Viral News: ಆರ್ಡರ್ ಮಾಡಿದ್ದು ಬ್ರಾಂಡೆಡ್ ವಾಚ್… ಬಂದಿದ್ದು ಸಗಣಿ: ಕೋಪಗೊಂಡ ಗ್ರಾಹಕಿ ಮಾಡಿದ್ದೇನು ನೋಡಿ!

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್‌ನಲ್ಲಿ ನೀಲಂ ಯಾದವ್ ವಾಚ್‌ಗೆ ಅಂದಾಜು 1,304 ರೂ.ಕ್ಯಾಶ್ ಆನ್ ಡೆಲಿವರಿಲ್ಲಿ ಸೆಲೆಕ್ಟ್ ಮಾಡಿದ್ದಾರೆ. ಆರ್ಡರ್ ಸೆಪ್ಟೆಂಬರ್ 28 ರಂದು ಬಂದಿದ್ದು, ಪ್ಯಾಕ್ ತೆರೆದು ನೋಡಿದಾಗ ಅದರಲ್ಲಿ 4 ಸಗಣಿ ತುಂಡುಗಳು ಕಂಡುಬಂದಿದೆ.

Written by - Bhavishya Shetty | Last Updated : Oct 10, 2022, 04:10 PM IST
    • ಆರ್ಡರ್ ಮಾಡಿದ ಕೈ ಗಡಿಯಾರದ ಬದಲಿಗೆ ಹಸುವಿನ ಸೆಗಣಿ ಪಡೆದ ಮಹಿಳೆ
    • ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಘಟನೆ
    • ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್‌ನಲ್ಲಿ ಆರ್ಡರ್ ಮಾಡಿದ್ದ ವಾಚ್
Viral News: ಆರ್ಡರ್ ಮಾಡಿದ್ದು ಬ್ರಾಂಡೆಡ್ ವಾಚ್… ಬಂದಿದ್ದು ಸಗಣಿ: ಕೋಪಗೊಂಡ ಗ್ರಾಹಕಿ ಮಾಡಿದ್ದೇನು ನೋಡಿ!  title=
Flipkart Big billion Sale

ಇದೀಗ ಭಾರತದಲ್ಲಿ ಹಬ್ಬದ ಸೀಸನ್. ಲಾಭದಾಯಕ ಕೊಡುಗೆಗಳು ಮತ್ತು ರಿಯಾಯಿತಿಗಳ ಮೂಲಕ ಗ್ರಾಹಕರನ್ನು ಆಕರ್ಷಿಸಲು ಬ್ರ್ಯಾಂಡ್‌ಗಳು ಎಲ್ಲವನ್ನು ಮಾಡುತ್ತಿವೆ. ಮಾರಾಟದ ಋತುವಿನೊಂದಿಗೆ ಗ್ರಾಹಕರು ಉತ್ತಮ ವ್ಯವಹಾರವನ್ನು ಪಡೆಯಲು ಶಾಪಿಂಗ್ ವೆಬ್‌ಸೈಟ್‌ಗಳಲ್ಲಿ ಜಮಾಯಿಸುತ್ತಾರೆ. ಹೆಚ್ಚಾಗಿ, ಜನರು ಆರ್ಡರ್ ಮಾಡಿದ ಗ್ಯಾಜೆಟ್‌ಗಳ ಬದಲಿಗೆ ವಿಲಕ್ಷಣ ವಸ್ತುಗಳನ್ನು ಸ್ವೀಕರಿಸುತ್ತಾರೆ. ಅಂತಹ ಮತ್ತೊಂದು ಘಟನೆಯಲ್ಲಿ, ಯುಪಿಯ ಕೌಶಂಬಿ ಜಿಲ್ಲೆಯ ಮಹಿಳೆಯೊಬ್ಬರು ತಾನು ಆರ್ಡರ್ ಮಾಡಿದ ಕೈ ಗಡಿಯಾರದ ಬದಲಿಗೆ ಹಸುವಿನ ಸೆಗಣಿ ಪಡೆದಿದ್ದಾರೆ.

ಇದನ್ನೂ ಓದಿ:  ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡಿದ್ದ ಬಿಎಸ್ಎಫ್ ಯೋಧನ ಅಂಗಾಗ ದಾನ

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್‌ನಲ್ಲಿ ನೀಲಂ ಯಾದವ್ ವಾಚ್‌ಗೆ ಅಂದಾಜು 1,304 ರೂ.ಕ್ಯಾಶ್ ಆನ್ ಡೆಲಿವರಿಲ್ಲಿ ಸೆಲೆಕ್ಟ್ ಮಾಡಿದ್ದಾರೆ. ಆರ್ಡರ್ ಸೆಪ್ಟೆಂಬರ್ 28 ರಂದು ಬಂದಿದ್ದು, ಪ್ಯಾಕ್ ತೆರೆದು ನೋಡಿದಾಗ ಅದರಲ್ಲಿ 4 ಸಗಣಿ ತುಂಡುಗಳು ಕಂಡುಬಂದಿದೆ. ಕೋಪಗೊಂಡ ಆಕೆಯ ಸಹೋದರ ಡೆಲಿವರಿ ಬಾಯ್‌ಗೆ ಕರೆ ಮಾಡಿ ಕುಂದುಕೊರತೆಯ ಬಗ್ಗೆ ಹೇಳಿದ್ದಾನೆ. ಆದರೆ ಡೆಲಿವರಿ ಬಾಯ್ ಈ ಬಗ್ಗೆ ಏಜೆಂಟ್ ಗೆ ದೂರು ನೀಡುವಂತೆ ಕೇಳಿಕೊಂಡರು. ಅಷ್ಟೇ ಅಲ್ಲದೆ, ಬಳಿಕ ಏಜೆಂಟ್ ಗೆ ಕರೆ ಮಾಡಿದಾಗ ಆಗಿರುವ ಸಮಸ್ಯೆಗೆ ಕ್ಷಮೆ ಕೇಳಿದ್ದು, ಹಣ ಹಿಂತಿರುಗಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಒಂದೆಡೆ ಮದುವೆ ನಡೆಯುತ್ತಿದೆ…ಇನ್ನೊಂದೆಡೆ ನಿದ್ದೆ ತಡೆಯಲಾಗದೆ ವಧು ಮಾಡಿದ್ದೇನು ನೋಡಿ…

ಇದೇ ರೀತಿಯ ಘಟನೆಯಲ್ಲಿ ಯಶಸ್ವಿ ಶರ್ಮಾ ಎಂಬ ಗ್ರಾಹಕರು ತಮ್ಮ ತಂದೆಗೆ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಲ್ಯಾಪ್‌ಟಾಪ್ ಅನ್ನು ಆರ್ಡರ್ ಮಾಡಿದ್ದರು. ಆದರೆ ಬದಲಿಗೆ ಕೆಲವು ಸಾಬೂನುಗಳನ್ನು ಒಳಗೊಂಡ ಬಾಕ್ಸ್  ಆರ್ಡರ್ ಸಮಯದಲ್ಲಿ ಬಂದಿತ್ತು. ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಅವರು ಈ ಬಗ್ಗೆ ಬರೆದುಕೊಂಡಿದ್ದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News