ಗಾಲ್ವಾನ್ ಕಣಿವೆಯಲ್ಲಿ 40 ಚೀನಾ ಸೈನಿಕರು ಮೃತಪಟ್ಟಿದ್ದು ಸುಳ್ಳು ಸುದ್ದಿ- ಚೀನಾ

ಜೂನ್ 15 ರಂದು ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರೊಂದಿಗಿನ ಮುಖಾಮುಖಿಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಕನಿಷ್ಠ 40 ಸೈನಿಕರು ಸಾವನ್ನಪ್ಪಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದು ಚೀನಾ ಹೇಳಿದೆ.

Last Updated : Jun 23, 2020, 07:32 PM IST
ಗಾಲ್ವಾನ್ ಕಣಿವೆಯಲ್ಲಿ 40 ಚೀನಾ ಸೈನಿಕರು ಮೃತಪಟ್ಟಿದ್ದು ಸುಳ್ಳು ಸುದ್ದಿ- ಚೀನಾ  title=
Photo Courtsey :(Photo @MFA_China)

ನವದೆಹಲಿ: ಜೂನ್ 15 ರಂದು ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರೊಂದಿಗಿನ ಮುಖಾಮುಖಿಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಕನಿಷ್ಠ 40 ಸೈನಿಕರು ಸಾವನ್ನಪ್ಪಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದು ಚೀನಾ ಹೇಳಿದೆ.

ಪಿಎಲ್‌ಎ ಸಾವುನೋವುಗಳ ಕುರಿತ ವರದಿಗಳನ್ನು ನಿರಾಕರಿಸಿದ ಚೀನಾ ವಿದೇಶಾಂಗ ಸಚಿವಾಲಯ  ಜೂನ್ 22 ರಂದು ಮಾತುಕತೆಗಳ ಮೂಲಕ  ಉದ್ವಿಗ್ನತೆಯನ್ನು ಪರಿಹರಿಸಲು ಸಭೆ ನಡೆಸಿದೆ ಎಂದು ಹೇಳಿದರು.

"ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಚೀನಾ ಮತ್ತು ಭಾರತ ಪರಸ್ಪರ ಮಾತುಕತೆ ನಡೆಸುತ್ತಿವೆ" ಎಂದು ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಹೇಳಿದ್ದಾರೆ.

ಇದನ್ನೂ ಓದಿ: ಗಾಲ್ವಾನ್ ಕಣಿವೆ ಎಂದು ಹೆಸರಾಗಿದ್ದೇಗೆ ಗೊತ್ತೇ ? ಇಲ್ಲಿದೆ ಕೂತುಹಲಕಾರಿ ಕಥನ

"ನೀವು ಮಾಧ್ಯಮದಲ್ಲಿ ನೋಡಿದ್ದಕ್ಕೆ ಸಂಬಂಧಿಸಿದಂತೆ, ಉದಾಹರಣೆಗೆ, ಚೀನಾದ ಕಡೆಯಿಂದ ಸಂಭವಿಸಿದ ಸಾವುನೋವುಗಳು 40  ಎಂದು ಕೆಲವರು ಆರೋಪಿಸಿದ್ದಾರೆ, ಇದು ನಕಲಿ ಸುದ್ದಿ ಎಂದು ನಾನು ನಿಮಗೆ ಖಚಿತವಾಗಿ ಹೇಳಬಲ್ಲೆ" ಎಂದು ಜಾವೋ ಹೇಳಿದರು.

ಜೂನ್ 15 ರ ರಾತ್ರಿ ನಡೆದ ಹಿಂಸಾತ್ಮಕ ಘರ್ಷಣೆಯ ಸಂದರ್ಭದಲ್ಲಿ ಭಾರತೀಯ ಸೇನೆಯು 20 ಸೈನಿಕರನ್ನು ಕಳೆದುಕೊಂಡಿದ್ದರೆ, ಪಿಎಲ್‌ಎ ಅನುಭವಿಸಿದ ಸಾವುನೋವುಗಳ ವಿವರಗಳನ್ನು ಬಹಿರಂಗಪಡಿಸಲು ಚೀನಾ ಇದುವರೆಗೆ ನಿರಾಕರಿಸಿದೆ.

ಭಾರತದ ಸಂಖ್ಯೆಗಳಿಗೆ ಹೋಲಿಸಿದರೆ ಚೀನಾವು ಎರಡು ಪಟ್ಟು ಹೆಚ್ಚು ಸಾವುನೋವುಗಳನ್ನು ಅನುಭವಿಸಬಹುದೆಂದು ಕೇಂದ್ರ ಸಚಿವ ಜನರಲ್ ವಿಕೆ ಸಿಂಗ್ (ನಿವೃತ್ತ) ವಾರಾಂತ್ಯದಲ್ಲಿ ಸೂಚಿಸಿದ್ದರು.

Trending News