ವಿಶ್ವದ ಅತ್ಯಂತ ಸುಂದರ ರಾಣಿಯ ಸೌಂದರ್ಯದ ರಹಸ್ಯವೇನು? ನಿಮಗಿದು ಗೊತ್ತೆ..

Most Beautiful Queen: ವಿಶ್ವದ ಅತ್ಯಂತ ಸುಂದರಿ ಅಲ್ಲದೇ, 12 ಭಾಷೆಗಳ ಪರಿಣಿತಿಯನ್ನು ಹೊಂದಿರುವುದರೆ ಜೊತೆಗೆ ಚುರುಕಿನ ಮೆದುಳನ್ನು ಹೊಂದಿರುವ ರಾಜಕುಮಾರಿ. ಈಕೆ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಏನು ಮಾಡುತ್ತಿದ್ದಳು ಎಂದು ನಿಮಗೆ ತಿಳಿದಿದೆಯೇ..

Written by - Zee Kannada News Desk | Last Updated : Jan 14, 2024, 04:29 PM IST
  • ಸೌಂದರ್ಯ ದೇವತೆ ಎಂದೇ ಪ್ರಸಿದ್ಧಿ ಪಡೆದ ರಾಜಕುಮಾರಿ ಕ್ಲಿಯೋಪಾತ್ರ.
  • ಪ್ರಿನ್ಸೆಸ್ ಕ್ಲಿಯೋಪಾತ್ರಾ ಕೂಡ 12 ಭಾಷೆಗಳ ಪರಿಣಿತಿ ಹೊಂದಿದ್ದರು.
  • ರಾಜಕುಮಾರಿ ಕ್ಲಿಯೋಪಾತ್ರ 700 ಕತ್ತೆಗಳ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು.
ವಿಶ್ವದ ಅತ್ಯಂತ ಸುಂದರ ರಾಣಿಯ ಸೌಂದರ್ಯದ ರಹಸ್ಯವೇನು? ನಿಮಗಿದು ಗೊತ್ತೆ.. title=

Cleopatra: ವಿಶ್ವದ ಅತ್ಯಂತ ಸುಂದರ ರಾಜಕುಮಾರಿಯ ಬಗ್ಗೆ ನಿಮಗೆ ತಿಳಿದಿದೆಯೇ, ಸೌಂದರ್ಯ ದೇವತೆ ಎಂದೇ ಪ್ರಸಿದ್ಧಿ ಪಡೆದ ಆ ರಾಜಕುಮಾರಿ ಬೇರ್ಯಾರು ಅಲ್ಲ. ಅವರೇ ಈಜಿಪ್ಟ್ ರಾಜಕುಮಾರಿ ಕ್ಲಿಯೋಪಾತ್ರ. ರಾಜಕುಮಾರಿ ಕ್ಲಿಯೋಪಾತ್ರ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹೀಗೆ ಮಾಡುತ್ತಿದ್ದಳು ಎಂದು ನಿಮಗೆ ತಿಳಿದರೇ ನೀವು ಶಾಕ್‌ ಆಗೋದಂತು ಗ್ಯಾರಂಟಿ.. 

ಪ್ರತಿಯೊಬ್ಬರೂ ಸುಂದರವಾಗಿ ಮತ್ತು ವಿಭಿನ್ನವಾಗಿ ಕಾಣಲು ಬಯಸುತ್ತಾರೆ, ಆದರೆ ವಿಶ್ವದ ಅತ್ಯಂತ ಸುಂದರ ರಾಜಕುಮಾರಿಯ ಬಗ್ಗೆ ನಿಮಗೆ ತಿಳಿದಿದೆಯೇ? ಹೌದು, ಅನೇಕ ರಾಣಿ ಮತ್ತು ರಾಜಕುಮಾರಿಯರ ಧೈರ್ಯದ ಕಥೆಗಳ ಜೊತೆಗೆ, ಇತಿಹಾಸದಲ್ಲಿ ಅವರ ಸೌಂದರ್ಯದ ಉಲ್ಲೇಖವೂ ಇದೆ. ಅಂತವರಲ್ಲಿ ಈಜಿಪ್ಟ್ ರಾಜಕುಮಾರಿ ಕ್ಲಿಯೋಪಾತ್ರವು ಒಬ್ಬರು. ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾಳೆ. ಮಾಹಿತಿಯ ಪ್ರಕಾರ, ರಾಜಕುಮಾರಿ ಕ್ಲಿಯೋಪಾತ್ರವನ್ನು ಸೌಂದರ್ಯದ ದೇವತೆ ಎಂದೂ ಕರೆಯಲಾಗುತ್ತಿತ್ತು.

ಇದನ್ನೂ ಓದಿ: Daily GK Quiz: ಭಾರತದಲ್ಲಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ ಯಾವುದು?

