ಭಾರತವು ತನ್ನ ಒಂದು ಇಂಚು ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಡುವುದಿಲ್ಲ ಮತ್ತು ಉಭಯ ದೇಶಗಳ ನಡುವಿನ ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದ ಉಳಿದ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿರುವ ಭಾರತ ಮತ್ತು ಚೀನಾ ಸೈನಿಕರ ನಡುವೆ ಭಾರತ-ಚೀನಾ ಮುಖಾಮುಖಿಯಾದ ಸುದ್ದಿಯ ಬಗ್ಗೆ ಭಾರತೀಯ ಸೇನೆಯು ಮತ್ತೊಮ್ಮೆ ಹೇಳಿಕೆ ನೀಡಿದ್ದು, ಈ ಕುರಿತು ಪರಿಸ್ಥಿತಿಯನ್ನು ಸ್ಪಷ್ಟಪಡಿಸಿದೆ.
FAU-G (Fearless and United Guards) ಆಟದ ನಿರೀಕ್ಷೆಗೆ ಶೀಘ್ರವೇ ತೆರೆಬೀಳಲಿದೆ. PUBG Mobile Indiaಗೆ ಪೈಪೋಟಿ ನೀಡಲು ಬರುತ್ತಿರುವ ಈ ಆಪ್ ನ ಮುಂಚಿತ ನೋಂದಣಿ ಕಾರ್ಯಕ್ರಮಕ್ಕೆ ಭಾರಿ ಪ್ರತಿಕ್ರಿಯೆ ಲಭಿಸಿದೆ.
ಭಾರತದೊಂದಿಗೆ ಗಡಿ ತಗಾದೆ ತೆಗೆದಿರುವ ಚೀನಾ (China) ಈಗ ಟಿಬೆಟ್ ನಲ್ಲಿ(Tibet) ಇನ್ನೊಂದು ರಣ ತಂತ್ರ ರೂಪಿಸುತ್ತಿದೆ.ಸಮುದ್ರ ಮಟ್ಟದಿಂದ 3656 ಮೀಟರ್ ಎತ್ತರದಲ್ಲಿರುವ ಟಿಬೆಟ್ ನಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಕೇಂದ್ರವನ್ನು ನಿರ್ಮಿಸುತ್ತಿದೆ. ಹೈ ಅಲ್ಟಿಟ್ಯುಡ್ ಇಲಾಖೆಯಲ್ಲಿ ನಿರ್ಮಿಸುತ್ತಿರುವ ಪ್ರಪಂಚದ ಅತಿ ದೊಡ್ಡ ಕ್ಲೌಡ್ ಕಂಪ್ಯೂಟಿಂಗ್ ಸೆಂಟರ್ ಇದಾಗಲಿದೆ.
ಭಾರತೀಯ ಮತ್ತು ಚೀನಾ ನಡುವಿನ ಎಲ್ಎಸಿಯಲ್ಲಿಮಿಲಿಟರಿ ನಿಲುಗಡೆಗೆ ಇರುವ ಏಕೈಕ ಮಾರ್ಗವೆಂದರೆ ಬೀಜಿಂಗ್ಗೆ ಹೊಸ ರಚನೆಗಳನ್ನು ನಿರ್ಮಿಸುವುದನ್ನು ನಿಲ್ಲಿಸುವುದು ಎಂದು ಭಾರತ ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿದೆ.
ಜೂನ್ 15 ರಿಂದ ಇಲ್ಲಿಯವರೆಗೆ, ಚೀನಾದ ಹ್ಯಾಕರ್ಗಳು ಸುಮಾರು 40 ಸಾವಿರ 300 ಬಾರಿ ಭಾರತೀಯ ಸೈಬರ್ ಸ್ಪೇಸ್ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ. ಭದ್ರತಾ ಸಂಸ್ಥೆಗಳ ಪ್ರಕಾರ, ಈ ಹ್ಯಾಕರ್ಗಳಲ್ಲಿ ಹೆಚ್ಚಿನವರು ಚೀನಾದ ಸಿಚುವಾನ್ ಪ್ರದೇಶದಲ್ಲಿದ್ದಾರೆ ಎನ್ನಲಾಗಿದೆ.
