ʼಕಾಂಡೋಮ್‌ʼ ಬರೀ ಅದಕಷ್ಟೇ ಅಲ್ಲʼ.. ಹೀಗೂ ಒಳಸಬಹುದು ನೋಡಿ..!

ಕಾಂಡೋಮ್‌ ಈ ಹೆಸರು ಕೇಳಿದ ತಕ್ಷಣ ನಿಮ್ಮ ಮೈಂಡ್‌ಗೆ ಏನೇನೋ ವಿಚಾರಗಳು ಬರ್ತವೇ ಅಲ್ವಾ... ಆದ್ರೆ ಅದೇ ಕಾಂಡೋಮ್‌ ತಗೊಳ್ಳೋಕೆ ಮೆಡಿಕಲ್‌ ಶಾಪ್‌ಗೆ ಹೋಗೋದು ಒಂದೇ.. ಗಟ್ಟಿ ಧೈರ್ಯ ಮಾಡಿ ಅಪ್ಪ ಅಮ್ಮನ ಎದುರು ಲವ್‌ ಮ್ಯಾಟರ್‌ ತಿಳಿಸಿಸೋದು ಒಂದೇ.. ಎರಡುಕ್ಕೂ ಗುಂಡಿಗೆ ಬೇಕು. ಇನ್ನು ನೀವೇನಾದ್ರೂ ಲಕ್ಷಾಂತರ ಕಾಂಡೋಮ್‌ಗಳ ಮಧ್ಯ ಪೋಷಕರ ಜೊತೆ ಇಲ್ಲವೆ ಗೆಳತಿ\ಗೆಳೆಯನ ಜೊತೆ ಇದ್ರೆ ನಿಮ್ಮ ಸ್ಥಿತಿ ಹೇಗಿರ್ಬೇಡ ಹೇಳಿ.. ಯಸ್‌ ಅಂತಹ ಅಂಗಡಿ ಕೂಡಾ ಈ ಭೂಮಿ ಮೇಲೆ ಇದೆ. ಆದ್ರೆ, ಅದು ಕಾಂಡೋಮ್‌ ಮಾರುವ ಅಂಗಡಿ ಅಂದುಕೊಂಡಿದ್ರೆ ನಿಮ್ಮ ಊಹೆ ತಪ್ಪು.

Written by - Krishna N K | Last Updated : Dec 23, 2022, 01:08 PM IST
  • ಕಾಂಡೋಮ್‌ ಈ ಹೆಸರು ಕೇಳಿದ ತಕ್ಷಣ ನಿಮ್ಮ ಮೈಂಡ್‌ಗೆ ಏನೇನೋ ವಿಚಾರಗಳು ಬರ್ತವೇ ಅಲ್ವಾ.
  • ಕಾಂಡೋಮ್‌.. ಈ ಪದಕ್ಕೆ ಯುವಕ\ಯುವತಿರಯ ಎದೆ ಬಡಿತ ಹೆಚ್ಚಿಸುವ ಶಕ್ತಿ ಇದೆ.
  • ಆದ್ರೆ ಇಲ್ಲೋಂದು ಕಾಂಡೋಮ್‌ಗಳಿಂದಲೇ ಡಿಸೈನ್‌ ಮಾಡಿರುವ ಕಫೆ ಇದ್ದು ನೋಡೋಕೆ ವಿಚಿತ್ರವಾಗಿದೆ.
ʼಕಾಂಡೋಮ್‌ʼ ಬರೀ ಅದಕಷ್ಟೇ ಅಲ್ಲʼ.. ಹೀಗೂ ಒಳಸಬಹುದು ನೋಡಿ..! title=

