Viral Video: ಮದುವೆ ಮಂಟಪಕ್ಕೆ ಬಂದ ವಧುವಿನ ಮಾಜಿ ಪ್ರೇಮಿ.. ಮುಂದೆನಾಯ್ತು? ನೀವೇ ನೋಡಿ!!

Rajasthan Wedding Video: ಒಬ್ಬ ವ್ಯಕ್ತಿ ತನ್ನ ಮಾಜಿ ಪ್ರೇಮಿ ಬೇರೊಬ್ಬರನ್ನು ಮದುವೆಯಾಗುವುದನ್ನು ನೋಡಿ.. ಮದುವೆ ಮಂಟಪದಲ್ಲೇ ವರನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Written by - Savita M B | Last Updated : Jul 5, 2024, 06:34 PM IST
  • ಪ್ರೀತಿ ಮಾಡಿದ ಪ್ರತಿಯೊಬ್ಬರು ಒಂದಾಗಲು ಸಾಧ್ಯವಿಲ್ಲ
  • ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral Video: ಮದುವೆ ಮಂಟಪಕ್ಕೆ ಬಂದ ವಧುವಿನ ಮಾಜಿ ಪ್ರೇಮಿ.. ಮುಂದೆನಾಯ್ತು? ನೀವೇ ನೋಡಿ!! title=

Viral Video: ಪ್ರೀತಿ ಮಾಡಿದ ಪ್ರತಿಯೊಬ್ಬರು ಒಂದಾಗಲು ಸಾಧ್ಯವಿಲ್ಲ.. ಅನೇಕ ಜನರು ವಿವಿಧ ಕಾರಣಗಳಿಂದ ಮಧ್ಯದಲ್ಲಿ ಬೇರ್ಪಡುತ್ತಾರೆ. ಕೆಲವು ಸಂದರ್ಭಗಳಿಂದಾಗಿ ಸಂಬಂಧಗಳು ಒಡೆಯುತ್ತವೆ. ಆದರೆ ಪ್ರೀತಿಸಿದವರು ಬೇರೆಯವರನ್ನು ಮದುವೆಯಾದರೆ ಮತ್ತೊಬ್ಬರ ನೋವು ಹೇಳತೀರದು. ಪ್ರತಿಯೊಬ್ಬರೂ ಈ ಪರಿಸ್ಥಿತಿಯನ್ನು ವಿಭಿನ್ನವಾಗಿ ಎದುರಿಸುತ್ತಾರೆ. ಆದರೆ ರಾಜಸ್ಥಾನದ ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಮಿ ಬೇರೊಬ್ಬನನ್ನು ಮದುವೆಯಾಗುವುದನ್ನು ನೋಡಿ ಮನನೊಂದು.. ಮದುವೆ ಮಂಟಪದಲ್ಲೇ ವರನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೀಡಿಯೊವನ್ನು ನೋಡಿದ ನಂತರ ಅನೇಕ ನೆಟಿಜನ್‌ಗಳು ಶಾಹಿದ್ ಕಪೂರ್ ಅವರ ಹಿಟ್ ಚಲನಚಿತ್ರ 'ಕಬೀರ್ ಸಿಂಗ್' ಅನ್ನು ನೆನಪಿಸಿಕೊಂಡಿದ್ದಾರೆ. ರಾಜಸ್ಥಾನದ ಭಿಲ್ವಾರದಲ್ಲಿ ಈ ಘಟನೆ ನಡೆದಿದ್ದು, ಹೀಗಾಗುತ್ತದೆ ಎಂದು ಮೊದಲು ಯಾರೂ ನಿರೀಕ್ಷಿಸಿರಲಿಲ್ಲ. ಏಕೆಂದರೆ ವಧುವಿನ ಮಾಜಿ ಗೆಳೆಯ ನವವಿವಾಹಿತರ ಜೊತೆ ಫೋಟೋ ತೆಗೆಸಿಕೊಳ್ಳಲು ವೇದಿಕೆ ಏರಿದ್ದ. ನಂತರ ಆತ ಇದ್ದಕ್ಕಿದ್ದಂತೆ ವರನ ಮೇಲೆ ದಾಳಿ ಮಾಡಿದ್ದನ್ನು ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದರು.

ಇದನ್ನೂ ಓದಿ-ಕಳೆದುಹೋದ ನಿಮ್ಮ ಫೋನ್‌ನಲ್ಲಿರುವ.. GPay-Phonepay UPI ಐಡಿ ನಿಷ್ಕ್ರಿಯಗೊಳಿಸುವುದು ಹೇಗೆ..? 

ಈ ಘಟನೆಯ ದಿನಾಂಕ ಸ್ಪಷ್ಟವಾಗಿಲ್ಲ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ 'ಘರ್ ಕೆ ಕಾಲೇಶ್' ಹ್ಯಾಂಡಲ್ ಅಡಿಯಲ್ಲಿ ಪೋಸ್ಟ್ ಮಾಡಲಾಗಿದೆ. ರಾಜಸ್ಥಾನದ ಭಿಲ್ವಾರಾದಲ್ಲಿ ಮದುವೆ ಸ್ಥಳವೊಂದರಲ್ಲಿ ಮಾಜಿ ಪ್ರಿಯಕರ ಮತ್ತು ವರನ ನಡುವೆ 'ಕಬೀರ್ ಸಿಂಗ್' ಸಿನಿಮಾ ತರಹದ ಹೊಡೆದಾಟ ನಡೆದಿದೆ. ಮಾಜಿ ಪ್ರಿಯಕರ ಮತ್ತು ವಧು ಇಬ್ಬರೂ ಒಂದೇ ಶಾಲೆಯಲ್ಲಿ ಶಿಕ್ಷಕರು.' ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಹೇಳಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆದ ತಕ್ಷಣ ವೈರಲ್ ಆಗಿದೆ. ಅನೇಕ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಾಜಿ ಗೆಳೆಯನ ವರ್ತನೆಯನ್ನು ಕೆಲವರು ತಪ್ಪು ಎಂದಿದ್ದಾರೆ.. ವೇದಿಕೆಯಲ್ಲಿ ಅಳಿಯನನ್ನು ಎಲ್ಲರ ಮುಂದೆ ಹೊಡೆಯುವುದು ಸರಿಯಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಪ್ರೇಮ ಪ್ರಕರಣಕ್ಕೆ ಸಂಬಂಧವೇ ಇಲ್ಲದವರ ಮೇಲೆ ಹಲ್ಲೆ ನಡೆಸುವುದು ತಪ್ಪು ಎಂದು ಮತ್ತೊಬ್ಬರು ಕಾಮೆಂಟ್‌ ಮೂಲಕ ತಮ್ಮ ಅಭಿಪ್ರಯಾ ತಿಳಿಸಿದ್ದಾರೆ.. ಇದು 1.6 ಮಿಲಿಯನ್ ವೀವ್ಸ್‌ ಪಡೆದುಕೊಂಡಿದೆ.

ಇದನ್ನೂ ಓದಿ-Rashmika Mandanna: ಮೆಗಾ ಫ್ಯಾಮಿಲಿಗೆ ರಶ್ಮಿಕಾ ಎಂಟ್ರಿ..? ಏನಿದು ಹೊಸ ವಿಷಯ?!  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News