Sri Lanka Viral Video: ಶ್ರೀಲಂಕಾ ಪ್ರಧಾನಿ ಹಾಸಿಗೆಯ ಮೇಲೆ WWE ರೆಸ್ಲಿಂಗ್, ವಿಡಿಯೋ ನೋಡಿ

Sri Lanka Economic Crisis: ದೇಶದ ಅತ್ಯಂತ ಸುರಕ್ಷಿತ ಸ್ಥಳಗಳು ಎಂದು ಹೇಳಲಾಗುವ ಈ ಠಿಕಾಣಿಗಳಲ್ಲಿ ಪ್ರತಿಭಟನಾಕಾರರು ಮೋಜು-ಮಸ್ತಿಗಿಳಿದಿದ್ದಾರೆ. ಶ್ರೀಲಂಕಾದಲ್ಲಿ ರಾಷ್ಟ್ರಪತಿ ಭವನ ಹಾಗೂ ಪ್ರಧಾನಿ ನಿವಾಸಗಳು ಪಿಕ್ನಿಕ್ ತಾಣಗಳಾಗಿ ಮಾರ್ಪಟ್ಟಿವೆ. ಪ್ರತಿಭಟನಾಕಾರರ ಹಲವು ವಿಡಿಯೋಗಳು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಹಲವರು ಅಡುಗೆ ಮಾಡುತ್ತಿರುವುದು, ಕೇರಂ ಬೋರ್ಡ್ ಆಡುತ್ತಿರುವುದನ್ನು ನೀವು ನೋಡಬಹುದು.  

Written by - Nitin Tabib | Last Updated : Jul 11, 2022, 02:50 PM IST
  • ಶ್ರೀಲಂಕಾದಲ್ಲಿ ರಾಜಕೀಯ ಗೊಂದಲ ಮುಂದುವರೆದಿದೆ.
  • ದೇಶದ ಜನತೆ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
  • ಪ್ರಧಾನಿ ವಿಕ್ರಮಸಿಂಘೆ ರಾಜೀನಾಮೆ ನೀಡಿದ್ದು, ಜುಲೈ 13 ರಂದು ರಾಜಪಕ್ಸೆ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.
Sri Lanka Viral Video: ಶ್ರೀಲಂಕಾ ಪ್ರಧಾನಿ ಹಾಸಿಗೆಯ ಮೇಲೆ WWE ರೆಸ್ಲಿಂಗ್, ವಿಡಿಯೋ ನೋಡಿ title=
Wrestling At Sri Lanka PM House

Sri Lanka Economic  Crisis: ಶ್ರೀಲಂಕಾದಲ್ಲಿ ರಾಜಕೀಯ ಗೊಂದಲ ಮುಂದುವರೆದಿದೆ. ದೇಶದ ಜನತೆ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಪ್ರಧಾನಿ ವಿಕ್ರಮಸಿಂಘೆ ರಾಜೀನಾಮೆ ನೀಡಿದ್ದು, ಜುಲೈ 13 ರಂದು ರಾಜಪಕ್ಸೆ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಪ್ರತಿಭಟನಾಕಾರರು ಅವರ ನಿವಾಸಕ್ಕೆ ಪ್ರವೇಶಿಸಿದಾಗ ರಾಷ್ಟ್ರಪತಿ ಮತ್ತು ಪ್ರಧಾನಿ ರಾಜೀನಾಮೆಗೆ ಒತ್ತಡ ಹೆಚ್ಚಾಗಿದೆ. ಅಧ್ಯಕ್ಷ ರಾಜಪಕ್ಸೆ ದೇಶ ಬಿಟ್ಟು ಪಲಾಯನಗೈದಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಪಕ್ಸೆ ರಾಜೀನಾಮೆ ನೀಡುವವರೆಗೂ ರಾಷ್ಟ್ರಪತಿ ಭವನ ಮತ್ತು ಪ್ರಧಾನಿ ನಿವಾಸದಲ್ಲಿಯೇ ತಂಗುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ.

