Viral Video: ಕಾರ್ಗೋ ಶಿಫ್ ಡಿಕ್ಕಿಯಾಗಿ ಮುರಿದು ಬಿದ್ದ ಸೇತುವೆ, ಭಯಾನಕ ವಿಡಿಯೋ ನೋಡಿ

ಟಾಪ್ಸ್ಕೋ ನದಿಗೆ ಒಟ್ಟು 2.6KM ಉದ್ದದ ಸೇತುವೆಯನ್ನು ಕಟ್ಟಲಾಗಿದೆ. 1977ರಲ್ಲಿ ಈ ಸೇತುವೆ ಉದ್ಘಾಟನೆಯಾಗಿದ್ದು, ವರ್ಷಕ್ಕೆ 1.1 ಕೋಟಿಗೂ ಅಧಿಕ ವಾಹನಗಳು ಇದರ ಮೇಲೆ ಸಂಚರಿಸುತ್ತಿವೆ. ಬಾಲ್ಟಿಮೋರ್‌ ಅಮೆರಿಕ ಪ್ರಮುಖ ಕೈಗಾರಿಕಾ ನಗರವಾಗಿದ್ದು, ಈ ಸೇತುವೆ ಒಳಗೊಂಡ ರಸ್ತೆ ಮಾರ್ಗ ಅಮೆರಿಕ ರಾಜಧಾನಿ ವಾಷಿಂಗ್ಟನ್‌ಗೆ ಸಂಪರ್ಕಿಸುತ್ತದೆ.

Written by - Puttaraj K Alur | Last Updated : Mar 26, 2024, 07:26 PM IST
  • ಬೃಹತ್ ಕಾರ್ಗೋ ಶಿಫ್ ಡಿಕ್ಕಿಯಾಗಿ ಕುಸಿದು ಬಿದ್ದ ಸೇತುವೆ
  • ಅಮೆರಿಕದ ಬಾಲ್ಟಿಮೋರ್‌ನಲ್ಲಿ ನಡೆದಿರುವ ಘಟನೆ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್
Viral Video: ಕಾರ್ಗೋ ಶಿಫ್ ಡಿಕ್ಕಿಯಾಗಿ ಮುರಿದು ಬಿದ್ದ ಸೇತುವೆ, ಭಯಾನಕ ವಿಡಿಯೋ ನೋಡಿ title=
ಹಡಗು ಡಿಕ್ಕಿಯಾಗಿ ಕುಸಿದ ಸೇತುವೆ!

ನವದೆಹಲಿ: ಬೃಹತ್ ಕಾರ್ಗೋ ಶಿಫ್ ಡಿಕ್ಕಿಯಾಗಿ ಸೇತುವೆ ಕುಸಿದು ಬಿದ್ದಿರುವ ಘಟನೆ ಅಮೆರಿಕದ ಬಾಲ್ಟಿಮೋರ್‌ನಲ್ಲಿ ನಡೆದಿದೆ. ಬಾಲ್ಟಿಮೋರ್ ಬಂದರಿನಿಂದ ಹೊರಡುತ್ತಿದ್ದ ಈ ಸರಕು ಸಾಗಾಣಿಕೆ ಹಡಗು ಮುಂಜಾನೆ 1:30ರ ಸುಮಾರಿಗೆ ಬಾಲ್ಟಿಮೋರ್‌ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ(Francis Scott Key bridge)ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸೇತುವೆಯ ಮೇಲೆ ಸಂಚರಿಸುತ್ತಿದ್ದ ಹಲವಾರು ವಾಹನಗಳು ಟಾಪ್ಸ್ಕೋ ನದಿಯೊಳಗೆ ಮುಳುಗಡೆಯಾಗಿವೆ. ಇದೇ ಸಂದರ್ಭದಲ್ಲಿ ಸೇತುವೆಯ ಮೇಲೆ ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರದ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು ಎಂದು ಮೇರಿಲ್ಯಾಂಡ್ ಸಾರಿಗೆ ಕಾರ್ಯದರ್ಶಿ ಪಾಲ್ ವೈಡೆಫೆಲ್ಡ್ ಹೇಳಿದ್ದಾರೆ.

