Viral Video: ರೊಟ್ಟಿ ಮಾಡುತ್ತಾ ಹೀಗೊಂದು ಹಾಡು ಹಾಡಿದ ಮಹಿಳೆ, ಬಿಗ್ ಆಫರ್ ಕೊಟ್ಟ ನಟ ಸೋನು ಸೂದ್!

Viral Video: ಬಾಲಿವುಡ್ ನಟ ಸೋನು ಸೂದ್ ಅವರ ಔದಾರ್ಯದ ಕಥೆಗಳು ಬಹುಶಃ ದೇಶಾದ್ಯಂತ ಚಿರಪರಿಚಿತವಾಗಿವೆ. ಆದರೆ ಅನೇಕ ಬಾರಿ ಅವರು ತಮ್ಮ ಟ್ವೀಟ್‌ಗಳ ಮೂಲಕ ತಮ್ಮ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. 

Written by - Chetana Devarmani | Last Updated : Jan 28, 2023, 12:32 PM IST
  • ರೊಟ್ಟಿ ಮಾಡುತ್ತಾ ಹೀಗೊಂದು ಹಾಡು ಹಾಡಿದ ಮಹಿಳೆ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
  • ಬಿಗ್ ಆಫರ್ ಕೊಟ್ಟ ನಟ ಸೋನು ಸೂದ್!
Viral Video: ರೊಟ್ಟಿ ಮಾಡುತ್ತಾ ಹೀಗೊಂದು ಹಾಡು ಹಾಡಿದ ಮಹಿಳೆ, ಬಿಗ್ ಆಫರ್ ಕೊಟ್ಟ ನಟ ಸೋನು ಸೂದ್! title=
ನಟ ಸೋನು ಸೂದ್

Viral Video: ಬಾಲಿವುಡ್ ನಟ ಸೋನು ಸೂದ್ ಅವರ ಔದಾರ್ಯದ ಕಥೆಗಳು ಬಹುಶಃ ದೇಶಾದ್ಯಂತ ಚಿರಪರಿಚಿತವಾಗಿವೆ. ಆದರೆ ಅನೇಕ ಬಾರಿ ಅವರು ತಮ್ಮ ಟ್ವೀಟ್‌ಗಳ ಮೂಲಕ ತಮ್ಮ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಇತ್ತೀಚೆಗಷ್ಟೇ ಮಹಿಳೆಯ ನಂಬರ್ ಕೇಳಿ ಆಕೆಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದು, ಅವರ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಾಸ್ತವವಾಗಿ, ಈ ಮಹಿಳೆಯ ವಿಡಿಯೋ ವೈರಲ್ ಆಗಿದೆ. ಟ್ವಿಟರ್‌ನಲ್ಲಿ, ಮುಖೇಶ್ ಎಂಬ ಬಳಕೆದಾರರು ಈ ವಿಡಿಯೋ ಶೇರ್‌ ಮಾಡಿದ್ದಾರೆ. ಇದರಲ್ಲಿ ತಾಯಿ ತನ್ನ ಮಗಳ ಹಾರೈಕೆಯ ಮೇಲೆ ಹಾಡುತ್ತಿದ್ದಾರೆ. ಮಹಿಳೆ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದು, ರೊಟ್ಟಿ ಬೇಯಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ. ಇದಾದ ನಂತರ ಆಕೆಯ ಮಗಳು ಅಡುಗೆ ಕೋಣೆಗೆ ಪ್ರವೇಶಿಸಿ ಮೊಬೈಲ್‌ನಲ್ಲಿ ತನ್ನ ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸುತ್ತಾಳೆ. ಈ ವೇಳೆ ಮಹಿಳೆ ಹಾಡನ್ನು ಗುನುಗುತ್ತಿದ್ದಾರೆ.

ಇದನ್ನೂ ಓದಿ : Desi Jugaad ನಲ್ಲಿ ಭಾರತ ಏಕೆ ನಂಬರ್ 1 ಆಗಿದೆ? ವೈರಲ್ ಆದ ಈ 10 ಫೋಟೋಗಳೇ ಉದಾಹರಣೆ

ಆಕೆಯ ಮಗಳು ತನ್ನ ತಾಯಿಯನ್ನು ಹಾಡು ಹಾಡಲು ಕೇಳುತ್ತಾಳೆ. ಸ್ವಲ್ಪ ಹಿಂಜರಿಕೆಯ ನಂತರ, ಮಹಿಳೆ ಕಿಶೋರ್ ಕುಮಾರ್ ಅವರ ಸೂಪರ್‌ ಹಿಟ್ ಹಾಡು 'ಮೇರೆ ನೈನಾ ಸಾವನ್' ಅನ್ನು ಗುನುಗಿದರು. ಮಹಿಳೆ ಈ ಹಾಡನ್ನು ಎಷ್ಟು ಅದ್ಭುತವಾಗಿ ಹೇಳಿದ್ದಾಳೆ ಎಂದರೆ ಕೇಳುಗರು ಮಹಿಳೆಯ ಅಭಿಮಾನಿಗಳಾದರು. ಈ ವಿಡಿಯೋ ಪೋಸ್ಟ್ ಮಾಡಿದ ತಕ್ಷಣ ಭಾರೀ ವೈರಲ್ ಆಗಿದೆ.

 

 

ಇದಾದ ನಂತರ ನಟ ಸೋನು ಸೂದ್ ಈ ವಿಡಿಯೋಗೆ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ. ನಂಬರ್‌ ಕಳುಹಿಸಿ ಈ ತಾಯಿಗೆ ಸಿನಿಮಾವೊಂದಕ್ಕೆ ಹಾಡನ್ನು ಹಾಡುತ್ತಾರೆ ಎಂದು ಬರೆದಿದ್ದಾರೆ. ಸೋನು ಸೂದ್ ಅವರ ಈ ಉದಾರತೆಗೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : ಮದ್ಯ ಮಾರಿ, ಅರೆಸ್ಟ್‌ ಆದ ಗಿಣಿರಾಮ.! ಈ ಐನಾತಿ ಗಿಳಿಯ ಕುಕೃತ್ಯ ತಿಳಿದ್ರೆ ಶಾಕ್‌ ಆಗ್ತೀರಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News