ದೇಶದ ಈ ಸುರಕ್ಷಿತ ಸ್ಥಳಗಳು ಎನ್ನಲಾಗುವ ಈ ಜಾಗಗಳಲ್ಲಿ ಪ್ರತಿಭಟನಾಕಾರರು ಮೋಜು ಮಾಡುತ್ತಿದ್ದಾರೆ. ರಾಷ್ಟ್ರಪತಿ ಭವನ ಮತ್ತು ಪ್ರಧಾನಿ ನಿವಾಸ ಪಿಕ್ನಿಕ್ ತಾಣಗಳಾಗಿ ಮಾರ್ಪಟ್ಟಿವೆ. ಪ್ರತಿಭಟನಾಕಾರರ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್ ಆಗುತ್ತಿದ್ದು, ಈ ವಿಡಿಯೋಗಳಲ್ಲಿ ಕೆಲವರೂ ಅಡುಗೆ ಮಾಡುತ್ತಿರುವುದು, ಕೇರಂ ಬೋರ್ಡ್ ಆಡುತ್ತಿರುವುದು ಕಂಡುಬಂದಿದೆ. ಕೆಲವರು ಸೋಫಾದ ಮೇಲೆ ವಿಶ್ರಮಿಸುತ್ತಿರುವುದು ಕೂಡ ನೀವು ನೋದ್ರಬಹುದು.

ಈ ವಿಡಿಯೋ ಕೂಡ ವೈರಲ್ ಆಗಿತ್ತು
ಪ್ರಸ್ತುತ ಶ್ರೀಲಂಕಾದಲ್ಲಿನ ಅರಾಜಕತೆಯ ಕುರಿತಾದ ಮತ್ತೊಂದು ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ ಪ್ರತಿಭಟನಾಕಾರರು ಪ್ರಧಾನ ಮಂತ್ರಿ ಹಾಸಿಗೆಯ ಮೇಲೆ WWE ರೆಸ್ಲಿಂಗ್ ಆಡುತ್ತಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಶೇರ್ ಆಗುತ್ತಿದೆ. ಪ್ರತಿಭಟನಾಕಾರರು ಹಾಸಿಗೆಯ ಮೇಲೆ WWE ಕುಸ್ತಿಪಟುಗಳನ್ನು ಅನುಕರಿಸುವುದನ್ನು ನೋಡಬಹುದು.

ಅಧ್ಯಕ್ಷ ರಾಜಪಕ್ಸೆ ಬುಧವಾರ ರಾಜೀನಾಮೆ ನೀಡಲಿದ್ದಾರೆ
ಏತನ್ಮಧ್ಯೆ, ಅಧ್ಯಕ್ಷರು ಎಲ್ಲಿದ್ದಾರೆ ಎಂಬುದು ಇದುವರೆಗೆ ಯಾರಿಗೂ ಕೂಡ ಗೊತ್ತಿಲ್ಲ. ಪ್ರತಿಭಟನಾಕಾರರು ನಗರಕ್ಕೆ ನುಗ್ಗಿದ ನಂತರ ಅವರು ಏಕೈಕ ಸಂವಹನ ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಭಯವರ್ಧನೆ ಅವರನ್ನು ಸಂಪರ್ಕಿಸಿದ್ದಾರೆ, ಬಳಿಕ ಶನಿವಾರ ತಡರಾತ್ರಿ ಬುಧವಾರ ಅಧ್ಯಕ್ಷರು ರಾಜೀನಾಮೆ ನೀಡಲಿದ್ದಾರೆ ಎಂದು ಘೋಷಿಸಿದ್ದಾರೆ. 

ಶನಿವಾರ ಸಂಜೆ ನಡೆದ ಸರ್ವಪಕ್ಷ ಸಭೆಯ ನಂತರ ಅಭಯವರ್ಧನೆ ಅವರು ರಾಜೀನಾಮೆಯನ್ನು ಕೋರಿ ನಾಯಕರಿಗೆ ಪತ್ರ ಬರೆದಾಗ, ಅಧ್ಯಕ್ಷ ರಾಜಪಕ್ಸೆ ಅವರು ತಮ್ಮ ರಾಜೀನಾಮೆ ನಿರ್ಧಾರದ ಬಗ್ಗೆ ಸ್ಪೀಕರ್‌ಗೆ ಮಾಹಿತಿ ನೀಡಿದ್ದಾರೆ. ಶ್ರೀಲಂಕಾದಲ್ಲಿ ತೀವ್ರಗೊಂಡ ಸರ್ಕಾರಿ ವಿರೋಧಿ ಪ್ರತಿಭಟನೆಗಳ ಹಿನ್ನೆಲೆ, ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಹಿರಿಯ ಸಹೋದರ ಮಹಿಂದಾ ರಾಜಪಕ್ಸೆ ಅವರು ಮೇ 9 ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.