ಹಿಂಸಾತ್ಮಕ ಮುಖಾಮುಖಿ ನಡೆದ ಲಡಾಖ್ನ ಸ್ಥಳವಾದ ಗಾಲ್ವಾನ್ ಕಣಿವೆಯ ಮೇಲೆ ಚೀನಾ ಸಾರ್ವಭೌಮತ್ವದ ವಾದವನ್ನು ಭಾರತದ ವಿದೇಶಾಂಗ ಇಲಾಖೆ ಸಾರಾಸಗಟಾಗಿ ತಿರಸ್ಕರಿಸಿದ್ದಷ್ಟೇ ಅಲ್ಲದೆ ಚೀನಾದ ವಾದವನ್ನು ತೀವ್ರವಾಗಿ ಖಂಡಿಸಿತು
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಅವರ ಹೇಳಿಕೆಯ ಪ್ರಕಾರ, ವಿವಾದಿತ ಪ್ರದೇಶವು ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಚೀನಾದ ಕಡೆಗೆ ಇದೆ ಎಂದು ಹೇಳಿಕೊಂಡಿದ್ದಾರೆ.
ಜೂನ್ 6ರಿಂದ ಭಾರತ ಮತ್ತು ಚೀನಾ ದೇಶಗಳ ಸೇನಾ ಅಧಿಕಾರಿಗಳು ಹಾಗೂ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಯುತ್ತಿದ್ದವು. ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಉಪಶಮನ ಮಾಡುವ ಬಗ್ಗೆ ಚರ್ಚೆ ಆಗುತ್ತಿದ್ದವು.
ಪ್ರಧಾನಿ ನರೇಂದ್ರ ಮೋದಿ ಭಾರತ ಮತ್ತು ಚೀನಾ ಗಡಿ ಸಮಸ್ಯೆ ಕುರಿತು ಚರ್ಚಿಸಲು ಜೂನ್ 19 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಸೋಮವಾರ ರಾತ್ರಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ (ಎಲ್ಎಸಿ) ಭಾರತೀಯ ಮತ್ತು ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಮುಖಾಮುಖಿಯಾದ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ.
ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಹುತಾತ್ಮರ ವಿಚಾರದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಸೈನಿಕರ ಬಲಿದಾನ ವ್ಯರ್ಥಹೋಗುವುದಿಲ್ಲ ಎಂದು ಹೇಳಿದ್ದಾರೆ. ಯಾವುದೇ ರೀತಿಯ ಪ್ರಚೋದನೆಗೆ ಭಾರತ ತಕ್ಕ ಉತ್ತರ ನೀಡಲಿದೆ. ಭಾರತ ಸಾಂಸ್ಕೃತಿಕವಾಗಿ ಶಾಂತಿ ಬಯಸುವ ದೇಶವಾಗಿದೆ. ನಾವು ಯಾರನ್ನೂ ಕೂಡ ಕೆಣಕುವುದಿಲ್ಲ. ಆದರೆ, ನಮ್ಮನ್ನು ಕೆಣಕಿದರೆ ಹೇಗೆ ಉತ್ತರಿಸಬೇಕು ನಮಗೆ ತಿಳಿದಿದೆ ಎಂದಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಅಮೆರಿಕ ಗಮನಿಸುತ್ತಿದೆ. ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆಯ ಕೆಲವು ಗಂಟೆಗಳ ನಂತರ ಯುಎಸ್ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.
ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಭಾರತ (India) ಮತ್ತು ಚೀನಾ (China) ನಡುವಿನ ಹಿಂಸಾಚಾರ ಮತ್ತು ಸಾವಿನ ವರದಿಗಳ ಬಗ್ಗೆ ವಿಶ್ವಸಂಸ್ಥೆಯ (ಯುಎನ್) ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟಾರೆಸ್ ಕಳವಳ ವ್ಯಕ್ತಪಡಿಸಿದರು.
ಈ ನಡುವೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಸೇನೆ ಲಡಾಖ್ ನ ಗಲವಾನ್ ಕಣಿವೆಯಲ್ಲಿ ನಡೆದಿರುವ ಭಾರತ-ಚೀನಾ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಓರ್ವ ಭಾರತೀಯ ಸೇನಾ ಅಧಿಕಾರಿ ಸೇರಿದಂತೆ 2 ಜವಾನರು ಹುತಾತ್ಮರಾಗಿದ್ದಾರೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.