ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಫೋಟ

ಅಫ್ಘಾನಿಸ್ತಾನ ರಾಜಧಾನಿಯಲ್ಲಿ ಸೋಮವಾರ ಭೀಕರ ಸ್ಫೋಟ ಸಂಭವಿಸಿದ್ದು, ಕಾಬೂಲ್ ಜಿಲ್ಲೆಯನ್ನು ನಡುಗಿಸಿದೆ. 

Updated: Jul 1, 2019 , 01:49 PM IST
ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಫೋಟ
Image Credits: Tolo News

ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿಯಲ್ಲಿ ಸೋಮವಾರ ಭೀಕರ ಸ್ಫೋಟ ಸಂಭವಿಸಿದ್ದು, ಕಾಬೂಲ್ ಜಿಲ್ಲೆಯನ್ನು ನಡುಗಿಸಿದೆ. ರಕ್ಷಣಾ ಸಚಿವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ದಟ್ಟ ಕಪ್ಪು ಹೊಗೆ ಆವರಿಸಿದೆ. ಹಾನಿ ಅಥವಾ ಸಾವುನೋವುಗಳ ಬಗ್ಗೆ ಈವರೆಗೂ ಯಾವುದೇ ವರದಿಗಳು ಬಂದಿಲ್ಲ.

ರಾಯ್ಟರ್ ಸಾಕ್ಷಿಗಳು ಈ ಸ್ಫೋಟವು ಅವರ ಕಚೇರಿ ಕಟ್ಟಡವನ್ನು ಬೆಚ್ಚಿಬೀಳಿಸಿದೆ ಎಂದು ಹೇಳಿದರು. ಸ್ಫೋಟ ಸಂಭವಿಸಿರುವ ಬಗ್ಗೆ ಕಾಬೂಲ್ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಆಂತರಿಕ ಸಚಿವಾಲಯದ ವಕ್ತಾರರಾದ ನಸ್ರತ್ ರಹೀಮಿ ಮಾತನಾಡಿ, ರಕ್ಷಣಾ ಸಚಿವಾಲಯ ಇರುವ ಜನನಿಬಿಡ ಪ್ರದೇಶಕ್ಕೆ ಸ್ಫೋಟ ಸಂಭವಿಸಿದೆ ಎಂದು ಖಚಿತಪಡಿಸಿದ್ದಾರೆ.