Condom cafe : ಕಾಂಡೋಮ್‌ ಈ ಹೆಸರು ಕೇಳಿದ ತಕ್ಷಣ ನಿಮ್ಮ ಮೈಂಡ್‌ಗೆ ಏನೇನೋ ವಿಚಾರಗಳು ಬರ್ತವೇ ಅಲ್ವಾ... ಆದ್ರೆ ಅದೇ ಕಾಂಡೋಮ್‌ ತಗೊಳ್ಳೋಕೆ ಮೆಡಿಕಲ್‌ ಶಾಪ್‌ಗೆ ಹೋಗೋದು ಒಂದೇ.. ಗಟ್ಟಿ ಧೈರ್ಯ ಮಾಡಿ ಅಪ್ಪ ಅಮ್ಮನ ಎದುರು ಲವ್‌ ಮ್ಯಾಟರ್‌ ತಿಳಿಸಿಸೋದು ಒಂದೇ.. ಎರಡುಕ್ಕೂ ಗುಂಡಿಗೆ ಬೇಕು. ಇನ್ನು ನೀವೇನಾದ್ರೂ ಲಕ್ಷಾಂತರ ಕಾಂಡೋಮ್‌ಗಳ ಮಧ್ಯ ಪೋಷಕರ ಜೊತೆ ಇಲ್ಲವೆ ಗೆಳತಿ\ಗೆಳೆಯನ ಜೊತೆ ಇದ್ರೆ ನಿಮ್ಮ ಸ್ಥಿತಿ ಹೇಗಿರ್ಬೇಡ ಹೇಳಿ.. ಯಸ್‌ ಅಂತಹ ಅಂಗಡಿ ಕೂಡಾ ಈ ಭೂಮಿ ಮೇಲೆ ಇದೆ. ಆದ್ರೆ, ಅದು ಕಾಂಡೋಮ್‌ ಮಾರುವ ಅಂಗಡಿ ಅಂದುಕೊಂಡಿದ್ರೆ ನಿಮ್ಮ ಊಹೆ ತಪ್ಪು.

ಕಾಂಡೋಮ್‌.. ಈ ಪದಕ್ಕೆ ಯುವಕ\ಯುವತಿರಯ ಎದೆ ಬಡಿತ ಹೆಚ್ಚಿಸುವ ಶಕ್ತಿ ಇದೆ. ಅಲ್ಲದೆ, ಅಂಗಡಿಗೆ ಹೋಗಿ ಕಾಂಡೋಮ್‌ ಕೋಡಿ ಅಂದ್ರೆ ಏನೋ ದೊಡ್ಡ ಅಪರಾಧ ಕೃತ್ಯ ಮಾಡೋಕೆ ಹೋಗ್ತೀದಾರೆ ಅನ್ನೊ ಥರ ಸುತ್ತ ಮುತ್ತ ಇರೋರು ನೋಡ್ತಾರೆ. ಹಾಗೆಯೇ ತಗೊಳ್ಳೋಕೆ ಹೋಗುವವರು ಸಹ ಹೆದರಿಕೊಳ್ತಾರೆ. ಆದ್ರೆ ಇಲ್ಲೋಂದು ಕಾಂಡೋಮ್‌ಗಳಿಂದಲೇ ಡಿಸೈನ್‌ ಮಾಡಿರುವ ಕಫೆ ಇದೆ. ಈ ಕಫೆಯಲ್ಲಿ ಎಲ್ಲಿ ನೋಡಿದ್ರೂ ನಿಮ್ಗೆ ಕಣ್ಣಿಗೆ ಕಾಂಡೋಮ್‌ ಬಿಟ್ರೆ ಮತ್ತೇನು ಕಾಣಲ್ಲ.

ಇದನ್ನೂ ಓದಿ: Vedha review : ಶಿವಣ್ಣನ ಖದರ್‌, ಹರ್ಷ ಮ್ಯಾಜಿಕ್‌.. ಥಿಯೆಟರ್‌ಗಳಲ್ಲಿ ಅಬ್ಬರಿಸಿ ಬೊಬ್ಬರಿದ ʼವೇದʼ..!