ಸಚಿವ ಸಂಪುಟ ಸಭೆ ನಡೆಸಿದ ಪ್ರತಿಭಟನಾಕಾರರು
ಸರ್ಕಾರ ವಿರೋಧಿ ಪ್ರತಿಭಟನಾಕಾರರು ಭಾನುವಾರ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ನಿವಾಸದಲ್ಲಿ ಪ್ರಾಕ್ಸಿ ಕ್ಯಾಬಿನೆಟ್ ಸಭೆ ನಡೆಸಿದ್ದಾರೆ ಮತ್ತು ಅವರ ನೇತೃತ್ವದ ಸರ್ಕಾರವನ್ನು ಲೇವಡಿ ಮಾಡಲು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೊಂದಿಗೆ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ-SriLanka Economic Crisis: ಪಿಕ್ನಿಕ್ ತಾಣವಾಗಿ ಮಾರ್ಪಟ್ಟ ರಾಷ್ಟ್ರಪತಿ ಭವನ, ಅಡುಗೆ ಕ್ಯಾರಂ ಆಟದ ಮೂಲಕ ಪ್ರತಿಭಟನಾಕಾರರ ಮೋಜು ಮಸ್ತಿ

ಶನಿವಾರ ಪ್ರತಿಭಟನಾಕಾರರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಸಾರ್ವಜನಿಕರು ರಾಷ್ಟ್ರಪತಿಗಳ ಸಚಿವಾಲಯ, ರಾಷ್ಟ್ರಪತಿ ಭವನ ಹಾಗೂ ಪ್ರಧಾನಿಯವರ ಅಧಿಕೃತ ನಿವಾಸ ಟೆಂಪಲ್ ಟ್ರೀಗೆ ಆಗಮಿಸಿದ್ದಾರೆ. ಪ್ರಾಕ್ಸಿ ಕ್ಯಾಬಿನೆಟ್ ಸಭೆಯಲ್ಲಿ, ಪ್ರತಿಭಟನಾಕಾರರು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಮನೆಗೆ ಬೆಂಕಿ ಹಚ್ಚುವ ಬಗ್ಗೆಯೂ ಕೂಡ ಚರ್ಚೆ ನಡೆಸಿದ್ದಾರೆ. 

ಇದನ್ನೂ ಓದಿ-Shooting at House Party: ಹೌಸ್ ಪಾರ್ಟಿಯಲ್ಲಿ ಗುಂಡಿನ ದಾಳಿ: 3 ಸಾವು, ಇಬ್ಬರಿಗೆ ಗಾಯ

ಈ ವೇಳೆ ಪ್ರತಿಭಟನಾ ಕಾರರು ನಡೆಸಿದ ಪ್ರಾಕ್ಸಿ ಐಎಂಎಫ್ ಸಭೆಯಲ್ಲಿ ಓರ್ವ ವಿದೇಶಿ ಕೂಡ ಶಾಮೀಲಾಗಿದ್ದ ಮತ್ತು ಇತರ ಪ್ರತಿಭಟನಾಕಾರರ ಜೊತೆಗೆ ಆವರಣಕ್ಕೆ ಭೇಟಿ ನೀಡುತ್ತಾನೆ. ಶನಿವಾರ ರಾತ್ರಿ ಪ್ರತಿಭಟನಾಕಾರರು ರಾಷ್ಟ್ರಪತಿ ಭವನದ ಸ್ವಿಮ್ಮಂಗ್ ಪೂಲ್, ಮಲಗುವ ಕೋಣೆ ಇತ್ಯಾದಿ ಕಡೆಗಳಲ್ಲಿ ವಿಹಾರ ನಡೆಸುತ್ತಿರುವುದನ್ನು ಗಮನಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News