ತಮಿಳುನಾಡು : ರಾಜ್ಯದ ಥೇಣಿ ಜಿಲ್ಲೆಯ ಪೆರಿಯಾಕುಲಂ ಪ್ರದೇಶದ ಕೈಥೆ ಮಿಲ್ಲತ್ ನಗರದಲ್ಲಿ ದೇಶದ್ರೋಹಿ ಕೃತ್ಯ ಒಂದು ನಡೆದಿದೆ. ಅಪರಿಚಿತರು ರಸ್ತೆಯಲ್ಲಿ ಓಡಾಡುತ್ತಿದ್ದ ನಾಯಿಯೊಂದಕ್ಕೆ ರಾಷ್ಟ್ರಧ್ವಜ ಕಟ್ಟಿದ ಘಟನೆ ನಡೆದಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇತ್ತೀಚಿಗೆ ದೇಶಕ್ಕೆ ಅವಮಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮೊನ್ನೆ ತಾನೆ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದು, ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಇದೀಗ ತಮಿಳುನಾಡಿನಲ್ಲಿ ಬೀದಿ ನಾಯಿಗೆ ರಾಷ್ಟ್ರಧ್ವಜ ಕಟ್ಟಿ ಅವಮಾನ ಮಾಡಿದಂತ ಪ್ರಸಂಗ ನಡೆದಿದೆ. ರಾಷ್ಟ್ರಧ್ವಜವನ್ನು ಪವಿತ್ರವೆಂದು ಪರಿಗಣಿಸುವ ಜನರಿಗೆ ಈ ಕೃತ್ಯ ನೋವನ್ನುಂಟು ಮಾಡಿದೆ.
ಇದನ್ನೂ ಒದಿ: Avatar 2 box office : 2 ದಿನಗಳಲ್ಲಿ 100 ಕೋಟಿ ಬಾಚಿದ ಅವತಾರ 2..!
ಅಲ್ಲದೆ ರಸ್ತೆಯಲ್ಲಿ ಓಡಾಡುವ ನಾಯಿಗೆ ಕಟ್ಟಿದ್ದ ರಾಷ್ಟ್ರಧ್ವಜವನ್ನು ತೆಗೆದು ನಗರಸಭೆ ನೌಕರರು ಪೊಲೀಸರ ನೆರವಿನಿಂದ ಕೃತ್ಯ ಏಸಗಿದವರ ಹುಡುಕಾಟದಲ್ಲಿದ್ದಾರೆ. ಇನ್ನು ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರರ ಆಗ್ರಹವಾಗಿದೆ. ಈ ಕುರಿತ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.