ಬೃಹತ್‌ ಕಾರ್ಗೋ ಶಿಫ್‌ ಸೇತುವೆಗೆ ಡಿಕ್ಕಿಯಾಗುತ್ತಿರುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಸೇತುವೆಗೆ ಹಡಗು ಡಿಕ್ಕಿಯಾದ ಕೂಡಲೇ ಬೆಂಕಿ ಹೊತ್ತಿಕೊಂಡು ಉರಿದಿದೆ. ಈ ಘಟನೆಗೆ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನದಿಗೆ ಬಿದ್ದ ಕಾರಿನಲ್ಲಿದ್ದ ಹಲವಾರು ಜನರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿಈ ವಿಷಕಾರಿ ಹಾವಿನ ರಕ್ತ ಇಷ್ಟೆಲ್ಲ ಕಾಯಿಲೆಗೆ ಮದ್ದು.. ಸೌಂದರ್ಯದ ಜೊತೆ ಆರೋಗ್ಯಕ್ಕಾಗಿ ಇಲ್ಲಿನ ಜನ ಕುಡಿಯೋದು ಇದನ್ನೇ!!

ಸಿಂಗಾಪುರ ಮೂಲದ ಕಾರ್ಗೋ ಶಿಫ್‌ ಸೇತುವೆಗೆ ಡಿಕ್ಕಿಯಾಗಿದೆ. ಪರಿಣಾಮ ಸೇತುವೆಯ ಒಂದು ಭಾಗ ಕುಸಿದುಬಿದ್ದಿದೆ. ಪರಿಣಾಮ 20ಕ್ಕೂ ಹೆಚ್ಚು ಕಾರುಗಳು ನೀರಿಗೆ ಬಿದ್ದಿವೆ. ತಾಂತ್ರಿಕ ವೈಫಲ್ಯದಿಂದ ಈ ಘಟನೆ ನಡೆದಿದೆಯೋ ಅಥವಾ ಉಗ್ರರ ಕೃತ್ಯವೋ ಅನ್ನೋದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.  

ಟಾಪ್ಸ್ಕೋ ನದಿಗೆ ಒಟ್ಟು 2.6KM ಉದ್ದದ ಸೇತುವೆಯನ್ನು ಕಟ್ಟಲಾಗಿದೆ. 1977ರಲ್ಲಿ ಈ ಸೇತುವೆ ಉದ್ಘಾಟನೆಯಾಗಿದ್ದು, ವರ್ಷಕ್ಕೆ 1.1 ಕೋಟಿಗೂ ಅಧಿಕ ವಾಹನಗಳು ಇದರ ಮೇಲೆ ಸಂಚರಿಸುತ್ತಿವೆ. ಬಾಲ್ಟಿಮೋರ್‌ ಅಮೆರಿಕ ಪ್ರಮುಖ ಕೈಗಾರಿಕಾ ನಗರವಾಗಿದ್ದು, ಈ ಸೇತುವೆ ಒಳಗೊಂಡ ರಸ್ತೆ ಮಾರ್ಗ ಅಮೆರಿಕ ರಾಜಧಾನಿ ವಾಷಿಂಗ್ಟನ್‌ಗೆ ಸಂಪರ್ಕಿಸುತ್ತದೆ.

ಇದನ್ನೂ ಓದಿ:  ಪಾಕಿಸ್ತಾನದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐವರು ಚೀನಿಯರು ಸಾವು

ಸದ್ಯ ಘಟನೆಯಿಂದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಸಂಚಾರ ಬಂದ್‌ ಆಗಿದೆ. ಈ ಪ್ರದೇಶದ ಸಾರಿಗೆಗೆ ನಿರ್ಣಾಯಕ ಕೊಂಡಿಯಾಗಿರುವ ಸೇತುವೆ ಬಂದ್‌ ಆಗಿರುವ ಕಾರಣ ಪ್ರಯಾಣಿಕರು ಮತ್ತು ವ್ಯವಹಾರಗಳಿಗೆ ಅಡೆತಡೆ ಉಂಟಾಗಲಿದೆ. ಪುನಃ ಸೇತುವೆಯನ್ನು ನಿರ್ಮಿಸಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಅಲ್ಲಿವರೆಗೆ ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕು ಅಂತಾ ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಸಾವು ಹಾಗೂ ಹಾನಿಯ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News