ಕಾಂಡೋಮ್ ಗಳನ್ನು ಬಳಸಿ ಗೌನ್ ತಯಾರಿಸಿದ ವ್ಯಕ್ತಿ, ಕಾರಣ ಕೇಳಿ ಆಶ್ಚರ್ಯಚಕಿತರಾಗುತ್ತಿದ್ದಾರೆ ಜನ.. ವಿಡಿಯೋ ನೋಡಿ!

Trending Video: ಗುನ್ನಾರ್ ಡೆಥರೇಜ್ ಎಂಬ ಈ ಫ್ಯಾಷನ್ ಡಿಸೈನರ್ ಯೂಟ್ಯೂಬ್‌ನಲ್ಲಿ ಗೌನ್ ವೊಂದರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಲೈಂಗಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಅವಧಿ ಮೀರಿದ ಕಾಂಡೋಮ್‌ಗಳನ್ನು ಬಳಸಿ ಅವರು ಈ ಗೌನ್ ವಿನ್ಯಾಸಗೊಳಿಸಿದ್ದಾರೆ. (Viral News In Kannada)  

Written by - Nitin Tabib | Last Updated : Dec 16, 2023, 04:46 PM IST
  • ಈ ವಿಡಿಯೋ ಹಂಚಿಕೊಂಡ ಬಳಿಕ ಅದಕ್ಕೆ ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.
  • ಈ ವಿಡಿಯೋಗೆ ಹಲವರು ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ತನ್ನ ಪ್ರತಿಕ್ರಿಯೆಯಲ್ಲಿ ಬರೆದುಕೊಂಡ ಓರ್ವ ಬಳಕೆದಾರರು,
  • 'ಜಗತ್ತಿನಲ್ಲಿ ಪ್ರತಿಭೆಗೆ ಕೊರತೆಯಿಲ್ಲ' ಎಂದಿದ್ದಾರೆ, ಮತ್ತೊರ್ವ ಬಳಕೆದಾರರು 'ಇದು ಅದ್ಭುತವಾಗಿದೆ' ಎಂದಿದ್ದಾರೆ.
ಕಾಂಡೋಮ್ ಗಳನ್ನು ಬಳಸಿ ಗೌನ್ ತಯಾರಿಸಿದ ವ್ಯಕ್ತಿ, ಕಾರಣ ಕೇಳಿ ಆಶ್ಚರ್ಯಚಕಿತರಾಗುತ್ತಿದ್ದಾರೆ ಜನ.. ವಿಡಿಯೋ ನೋಡಿ! title=

Condom Gown Viral Video: ಫ್ಯಾಷನ್ ಡಿಸೈನರ್‌ಗಳು ಏನು ಬೇಕಾದರೂ ಬಳಸಿ ವಸ್ತ್ರ ವಿನ್ಯಾಸಗೊಳಿಸುವಲ್ಲಿ ಪರಿಣಿತರಗಿರುತ್ತಾರೆ.  ಇತ್ತೀಚಿಗೆ ಇಂತಹುದೇ ಒಂದು ವಿಚಿತ್ರ ವಸ್ತ್ರವಿನ್ಯಾಸದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಾಂಡೋಮ್ ಸಹಾಯದಿಂದ ವಿಶೇಷ ಗೌನ್ ಸಿದ್ಧಪಡಿಸಿದ್ದಾನೆ. ಇದರ ಹಿಂದಿನ ಕಾರಣವನ್ನೂ ಕೂಡ ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋ ನೋಡಿ ಜನರು ಭಾರಿ ಆಶ್ಚರ್ಯಗೊಂಡಿದ್ದು, ಡಿಸೈನರ್ ಅನ್ನು ಶ್ಲಾಘಿಸುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಅವರು 'ಗೌನ್' ತಯಾರಿಸುವ ಪ್ರಕ್ರಿಯೆಯನ್ನು ಸಹ ಹಂಚಿಕೊಂಡಿದ್ದಾರೆ.(Viral News In Kannada)

