ಮೆಟ್ರೋದಲ್ಲಿ ಕಿಸ್‌ ಆಯ್ತು.. ಹೇರ್‌ ಸ್ಟ್ರೇಟನಿಂಗ್‌ ಆಯ್ತು.. ಇದೀಗ ಕಪಾಳಮೋಕ್ಷದ ವಿಡಿಯೋ ವೈರಲ್‌

Delhi Metro Viral Video : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಸಾಕಷ್ಟು ಅಹಿತಕರ ಘಟನೆಗಳು ನಡೆಯುತ್ತಿವೆ. ಇದೀಗ ಅಂತದ್ದೇ ವಿಡಿಯೋ ಒಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದು ಮಹಿಳೆಯೊಬ್ಬರು ಪುರುಷನಿಗೆ ಕಪಾಳಮೋಕ್ಷ ಮಾಡಿದ್ದಾರೆ.   

Written by - Savita M B | Last Updated : Jul 10, 2023, 12:34 PM IST
  • ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಒಂದೊಂದು ವಿಡಿಯೋಗಳು ಸದ್ದು ಮಾಡುತ್ತಿರುತ್ತವೆ
  • ಮೆಟ್ರೋದಲ್ಲಿ ಸಾಕಷ್ಟು ಕಸಿಬಿಸಿ ಎನ್ನಿಸುವಂತಹ ಘಟನೆಗಳು ನಡೆಯುತ್ತಿವೆ
  • ದೆಹಲಿ ಮೆಟ್ರೋದಲ್ಲಿ ಎಲ್ಲವೂ ಕಾಮನ್‌ ಅನ್ನೋ ಹಾಗಾಗಿದೆ
ಮೆಟ್ರೋದಲ್ಲಿ ಕಿಸ್‌ ಆಯ್ತು.. ಹೇರ್‌ ಸ್ಟ್ರೇಟನಿಂಗ್‌ ಆಯ್ತು.. ಇದೀಗ ಕಪಾಳಮೋಕ್ಷದ ವಿಡಿಯೋ ವೈರಲ್‌ title=

Delhi : ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಒಂದೊಂದು ವಿಡಿಯೋಗಳು ಸದ್ದು ಮಾಡುತ್ತಿರುತ್ತವೆ. ಇತ್ತೀಚೆಗೆ ಎಲ್ಲರು ಗಮನಿಸಿರುವಂತೆ ಮೆಟ್ರೋದಲ್ಲಿ ಸಾಕಷ್ಟು ಕಸಿಬಿಸಿ ಎನ್ನಿಸುವಂತಹ ಘಟನೆಗಳು ನಡೆಯುತ್ತಿವೆ. ಅದರಲ್ಲೂ ದೆಹಲಿ ಮೆಟ್ರೋದಲ್ಲಿ ಎಲ್ಲವೂ ಕಾಮನ್‌ ಅನ್ನೋ ಹಾಗಾಗಿದೆ. 

ಹೌದು ಕೆಲವು ದಿನಗಳಹಿಂದೆ ದೆಹಲಿ ಮೆಟ್ರೋದಲ್ಲಿ ಕಿಸ್‌ ಮಾಡಿರುವ ವಿಡಿಯೋವೊಂದು ವೈರಲ್‌ ಆಗಿತ್ತು.. ಇದನ್ನು ನೋಡಿದ ನೆಟ್ಟಿಗರು ಇನ್ನೂ ಈ ಕಣ್ಣಲ್ಲಿ ಏನೆನೆಲ್ಲಾ ನೋಡಬೇಕೋ ಎಂದೆಲ್ಲಾ ಕಾಮೆಂಟ್‌ ಮಾಡಿದ್ದರು. ಇದಲ್ಲದೇ ಯುವತಿಯೊಬ್ಬಳು ಮೆಟ್ರೋದಲ್ಲಿ ಹೇರ್‌ ಸ್ಟ್ರೇಟನಿಂಗ್‌ ಮಾಡಿಕೊಳ್ಳುತ್ತಿರುವ ಪೋಸ್ಟ್‌ ಸಹ ಸಾಕಷ್ಟು ಸದ್ದು ಮಾಡುತ್ತಿತ್ತು.

ಇದನ್ನೂ ಓದಿ-ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿ ಬಿಡುಗಡೆ: ಕರ್ನಾಟಕಕ್ಕೆ ಯಾವ ಸ್ಥಾನ ಗೊತ್ತಾ?

ಇದೀಗ ಮತ್ತೊಂದು ಘಟನೆ ಮೆಟ್ರೋದಲ್ಲಿ ನಡೆದಿದ್ದು, ಶೇರ್‌ ಮಾಡಲಾಗಿರುವ ವಿಡಿಯೋದಲ್ಲಿರುವ ಮಹಿಳೆ ಕಂಪಾರ್ಟ್‌ಮೆಂಟ್‌ನಲ್ಲಿರುವ ಎಲ್ಲರ ಮುಂದೆಯೇ ಮಹಿಳೆಯೊಬ್ಬಳು ತನ್ನ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಇನ್ನು ಈ ವಿಡಿಯೋದಲ್ಲಿ ಪಕ್ಕದಲ್ಲಿ ನಿಂತು ಆತನ ಮುಂದೆ ಕಿರುಚಾಡುತ್ತಿರುವುದು ಕಂಡುಬಂದಿದೆ. ಅವರಿಬ್ಬರ ಜಗಳಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲವಾದರೂ ಮಹಿಳೆ ಕಿರುಚಾಡಿ ಕಪಾಳಮೋಕ್ಷ ಮಾಡಿರುವುದು ಕಂಡುಬಂದಿದೆ. 

ಇನ್ನು ಈ ವಿಡಿಯೋ ಇದುವರೆಗರೆಗೂ 67 ಸಾವಿರಕ್ಕೂ ಹೆಚ್ಚು ವೀವ್ಸ್‌ ಬಂದಿದ್ದು, ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಿಡಿಯೋವನ್ನು ಕಪಾಂರ್ಟ್‌ಮೆಂಟ್‌ನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ- Rain Alert: ಈ ಭಾಗಗಳಲ್ಲಿ ಧಾರಾಕಾರ ಮಳೆಯ ಭೀತಿ: ಪ್ರವಾಹ ಪರಿಸ್ಥಿತಿ ನಿರ್ಮಾಣ! IMD ಎಚ್ಚರಿಕೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News