ಪ್ರಿನ್ಸೆಸ್ ಕ್ಲಿಯೋಪಾತ್ರಾ ಕೂಡ 12 ಭಾಷೆಗಳ ಪರಿಣಿತಿಯನ್ನು ಹೊಂದಿರುವುದರೆ ಜೊತೆಗೆ  ಚುರುಕಿನ ಮೆದುಳನ್ನು ಹೊಂದಿದ್ದರು ಎಂದು ಹೇಳಲಾಗುತ್ತದೆ. ಈಕೆ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಏನು ಮಾಡುತ್ತಿದ್ದಳು ಗೊತ್ತಾ? ಇಲ್ಲಿ ಸಂಪೂರ್ಣ ಡಿಟೈಲ್ಸ್‌..

ಸೌಂದರ್ಯವನ್ನು ಹೆಚ್ಚಿಸಲು ಹಾಲಿನ ಬಳಕೆ

ಸೌಂದರ್ಯವನ್ನು ಹೆಚ್ಚಿಸಲು ಹಾಲನ್ನು ಅನೇಕ ಮನೆಮದ್ದುಗಳಲ್ಲಿ ಬಳಸಲಾಗುತ್ತದೆ. ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಅಥವಾ ನಿಮ್ಮ ಮೈಬಣ್ಣವನ್ನು ಸುಧಾರಿಸಲು ಹಾಲಿನಿಂದ ಮಾಡಿದ ಮನೆಮದ್ದನ್ನು ಸಹ ಪ್ರಯತ್ನಿಸಬಹುದು. ರಾಜ ಮಹಾರಾಜರ ಕಾಲದಲ್ಲಿ ಹಸು ಅಥವಾ ಎಮ್ಮೆಯ ಹಾಲಿನಿಂದ ಸ್ನಾನ ಮಾಡಲಾಗುತ್ತಿತ್ತು. ಇದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು, ಆದರೆ ರಾಜಕುಮಾರಿ ಕ್ಲಿಯೋಪಾತ್ರ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಕತ್ತೆ ಹಾಲನ್ನು ಬಳಸುತ್ತಿದ್ದಳು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Daily GK Quiz: ಕರ್ನಾಟಕದ ಗಾಂಧಿ ಎಂದು ಹೆಸರಾದವರು ಯಾರು?

700 ಕತ್ತೆಗಳ ಹಾಲು

ಮಾಹಿತಿಯ ಪ್ರಕಾರ, ರಾಜಕುಮಾರಿ ಕ್ಲಿಯೋಪಾತ್ರ 700 ಕತ್ತೆಗಳ ಹಾಲನ್ನು ಆರ್ಡರ್ ಮಾಡುತ್ತಿದ್ದಳು ಮತ್ತು ತನ್ನ ಚರ್ಮವನ್ನು ಯಾವಾಗಲೂ ಸುಂದರವಾಗಿ ಮತ್ತು ಯೌವನವಾಗಿರಿಸಲು ಆ ಹಾಲಿನಿಂದ ಸ್ನಾನ ಮಾಡುತ್ತಿದ್ದಳು. ಕ್ಲಿಯೋಪಾತ್ರಳ ಜೀವನವೂ ಸಾಕಷ್ಟು ನಿಗೂಢವಾಗಿರುವುದರ ಜೊತೆಗೆ ಅವಳು ತುಂಬಾ ಸುಂದರವಾಗಿದ್ದಳು ಎಂದು ಹೇಳಲಾಗುತ್ತದೆ,ಎಂತವರನ್ನಾದರು ಆಕರ್ಷಿಸುವ ಸೌಂದರ್ಯ ಹೊಂದಿದ್ದಳು ಎನ್ನಲಾಗುತ್ತದೆ.

ಕತ್ತೆ ಹಾಲು ಅತ್ಯಂತ ದುಬಾರಿಯಾಗಿದೆ

ಹೌದು, ಇಂದು ಕತ್ತೆ ಹಾಲು ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿದೆ. ಒಂದು ಲೀಟರ್ ಬೆಲೆ 160 ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಅಂದಾಜು 13 ಸಾವಿರ ರೂಪಾಯಿಗಳು. ಅದೇ ಸಮಯದಲ್ಲಿ, ಯುರೋಪಿಯನ್ ದೇಶವಾದ ಸೆರ್ಬಿಯಾದ ಫಾರ್ಮ್ ಹೌಸ್‌ನಲ್ಲಿ, ಕತ್ತೆಯ ವಿಶೇಷ ತಳಿಯ ಹಾಲಿನಿಂದ ಮಾಡಿದ ಚೀಸ್ ಅನ್ನು ಅತ್ಯಂತ ದುಬಾರಿಯಾಗಿ ಮಾರಾಟ ಮಾಡಲಾಗುತ್ತದೆ, ಏಕೆಂದರೆ ಇದು ತುಂಬಾ ಪೌಷ್ಟಿಕವಾಗಿದೆ ಎಂದು ಹೇಳಲಾಗುತ್ತದೆ.ಅಲ್ಲದೇ ಈ ಚೀಸ್ ಬೆಲೆ ಬರೋಬ್ಬರಿ 78 ಸಾವಿರ ರೂಪಾಯಿ.

(ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News