WATCH : ಚಲಿಸುವ ರೈಲಿನಲ್ಲಿ ಮೇಲಿನ ಬರ್ತ್‌ನಿಂದ ಕೆಳಗಿಳಿದ ಪುಟ್ಟ ಬಾಲಕಿ, ವಿಡಿಯೋ ವೈರಲ್

viral video : ಚಲಿಸುತ್ತಿರುವ ರೈಲಿನಲ್ಲಿ ಚಿಕ್ಕ ಹುಡುಗಿಯೊಬ್ಬಳ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆದಿದೆ ಮತ್ತು ನೀವು ಅದನ್ನು ಒಮ್ಮೆ ನೋಡಿದರೆ ಅದು ನಿಮ್ಮನ್ನು ಬೆರಗುಗೊಳಿಸುತ್ತದೆ. ಇದನ್ನು @Gulzar_sahab ಎಂಬ Twitter ಅಕೌಂಟ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು 9k ವೀಕ್ಷಣೆಯನ್ನು ಪಡೆದಿದೆ.   

Written by - Chetana Devarmani | Last Updated : Nov 13, 2022, 02:55 PM IST
  • ಚಲಿಸುವ ರೈಲಿನಲ್ಲಿ ಮೇಲಿನ ಬರ್ತ್‌ನಿಂದ ಕೆಳಗಿಳಿದ ಪುಟ್ಟ ಬಾಲಕಿ
  • ಸಾಮಾಜಿಕ ಮಾಧ್ಯಮ ಬಳಕೆದಾರರು ಈ ದೃಶ್ಯ ಕಂಡು ಬೆರಗಾಗುತ್ತಿದ್ದಾರೆ
  • ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ
WATCH : ಚಲಿಸುವ ರೈಲಿನಲ್ಲಿ ಮೇಲಿನ ಬರ್ತ್‌ನಿಂದ ಕೆಳಗಿಳಿದ ಪುಟ್ಟ ಬಾಲಕಿ, ವಿಡಿಯೋ ವೈರಲ್  title=
ಪುಟ್ಟ ಬಾಲಕಿ

ನವದೆಹಲಿ: ಭಾರತದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ ಎನ್ನುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವಾರು ವೈರಲ್ ವಿಡಿಯೋಗಳೇ ಸಾಕ್ಷಿ. ಈಗ, ಚಲಿಸುತ್ತಿರುವ ರೈಲಿನಲ್ಲಿ ಚಿಕ್ಕ ಹುಡುಗಿಯೊಬ್ಬಳ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆದಿದೆ ಮತ್ತು ನೀವು ಅದನ್ನು ಒಮ್ಮೆ ನೋಡಿದರೆ ಅದು ನಿಮ್ಮನ್ನು ಬೆರಗುಗೊಳಿಸುತ್ತದೆ. ಇದನ್ನು @Gulzar_sahab ಎಂಬ Twitter ಅಕೌಂಟ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು 9k ವೀಕ್ಷಣೆಯನ್ನು ಪಡೆದಿದೆ. 

ಇದನ್ನೂ ಓದಿ : ಹಳಿ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ಬಂತು ರೈಲು! ಮುಂದೇನಾಯ್ತು?

ಈ ದೃಶ್ಯದಲ್ಲಿ ಚಿಕ್ಕ ಹುಡುಗಿ ರೈಲಿನ ಮೇಲಿನ ಬರ್ತ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಕ್ಲಿಪ್ ಮುಂದುವರಿದಂತೆ, ಈ ಪುಟಾಣಿ ಕೆಳಗಿಳಿಯಲು ಪ್ರಯತ್ನಿಸುತ್ತಾಳೆ. ಮೇಲಿನ ಬರ್ತ್‌ನಿಂದ ನಿಧಾನವಾಗಿ ಎಲ್ಲರೂ ದಿಗ್ಭ್ರಾಂತರಾಗುವಂತೆ ಕೆಳಗಿಳಿಯುತ್ತಾಳೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ದೃಶ್ಯ ಕಂಡು ಬೆರಗಾಗುತ್ತಿದ್ದಾರೆ. "ಇಂಪಾಸಿಬಲ್" ಎಂದು ಈ ವಿಡಿಯೋಗೆ ಶೀರ್ಷಿಕೆಯನ್ನು ನೀಡಿದ್ದಾರೆ. 

 

 

ವಿಡಿಯೋ ಸುಮಾರು 9,000 ವೀಕ್ಷಣೆಗಳನ್ನು ಗಳಿಸಿದೆ. ನೆಟಿಜನ್‌ಗಳು ಅಂಬೆಗಾಲಿಡುವ ಈ ಪುಟ್ಟ ಪೋರಿ ಮೇಲಿನ ಬರ್ತ್‌ನಿಂದ ಕೆಳಗಿಳಿಯುವ ದೃಶ್ಯ ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಬಾಲಕಿಯ ಸಾಮರ್ಥ್ಯವನ್ನು ಹೊಗಳುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

ಇದನ್ನೂ ಓದಿ : ಮತ್ತೆ ಒಂದಾಗ್ತಾರಾ ಸಮಂತಾ - ನಾಗ ಚೈತನ್ಯ? ಫ್ಯಾನ್ಸ್‌ಗೆ ಸಿಕ್ತು ಗುಡ್ ನ್ಯೂಸ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News