ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಪ್ರತಿಭಟನಾಕಾರರು ಪ್ರಧಾನಿ ನಿವಾಸದ ಹೊರಗೆ ಗದ್ದಲವನ್ನು ಸೃಷ್ಟಿಸಿದ್ದಾರೆ. ಇದೇ ವೇಳೆ ಜೋಡಿಯೊಂದು ಪರಸ್ಪರ ಚುಂಬಿಸುತ್ತಿರುವುದು ಕಂಡುಬಂದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಮಾಲ್ಡಿವ್ಸ್ ಗೆ ಪಲಾಯನ ಮಾಡಿದ ನಂತರ ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆ ಅವರನ್ನು ಬುಧುವಾರದಂದು ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
Sri Lanka Economic Crisis: ದೇಶದ ಅತ್ಯಂತ ಸುರಕ್ಷಿತ ಸ್ಥಳಗಳು ಎಂದು ಹೇಳಲಾಗುವ ಈ ಠಿಕಾಣಿಗಳಲ್ಲಿ ಪ್ರತಿಭಟನಾಕಾರರು ಮೋಜು-ಮಸ್ತಿಗಿಳಿದಿದ್ದಾರೆ. ಶ್ರೀಲಂಕಾದಲ್ಲಿ ರಾಷ್ಟ್ರಪತಿ ಭವನ ಹಾಗೂ ಪ್ರಧಾನಿ ನಿವಾಸಗಳು ಪಿಕ್ನಿಕ್ ತಾಣಗಳಾಗಿ ಮಾರ್ಪಟ್ಟಿವೆ. ಪ್ರತಿಭಟನಾಕಾರರ ಹಲವು ವಿಡಿಯೋಗಳು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಹಲವರು ಅಡುಗೆ ಮಾಡುತ್ತಿರುವುದು, ಕೇರಂ ಬೋರ್ಡ್ ಆಡುತ್ತಿರುವುದನ್ನು ನೀವು ನೋಡಬಹುದು.
SriLanka Economic Crisis:ಶ್ರೀಲಂಕಾದ ಜನರು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ರಾಜೀನಾಮೆಗೆ ಒತ್ತಾಯಿಸಿ, ರಾಷ್ಟ್ರಪತಿ ಭವನ ಮತ್ತು ಪ್ರಧಾನಿ ನಿವಾಸದಲ್ಲಿ ಜನರು ಬೀಡು ಬಿಟ್ಟಿದ್ದಾರೆ. ದೇಶದ ಅತ್ಯಂತ ಸುರಕ್ಷಿತ ಸ್ಥಳಗಳು ಇದೀಗ ಪಿಕ್ನಿಕ್ ತಾಣಗಳಾಗಿ ಮಾರ್ಪಟ್ಟಿವೆ.
ಶ್ರೀಲಂಕಾದ ರಾಜಧಾನಿಯಲ್ಲಿರುವ ಅಧ್ಯಕ್ಷ ಗೋತಬಯ ರಾಜಪಕ್ಸೆ ಅಧಿಕೃತ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ಮುತ್ತಿಗೆ ಹಾಕಿದ ಕೆಲವೇ ಗಂಟೆಗಳ ನಂತರ, ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಲು ಶನಿವಾರದಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
"ಸರ್ಕಾರದ ಮುಂದುವರಿಕೆ ಮತ್ತು ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶ್ರೀಲಂಕಾದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಾನಿಲ್ ವಿಕ್ರಮಸಿಂಘೆ ಘೋಷಿಸಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ರಾಜಕೀಯ ಕ್ಷೀಪ್ರ ಬೆಳವಣಿಗೆಯೊಂದರಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಂಡಿದ್ದ ರಣಿಲ್ ವಿಕ್ರಮಸಿಂಘೆ ಈಗ ಮತ್ತೆ ಶ್ರೀಲಂಕಾದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.