ಭಾರತದಿಂದ ಕೊರೊನಾ ಅಪಾಯ ತಪ್ಪಿಸಲು ವಿಮಾನ ಸೇವೆ ಕಡಿತಗೊಳಿಸಿದ ಈ ದೇಶ

COVID-19 ಹರಡುವಿಕೆಯ ಹೆಚ್ಚಿನ ವೈರಸ್ ತಳಿಗಳ ಅಪಾಯವನ್ನು ತಪ್ಪಿಸಲು ಆಸ್ಟ್ರೇಲಿಯಾ ಭಾರತ ಮತ್ತು ಇತರ ಕೆಂಪು ವಲಯದ ದೇಶಗಳಿಂದ ಮರಳುವ ಪ್ರಯಾಣಿಕರ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿದೆ ಮತ್ತು ತನ್ನ ಲಸಿಕಾ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಆಸ್ಟ್ರೇಲಿಯಾ ಸರ್ಕಾರ ಪ್ರಕಟಿಸಿದೆ.

Last Updated : Apr 22, 2021, 04:20 PM IST
ಭಾರತದಿಂದ ಕೊರೊನಾ ಅಪಾಯ ತಪ್ಪಿಸಲು ವಿಮಾನ ಸೇವೆ ಕಡಿತಗೊಳಿಸಿದ ಈ ದೇಶ  title=
ಸಾಂದರ್ಭಿಕ ಚಿತ್ರ

ನವದೆಹಲಿ: COVID-19 ಹರಡುವಿಕೆಯ ಹೆಚ್ಚಿನ ವೈರಸ್ ತಳಿಗಳ ಅಪಾಯವನ್ನು ತಪ್ಪಿಸಲು ಆಸ್ಟ್ರೇಲಿಯಾ ಭಾರತ ಮತ್ತು ಇತರ ಕೆಂಪು ವಲಯದ ದೇಶಗಳಿಂದ ಮರಳುವ ಪ್ರಯಾಣಿಕರ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿದೆ ಮತ್ತು ತನ್ನ ಲಸಿಕಾ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಆಸ್ಟ್ರೇಲಿಯಾ ಸರ್ಕಾರ ಪ್ರಕಟಿಸಿದೆ.

ಇದನ್ನೂ ಓದಿ - ಕರೋನಾ ಕಾಲದಲ್ಲಿ ಬಿಸಿನೀರಿನ ಸ್ಟೀಮ್ ಗಿಂತ ಮೊದಲು ಈ 5 ವಿಚಾರ ತಿಳಿದಿರಲಿ

ಈ ನಡೆಯಿಂದಾಗಿ ಈಗ ಭಾರತದಿಂದ ಸಿಡ್ನಿಗೆ ನೇರ ವಿಮಾನಗಳು ಮತ್ತು ಉತ್ತರ ಪ್ರಾಂತ್ಯಕ್ಕೆ ಇಳಿಯುವ ಚಾರ್ಟರ್ಡ್ ವಿಮಾನಗಳು ಶೇ 30 ರಷ್ಟು ಕಡಿಮೆಯಾಗುತ್ತವೆ.ರಾಷ್ಟ್ರೀಯ ಸಚಿವ ಸಂಪುಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಸ್ಕಾಟ್ ಮಾರಿಸನ್, ಮುಂದಿನ 24 ಗಂಟೆಗಳಲ್ಲಿ ಹೊಸ ನಿರ್ಬಂಧಗಳು ಜಾರಿಗೆ ಬರಲಿರುವ ಸಂದರ್ಭದಲ್ಲಿ ಘೋಷಿಸುವುದಾಗಿ ಹೇಳಿದರು.

ಇದನ್ನೂ ಓದಿ - Corona vaccination : 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಇಲ್ಲಿದೆ ಅತಿ ಮುಖ್ಯ ಮಾಹಿತಿ

"ನಾವು ಜಾಗತಿಕ ಕೊರೊನಾ (COVID-19) ಸಾಂಕ್ರಾಮಿಕ ರೋಗದ ಮಧ್ಯದಲ್ಲಿದ್ದೇವೆ ಮತ್ತು ಆಸ್ಟ್ರೇಲಿಯಾ ಅತ್ಯಂತ ಪರಿಣಾಮಕಾರಿಯಾದ ಗಡಿ ವ್ಯವಸ್ಥೆಗಳನ್ನು ಹೊಂದುವ ಮೂಲಕ ಈ ಸಾಂಕ್ರಾಮಿಕ ರೋಗ ವಿಚಾರದಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದರು. "ಭಾರತದಂತಹ ಸ್ಥಳಗಳಿಂದ ಹಿಂದಿರುಗುವವರಿಗೆ ಅವಕಾಶವಿದೆ. ಆದರೆ ಅದು ಬಹಳ ನಿಯಂತ್ರಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ - Home Remedies: ಕೇವಲ ಎರಡೇ ದಿನದಲ್ಲಿ Dark Circle ಹೋಗಲಾಡಿಸಲು ಇದನ್ನು ಟ್ರೈ ಮಾಡಿ

ಆಸ್ಟ್ರೇಲಿಯಾದಲ್ಲಿ ಪ್ರಸ್ತುತ ಸುಮಾರು 5,800 ನಾಗರಿಕರು ಅಥವಾ ಶಾಶ್ವತ ನಿವಾಸಿಗಳು ಪ್ರತಿ ವಾರ ಹೋಟೆಲ್‌ಗಳಲ್ಲಿ ಎರಡು ವಾರಗಳ ಕಾಲ ನಿರ್ಬಂಧಿಸಲಾಗುತ್ತದೆ. ಆದರೆ ಇವುಗಳಲ್ಲಿ ಪ್ರತಿ ವಾರ ಭಾರತದಿಂದ ಬಂದವರು ಎಂಬುದು ಸ್ಪಷ್ಟವಾಗಿಲ್ಲ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News