ್ಯ ಹೆಬ್ಬಾವು ಒಂದು ತನ್ನನ್ನು ಸಾಕಿದ ವ್ಯಕ್ತಿಯ ಮೇಲೆಯೇ ದಾಳಿ ಮಾಡಿದ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ತಲ್ಲಣ ಸೃಷ್ಟಿಸುತ್ತಿದೆ.

Written by - Krishna N K | Last Updated : Nov 12, 2022, 06:10 PM IST
  • ಸಾಕಿದವನ ಮೇಲೆಯೇ ಎರಗಿದ ದೈತ್ಯ ಹೆಬ್ಬಾವು
  • ಭಯಾನಕ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
  • ಬೆಚ್ಚಿ ಬೀಳಿಸುವಂತಿದೆ ಹೆಬ್ಬಾವು ದಾಳಿ ದೃಶ್ಯ
ಸಾಕಿದವನ ಮೇಲೆಯೇ ಎರಗಿದ ದೈತ್ಯ ಹೆಬ್ಬಾವು : ಭಯಾನಕ ವಿಡಿಯೋ ನೋಡಿ..! title=

Viral video : ಹಾವುಗಳು ಅಂದ್ರೆ ಯಾರಿಗೆ ತಾನೆ ಭಯ ಆಗಲ್ಲ ಹೇಳಿ. ಸಣ್ಣ ಮಿಡಿ ನಾಗರಹಾವು ನೋಡಿದ್ರೂ ಹುಲಿ ಕಂಡಂತೆ ಬೆಚ್ಚಿ ಬಿಳುವ ಜನರು ನಮ್ಮ ಮಧ್ಯ ಇದ್ದಾರೆ. ಹಾಗಂತ ಅವುಗಳ ಜೊತೆ ಆಟವಾಡುವ ಜನರನ್ನು ನಾವು ಕಾಣಬಹುದು. ಇಂತಹ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಸದ್ಯ ದೈತ್ಯ ಹೆಬ್ಬಾವು ಒಂದು ತನ್ನನ್ನು ಸಾಕಿದ ವ್ಯಕ್ತಿಯ ಮೇಲೆಯೇ ದಾಳಿ ಮಾಡಿದ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ತಲ್ಲಣ ಸೃಷ್ಟಿಸುತ್ತಿದೆ.

ಹೌದು.. ಹಾವುಗಳನ್ನು ಎಷ್ಟೇ ಮುದ್ದಾಗಿ ಸಾಕಿದ್ರೂ ಸಹ ಅವರು ಅಪಾಯಕಾರಿ ಎನ್ನುವುದು ಅದೇಷ್ಟೋ ಬಾರಿ ಸಾಭೀತಾಗಿದೆ. ನಾಯಿಗೆ ಬೊಗಳುವ, ಬೆಕ್ಕಿಗೆ ಪರಚುವ ಹುಟ್ಟುಗುಣದಂತೆ ಹಾವನ್ನು ಎಷ್ಟೇ ಪ್ರೀತಿಯಿಂದ ಸಾಕಿದ್ರು ಸಹ ಅವುಗಳು ಕಚ್ಚುವುದನ್ನು ಬಿಡುವುದಿಲ್ಲ. ಸದ್ಯ ವರ್ಲ್ಡ್‌ ಅಪ್‌ ಸ್ನೇಕ್‌ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದು ನೋಡುಗರ ಎದೆ ನಡುಗಿಸುವಂತಿದೆ.

ಇದನ್ನೂ ಓದಿ: ಹಾಟ್‌ ಡ್ರೇಸ್‌ನಲ್ಲಿ ಜಾನ್ವಿ ಕ್ಯೂಟ್‌ ಆಕ್ಟ್‌ : ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ಫ್ಯಾನ್ಸ್‌.

ವಿಡಿಯೋದಲ್ಲಿ ಹಾವುಗಳನ್ನು ನೋಡಿಕೊಳ್ಳುವ ಇಬ್ಬರು ವ್ಯಕ್ತಿಗಳು ದೈತ್ಯ ಹಳದಿ ಹೆಬ್ಬಾವು ಒಂದನ್ನು ಬಾಕ್ಸ್‌ನಲ್ಲಿಟ್ಟುಕೊಂಡು ತರುತ್ತಾರೆ. ಅದರಲ್ಲಿ ಒಬ್ಬರು ಅದಕ್ಕೆ ಆಹಾರ ನೀಡಲು ಮುಂದಾಗುತ್ತಾನೆ. ಆಗ ಆ ಹಾವು ಅವನ ಮೇಲೆ ಎರಗುತ್ತದೆ. ಹಾವಿನ ದಾಳಿ ಅರಿತಿದ್ದ ಉರಗ ರಕ್ಷಕ ಕ್ಷಣಾರ್ಧಲ್ಲಿ ಹಿಂದೆ ಸರಿಯುತ್ತಾನೆ. ಇಲ್ಲದಿದ್ದರೆ ಹಾವಿನ ಬಾಯಿಗೆ ಸಿಕ್ಕಿ ನರಳಾಡಬೇಕಾಗುತ್ತಿತ್ತು. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News