Kids get stuck in elevator : ಮೂರು ಪುಟ್ಟ ಮಕ್ಕಳು ಸುಮಾರು ಅರ್ಧ ಘಂಟೆಯವರೆಗೆ ಲಿಫ್ಟ್‌ನಲ್ಲಿ ಸಿಲುಕಿದ ಆಘಾತಕಾರಿ ಘಟನೆ ನಡೆದಿದೆ. 8-10 ವರ್ಷ ವಯಸ್ಸಿನ ಹುಡುಗಿಯರು ಗಾಜಿಯಾಬಾದ್‌ನ ಕ್ರಾಸಿಂಗ್ ರಿಪಬ್ಲಿಕ್ ಟೌನ್‌ಶಿಪ್‌ನಲ್ಲಿರುವ ಅಸೋಟೆಕ್ ದಿ ನೆಸ್ಟ್ ಸೊಸೈಟಿಯ ಎಲಿವೇಟರ್‌ನಲ್ಲಿ ಸುಮಾರು 25 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಂದ್ ಆಗಿದ್ದ ಲಿಫ್ಟ್‌ನಲ್ಲಿ ಮಕ್ಕಳು ಪಟ್ಟ ಕಷ್ಟದ ದೃಶ್ಯಗಳು ಎಲ್ಲೆಡೆ ವೈರಲ್ ಆಗುತ್ತಿವೆ.
ಇದನ್ನೂ ಓದಿ : ಮಂತ್ರಾಲಯದಲ್ಲಿ ಶಿವರಾಜ್‌ಕುಮಾರ್ ದಂಪತಿ.. ರಾಯರಿಗೆ ಶಿವಣ್ಣನ ಸಂಗೀತ ಸೇವೆ!
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೂವರು ಬಾಲಕಿಯರು ಲಿಫ್ಟ್‌ನಲ್ಲಿ ಸಿಲುಕಿರುವುದು ಕಂಡುಬಂದಿದೆ. ಅತ್ಯಂತ ಭಯಾನಕ ಘಟನೆಯ ಈ ದೃಶ್ಯದಲ್ಲಿ ಮೂವರು ಬಾಲಕಿಯರು ಲಿಫ್ಟ್‌ನಲ್ಲಿ ಪರದಾಡುವುದನ್ನು ಕಾಣಬಹುದು. ಮೂವರು ಹುಡುಗಿಯರಲ್ಲಿ ಒಬ್ಬರು ತುರ್ತು ಸೇವೆಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ತನ್ನ ಇತರ ಇಬ್ಬರು ಸ್ನೇಹಿತರಿಗೆ ಸಮಾಧಾನ ಮಾಡುತ್ತ ಈ ಬಾಲಕಿ ಎಮರ್ಜೆನ್ಸಿ ನಂಬರ್‌ಗೆ ಸಂಪರ್ಕಿಸಲು ಟ್ರೈ ಮಾಡುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು.
#CaughtOnCCTV: 3 girls trapped in an elevator for nearly 25 minutes at an apartment building in #Ghaziabad. The police have registered a case against the builder pic.twitter.com/IMZR0h4y5A
— Zee News English (@ZeeNewsEnglish) December 1, 2022
ಈ ಘಟನೆಯಲ್ಲಿ ಅದೃಷ್ಟವಶಾತ್ ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ. ಘಟನೆಯ ಬಳಿಕ ಮಕ್ಕಳ ಪೋಷಕರು ಸೊಸೈಟಿಯ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಪದಾಧಿಕಾರಿಗಳು ಮತ್ತು ನಿರ್ವಹಣಾ ಕಂಪನಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಕಳಪೆ ನಿರ್ವಹಣೆಯಿಂದ ಲಿಫ್ಟ್ ಈ ರೀತಿ ನಿಂತು ಹೋಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : Viral Video: ತುಮಕೂರಿನಲ್ಲಿ ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.