ಹೌದು.. ಇತ್ತೀಚಿನ ಕೆಫೆಗಳ ಥೀಮ್‌ ವಿಚಾರಕ್ಕೆ ಬಂದ್ರೆ ತುಂಬಾ ಚಿತ್ರ ವಿಚಿತ್ರವಾಗಿರುತ್ತವೆ. ಭಾರತ ಅಷ್ಟೇ ಅಲ್ಲ ವಿವಿಧ ದೇಶಗಳಲ್ಲಿನ ವಿಚಿತ್ರ ಕೆಫೆಗಳ ಐಡಿಯಾ ನೋಡಿ ತಲೆ ತಿರುಗುವಂತಿರುತ್ತವೆ. ಆದ್ರೆ ಈಗಿನ ಯುವಕರಿಗೆ ಈ ತರ ಡಿಫರೆಂಟ್ ಥೀಮ್‌ ಇರೋ ಹೊಟೇಲ್‌ಗಳಂದ್ರೆ ತುಂಬಾ ಇಷ್ಟವಾಗುತ್ತವೆ. ಅದೇ ತರ ಥಾಯ್ಲೆಂಡ್‌ನ ಕೆಫೆಯೊಂದು ಸಂಪೂರ್ಣವಾಗಿ ಕಾಂಡೋಮ್‌ ಮಯವಾಗಿದ್ದು, ಅಲ್ಲಿರುವ ಪ್ರಿತಿಯೊಂದು ವಸ್ತುವನ್ನು ನಿರೋಧಗಳಿಂದಲೇ ಡಿಸೈನ್‌ ಮಾಡಿದ್ದು, ನೋಡೋಕೆ ಕುತೂಹಲಕಾರಿಯಾಗಿದೆ.

ಈ ಕುರಿತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಸೋಹಮ್ ಸಿನ್ಹಾ, ಕಾಂಡೋಮ್‌ ಕೆಫೆಯ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕೆಫೆಯಲ್ಲಿರುವ ಪ್ರತಿಮೆಯ ಉಡುಗೆ, ಸಾಂಟಾ ಕ್ಲಾಸ್ ಗಡ್ಡ, ಕ್ರಿಸ್ಮಸ್ ಮರ, ನೇತಾಡುವ ದೀಪಗಳು ಸೇರಿದಂತೆ ಎಲ್ಲವನ್ನೂ ಸಹ ಕಾಂಡೋಮ್‌ಗಳಿಂದ ಅಲಂಕಾರ ಮಾಡಲಾಗಿದೆ. ಅಲ್ಲದೆ, ಹೂವುಗಳ ಬದಲು ಕಲರ್‌ ಕಲರ್‌ ಕಾಂಡೋಮ್‌ ಬಳಿಸಿ ಹೂವಿನಂತೆ ಆಕೃತಿ ಸಿದ್ಧಪಡಿಸಿ ಟೇಬಲ್‌ ಮೇಲೆ ಇಡಲಾಗಿದೆ.

ಇದನ್ನೂ ಓದಿ: VEDHA: ಶಿವಣ್ಣನ 125ನೇ ಸಿನಿಮಾ ‘ವೇದ’ ಸಿಕ್ತು ಅದ್ಧೂರಿ ಓಪನಿಂಗ್, ಅಭಿಮಾನಿಗಳಿಂದ ಹೋಮ

ಅಂಗಡಿಯವರ ಉದ್ದೇಶ ಏನ್‌ ಆಂದ್ರೆ, ಕಾಂಡೋಮ್ ಬಳಕೆ ಮತ್ತು ಜನ ನಿಯಂತ್ರಣದ ಪ್ರಾಮುಖ್ಯತೆಯ ಬಗ್ಗೆ ಅತಿಥಿಗಳಿಗೆ ಅರಿವು ಮೂಡಿಸುವುದಾಗಿದೆ' ಎಂದು ಸೋಹಮ್‌ ತಮ್ಮ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಅಲ್ಲದೆ, ಡಿಸೆಂಬರ್ 19 ರಂದು ಪೋಸ್ಟ್ ಮಾಡಲಾದ ಈ ವೀಡಿಯೊಗೆ 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ಲಕ್ಷಾಂತರ  ಕಾಮೆಂಟ್‌ಗಳು ಬಂದಿವೆ. ಅನೇಕ ಇನ್‌ಸ್ಟಾಗ್ರಾಮ್‌ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News