ಗುನ್ನಾರ್ ಡೆಥರೇಜ್ ಎಂಬ ಈ ಫ್ಯಾಷನ್ ಡಿಸೈನರ್ ತನ್ನ ಈ ಗೌನ್ ತಯಾರಿಸುವ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಲೈಂಗಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಅವಧಿ ಮೀರಿದ ಕಾಂಡೋಮ್‌ಗಳನ್ನು ಬಳಸಿ ಅವರು ಗೌನ್ ವಿನ್ಯಾಸಗೊಳಿಸಿದ್ದಾರೆ. "ನಾನು ಕಾಂಡೋಮ್‌ಗಳಿಂದ ಗೌನ್ ತಯಾರಿಸಿದ್ದೇನೆ ಮತ್ತು ಇದು ಆಸಕ್ತಿದಾಯಕವಾಗಿದೆ" ಎಂದು ಡೆಥೆರೇಜ್ ವೀಡಿಯೊದ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಕಾಂಡೋಮ್‌ಗಳನ್ನು ಹೂವಿನ ಆಕಾರಕ್ಕೆ ಪರಿವರ್ತಿಸಲು ವವರು ಪಿನ್‌ಗಳು ಮತ್ತು ಜಿಪ್ ಟೈಗಳನ್ನು ಬಳಸುತ್ತಿರುವುದನ್ನು ವಿಡಿಯೋ ಕ್ಲಿಪ್ ನಲ್ಲಿ ನೀವು ನೋಡಬಹುದಾಗಿದೆ. ನಂತರ ಅವರು ಅವುಗಳಿಗೆ ವಿವಿಧ ಬಣ್ಣಗಳನ್ನು ಸಿಂಪಡಿಸುತ್ತಾರೆ.  ವೀಡಿಯೊ ಮುಂದುವರೆದಂತೆ, ಅವರು ಕಾಂಡೋಮ್ ಅನ್ನು ಗೌನ್ ಒಂದೊಂದಾಗಿ ಹಚ್ಚಿ ಹೊಲಿಗೆ ಹಾಕುತ್ತಾರೆ ಮತ್ತು ಅದರ ಫಲಿತಾಂಶ ಅದ್ಭುತವಾಗಿದೆ ಎಂಬುದನ್ನು ನೀವು ನೋಡಬಹುದು. ಜನರು ಕೂಡ ಈ ವಿಡಿಯೋವನ್ನು ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ. ವಿಡಿಯೋ ಸಾಕಷ್ಟು ಲೈಕ್ ಗಳನ್ನು ಕೂಡ ಪಡೆದುಕೊಳ್ಳುತ್ತಿದೆ. 

ಇದನ್ನೂ ಓದಿ-OMG ! ಎರಡು ಬಾರಿ ಸಿಡಿಲು ಅಪ್ಪಳ್ಳಿಸಿದರೂ, ಈ ವ್ಯಕ್ತಿ ಸಾವನ್ನು 'ಟಕ್' ಅಂತ ಮುಟ್ಟಿ ವಾಪಸ್ ಬಂದಿದ್ದಾನೆ,,,!

ವೈರಲ್ ವಿಡಿಯೋಗೆ ಜನರ ಪ್ರತಿಕ್ರಿಯೆ ಹೇಗಿದೆ?
ಈ ವಿಡಿಯೋ ಹಂಚಿಕೊಂಡ ಬಳಿಕ ಅದಕ್ಕೆ ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಈ ವಿಡಿಯೋಗೆ ಹಲವರು ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ತನ್ನ ಪ್ರತಿಕ್ರಿಯೆಯಲ್ಲಿ ಬರೆದುಕೊಂಡ ಓರ್ವ ಬಳಕೆದಾರರು, 'ಜಗತ್ತಿನಲ್ಲಿ ಪ್ರತಿಭೆಗೆ ಕೊರತೆಯಿಲ್ಲ' ಎಂದಿದ್ದಾರೆ, ಮತ್ತೊರ್ವ ಬಳಕೆದಾರರು 'ಇದು ಅದ್ಭುತವಾಗಿದೆ' ಎಂದಿದ್ದಾರೆ. 

ಇದನ್ನೂ ಓದಿ-ಗಾಳಿಯಲ್ಲಿ ಸ್ಥಿರಗೊಂಡು ಒಂದೇ ಜಾಗಕ್ಕೆ ನಿಂತ ವಿಮಾನವನ್ನು ಎಲ್ಲಾದರೂ ನೋಡಿದ್ದೀರಾ? ಇಲ್ಲಿದೆ ವಿಡಿಯೋ!

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News