ಪಾಕಿಸ್ತಾನಕ್ಕೆ ನೆರವು ತಡೆದ ಅಮೇರಿಕ; ಭಾರತವನ್ನು ದೂರಿದ ಹಫೀಸ್ ಸಯೀದ್

ಅಮೇರಿಕ ಪಾಕಿಸ್ತಾನಕ್ಕೆ ನೀಡುತ್ತಿದ್ದ 255 ಮಿಲಯನ್ ಡಾಲರ್ ಮಿಲಿಟರಿ ನೆರವನ್ನು ತಡೆ ಹಿಡಿದಿರುವುದಕ್ಕೆ ಸಂಬಂಧಿಸಿದಂತೆ 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಮಂಗಳವಾರ ಭಾರತದ ವಿರುದ್ಧ ಕಿಡಿ ಕಾರಿದ್ದಾರೆ.

Last Updated : Jan 2, 2018, 01:35 PM IST
ಪಾಕಿಸ್ತಾನಕ್ಕೆ ನೆರವು ತಡೆದ ಅಮೇರಿಕ; ಭಾರತವನ್ನು ದೂರಿದ ಹಫೀಸ್ ಸಯೀದ್ title=

ನವದೆಹಲಿ : ಪಾಕಿಸ್ತಾನದಲ್ಲಿನ ಉಗ್ರ ಜಾಲಗಳನ್ನು ತೊಡೆದುಹಾಕುವುದಾಗಿ ನೀಡಿದ ಭರವಸೆಗೆ ತಕ್ಕಂತೆ ಪಾಕಿಸ್ತಾನ ನಡೆದುಕೊಳ್ಳದ ಕಾರಣ ಅಮೇರಿಕ ಪಾಕಿಸ್ತಾನಕ್ಕೆ ನೀಡುತ್ತಿದ್ದ 255 ಮಿಲಯನ್ ಡಾಲರ್ ಮಿಲಿಟರಿ ನೆರವನ್ನು ತಡೆ ಹಿಡಿದಿರುವುದಕ್ಕೆ ಸಂಬಂಧಿಸಿದಂತೆ 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಮಂಗಳವಾರ ಭಾರತದ ವಿರುದ್ಧ ಕಿಡಿ ಕಾರಿದ್ದಾರೆ.

ಪಾಕಿಸ್ತಾನಕ್ಕೆ ಅಮೆರಿಕ ಮಿಲಿಟರಿ ನೆರವನ್ನು ತಡೆ ಹಿಡಿದಿರುವ ಹಿಂದೆ ಭಾರತ ಇದೆ ಎಂದಾತ ನೇರವಾಗಿ ಖಂಡಿಸಿದ್ದಾನೆ.

ಕಳೆದ ಹದಿನೈದು ವರ್ಷಗಳಲ್ಲಿ ಅಮೇರಿಕ ಪಾಕಿಸ್ತಾನಕ್ಕೆ ಉಗ್ರರನ್ನು ಮಟ್ಟ ಹಾಕುವ ಉದ್ದೇಶಕ್ಕಾಗಿ 33 ಬಿಲಿಯ ಡಾಲರ್‌ಗಳನ್ನು "ಮೂರ್ಖತನ'ದಿಂದ ನೀಡಿದೆ; ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಅಮೆರಿಕಕ್ಕೆ ಕೊಟ್ಟಿರುವುದು ದೊಡ್ಡ ಸೊನ್ನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿರುವುದು ಪಾಕಿಸ್ತಾನಕ್ಕೆ ನೇರವಾಗಿ ಕೊಟ್ಟಿರುವ ಹೊಡೆತ ಬಿದ್ದಂತಾಗಿದೆ ಎಂದೇ ತಿಳಿಯಲಾಗಿದೆ. 

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಷೇಧ ಪಟ್ಟಿಯಲ್ಲಿರುವ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆಯ ಮುಂಚೂಣಿ ಸಂಸ್ಥೆಯಾಗಿರುವ ನಿಷೇಧಿತ ಜಮಾತ್‌ ಉದ್‌ ದಾವಾ ವಂತಿಗೆ ಸ್ವೀಕರಿಸುವುದನ್ನು ನಿಷೇಧಿಸಿ ಪಾಕಿಸ್ತಾನದ ಸೆಕ್ಯುರಿಟೀಸ್‌ ಮತ್ತು ಎಕ್ಸ್‌ಚೇಂಜ್‌ ಕಮಿಷನ್‌ ಅಧಿಸೂಚನೆ ಹೊರಡಿಸಿದ ಒಂದು ದಿನದ ತರುವಾಯ, ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ಭಾರತದ ವಿರುದ್ಧ ಕಿಡಿ ಕಾರಲು ಆರಂಭಿಸಿ ತೀವ್ರ ವಾಕ್‌ದಾಳಿ ನಡೆಸತೊಡಗಿದ್ದಾನೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪ್ರಕಟಿಸಿರುವ ನಿಷೇಧಿತ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಅಲ್‌ ಕಾಯಿದಾ, ತೆಹರೀಕ್‌ ಎ ತಾಲಿಬಾನ್‌ ಪಾಕಿಸ್ಥಾನ್‌, ಲಷ್ಕರ್‌ ಎ ಝಾಂಗ್‌ವಿ, ಜೆಯುಡಿ, ಎಫ್ ಐ ಎಫ್, ಎಲ್‌ ಇ ಟಿ ಮತ್ತು ಇತರ ಸಂಘಟನೆಗಳು ಹಾಗೂ ವ್ಯಕ್ತಿಗಳ ಹೆಸರು ಸೇರಿವೆ. 

Trending News