ಕೋತಿಗಳ ಕೈಗೆ ಸಿಕ್ಕ ನಾಯಿ ಪಾಡು ಯಾರಿಗೂ ಬೇಡ.. ಹಲ್ಲು ಕಿತ್ತಲು ಹೊರಟ ಮಂಗಗಳ ಕಿತಾಪತಿ ನೋಡಿ..!

Monkey Funny Video : ಮಂಗನಾಟ ನೋಡಲಂತೂ ನೆಟ್ಟಿಗರು ಕಾದು ಕುಳಿತಿರುತ್ತಾರೆ. ಕೋತಿಗಳು ಮಾಡುವ ಕಿತಾಪತಿ ಒಂದೆರಡಲ್ಲ. ಇಲ್ಲೊಂದು ಮಂಗಗಳ ಗುಂಪಿನ ಕೈಗೆ ನಾಯಿಯೊಂದು ಸಿಕ್ಕಿದೆ. 

Written by - Chetana Devarmani | Last Updated : Nov 7, 2023, 03:09 PM IST
  • ಕೋತಿ ನಾಯಿಯ ವಿಡಿಯೋ
  • ಮಂಗನಾಟಕ್ಕೆ ರೋಸಿಹೋದ ಶ್ವಾನ
  • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
ಕೋತಿಗಳ ಕೈಗೆ ಸಿಕ್ಕ ನಾಯಿ ಪಾಡು ಯಾರಿಗೂ ಬೇಡ.. ಹಲ್ಲು ಕಿತ್ತಲು ಹೊರಟ ಮಂಗಗಳ ಕಿತಾಪತಿ ನೋಡಿ..! title=

Monkey Dog Video : ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳಿಗೆ ಅದರದ್ದೇ ಆದ ಅಭಿಮಾನಿಗಳಿದ್ದಾರೆ. ಮಂಗನಾಟ ನೋಡಲಂತೂ ನೆಟ್ಟಿಗರು ಕಾದು ಕುಳಿತಿರುತ್ತಾರೆ. ಕೋತಿಗಳು ಮಾಡುವ ಕಿತಾಪತಿ ಒಂದೆರಡಲ್ಲ. ಇಲ್ಲೊಂದು ಮಂಗಗಳ ಗುಂಪಿನ ಕೈಗೆ ನಾಯಿಯೊಂದು ಸಿಕ್ಕಿದೆ. ಅದರ ಪಾಡು ದೇವರಿಗೆ ಪ್ರೀತಿ ಎಂಬಂತಾಗಿದೆ. 

ಇದನ್ನೂ ಓದಿ: Snake Video : ಹಾವು ಪೊರೆಬಿಡುವ ವಿಚಿತ್ರ ದೃಶ್ಯ ವೈರಲ್‌ 

ಪ್ರಸ್ತುತ ಟ್ವಿಟರ್‌ನಲ್ಲಿ ಸುತ್ತುತ್ತಿರುವ ಈ ವಿಡಿಯೋ ಎಲ್ಲರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದೆ. ನಾಯಿಯ ಹಲ್ಲಿನ ಆಪರೇಷನ್‌ ಮಾಡಲು ಈ ಕೋತಿಗಳಿ ರೆಡಿ ಆದಂತಿದೆ. ಒಂದಷ್ಟು ಕೋತಿಗಳು ಒಂದು ನಾಯಿಯ ಸುತ್ತ ಇರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. 

 

 

ಅದರಲ್ಲಿ ಒಂದು ಮಂಗ ನಾಯಿಯ ಬಾಯಿ ತೆರೆದು ನೋಡುತ್ತದೆ. ಹಲ್ಲುಗಳನ್ನು ಮುಟ್ಟಿ ಏನೋ ಹುಡುಕುತ್ತದೆ. ಅಷ್ಟರಲ್ಲಿ ಮತ್ತೆರಡು ಕೋತಿಗಳು ನಾಯಿ ಬಳಿ ಬರುತ್ತವೆ. ಒಂದು ಮಂಗ ನಾಯಿ ಬಾರಿಯನ್ನು ಅಗಲಿಸುತ್ತದೆ. ಪೂರ್ತಿ ಬಾಯಿ ತೆರೆದು ಒಳಗೆ ಕೈ ಕೂಡ ಹಾಕುತ್ತದೆ. ಮತ್ತೊಂದು ಕೋತಿ ಬಂದು ಬಾಯಿಯಲ್ಲಿ ಇಣುಕಿ ನೋಡುತ್ತದೆ. ಹೀಗೆ ಮಂಗಗಳ ಉಪಟಳಕ್ಕೆ ಈ ನಾಯಿ ರೋಸಿ ಹೋಗುತ್ತದೆ. 

ಈ ವಿಡಿಯೋವನ್ನು @sonhangxanh ಎಂಬ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ಇದನ್ನು ನೋಡಿದವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಈ ವಿಡಿಯೋವನ್ನು ಎಲ್ಲಿ ಯಾರು ಸೆರೆ ಹಿಡಿದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಕೆಂಪು ಬಣ್ಣದ ಹಾವು.. ಕಣ್ಣು ಕುಕ್ಕುವಂತಹ ಸೌಂದರ್ಯ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.  

Trending News