Viral Video: ಬೈಕ್‌ ಮೇಲೆ ವೃದ್ಧನ ಅಪಾಯಕಾರಿ ಸ್ಟಂಟ್

ಗಾಜಿಯಾಬಾದ್‌ನಲ್ಲಿ ಸೆರೆಯಾದ ಈ ವಿಡಿಯೋದಲ್ಲಿ ವೃದ್ಧನೊಬ್ಬ ಪಲ್ಸರ್ ಬೈಕ್ ಏರಿ ಹಲವಾರು ಅಪಾಯಕಾರಿ ಸ್ಟಂಟ್‌ಗಳನ್ನು ಪ್ರದರ್ಶಿಸಿದ್ದಾರೆ 19 ಸೆಕೆಂಡಿನ ಈ ಕ್ಲಿಪ್‌ನಲ್ಲಿ ವೃದ್ಧ ಬೈಕ್‌ ಮೇಲೆ ಸ್ಟಂಟ್ ಪ್ರದರ್ಶಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್‌ ಆಗುತ್ತಿದೆ. 

Written by - Chetana Devarmani | Last Updated : May 1, 2022, 05:27 PM IST
  • ಬೈಕ್‌ ಮೇಲೆ ವೃದ್ಧನ ಅಪಾಯಕಾರಿ ಸ್ಟಂಟ್
  • ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್
  • ವಿಡಿಯೋ ನೋಡಿ ನಿಬ್ಬೆರಗಾದ ನೆಟ್ಟಿಗರು
 Viral Video: ಬೈಕ್‌ ಮೇಲೆ ವೃದ್ಧನ ಅಪಾಯಕಾರಿ ಸ್ಟಂಟ್  title=
ವಿಡಿಯೋ ಸಖತ್‌ ವೈರಲ್

Viral Video: ಈ ಇಂಟರ್‌ನೆಟ್‌ ಜಮಾನದಲ್ಲಿ ಖ್ಯಾತಿಯ ಹಪಹಪಿಯಲ್ಲಿ ಒಂದಷ್ಟು ಮಂದಿ ಅಪಾಯಕಾರಿ ಸ್ಟಂಟ್ ಮಾಡುತ್ತಾರೆ. ಇದು ಅವರ ಜೀವಕ್ಕೆ ಅಪಾಯ ತಂದೊಡ್ಡುತ್ತದೆ ಎಂದು ಗೊತ್ತಿದ್ದರು ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಇಂತಹ ಸ್ಟಂಟ್ ಪ್ರದರ್ಶಿಸಲು ಹೋಗಿ ಜೀವ ಕಳೆದುಕೊಂಡವರೂ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೃದ್ಧನೋರ್ವ ಬೈಕ್‌ ಮೇಲೆ ಇಂತಹ ಸಾಹಸ ಪ್ರದರ್ಶನ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾನೆ. 

ಇದನ್ನೂ ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ- ಲಕ್ಷ್ಮಣ ಸವದಿ

ಗಾಜಿಯಾಬಾದ್‌ನಲ್ಲಿ ಸೆರೆಯಾದ ಈ ವಿಡಿಯೋದಲ್ಲಿ ವೃದ್ಧನೊಬ್ಬ ಪಲ್ಸರ್ ಬೈಕ್ ಏರಿ ಹಲವಾರು ಅಪಾಯಕಾರಿ ಸ್ಟಂಟ್‌ಗಳನ್ನು ಪ್ರದರ್ಶಿಸಿದ್ದಾರೆ 19 ಸೆಕೆಂಡಿನ ಈ ಕ್ಲಿಪ್‌ನಲ್ಲಿ ವೃದ್ಧ ಬೈಕ್‌ ಮೇಲೆ ಸ್ಟಂಟ್ ಪ್ರದರ್ಶಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್‌ ಆಗುತ್ತಿದೆ.

 

 

ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕ್ರಮ ಕೈಗೊಂಡಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಿದ್ದಾರೆ. ಈ ಫೋಟೋವನ್ನು ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ. ಈ ದೃಶ್ಯವನ್ನು ಕಂಡ ನೆಟ್ಟಿಗರು ನಿಬ್ಬರೆಗಾಗುತ್ತಿದ್ದಾರೆ. 

ಇದನ್ನೂ ಓದಿ: ಅಧಿಕಾರಿಗಳು ಕೂಡ ಜನರ ಜೊತೆ ಬೆರೆಯುವ ಪರಿಪಾಠ ಬೆಳೆಸಿಕೊಳ್ಳಬೇಕು-ಕಿರಣ್ ಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News