ಚೀನಾ ಗಣಿ ಸ್ಫೋಟ; 11 ಸಾವು, 23 ಕಾರ್ಮಿಕರ ರಕ್ಷಣೆ

ಚೀನಾದ ಈಶಾನ್ಯ ಲಿಯಾನಿಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಕಬ್ಬಿಣದ ಅದಿರಿನ ಗಣಿ ಸ್ಫೋಟದಲ್ಲಿ 23 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, 9 ಮಂದಿ ಗಾಯಗೊಂಡಿದ್ದಾರೆ. 

Updated: Jun 6, 2018 , 03:02 PM IST
ಚೀನಾ ಗಣಿ ಸ್ಫೋಟ; 11 ಸಾವು, 23 ಕಾರ್ಮಿಕರ ರಕ್ಷಣೆ

ಶೆನ್ಯಾಂಗ್: ಚೀನಾದ ಈಶಾನ್ಯ ಲಿಯಾನಿಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಕಬ್ಬಿಣದ ಅದಿರಿನ ಗಣಿ ಸ್ಫೋಟದಲ್ಲಿ 23 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, ಈ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿರುವುದಾಗಿ ಗಣಿ ಅಧಿಕಾರಿಗಳು ಬುಧವಾರ ದೃಢಪಡಿಸಿದ್ದಾರೆ.

ಈ ಸ್ಫೋಟದಲ್ಲಿ 11 ಮಂದಿ ಮೃತಪಟ್ಟಿದ್ದು, ಒಂಭತ್ತು ಮಂದಿ ಗಾಯಗೊಂಡಿದ್ದಾರೆ. ಉಳಿದಂತೆ ಭೂಮಿಯಲ್ಲಿ ಸಿಲುಕಿಕೊಂಡಿದ್ದ 25 ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಚೀನಾದ ರಾಜ್ಯದ ಆಡಳಿತ ಸುದ್ದಿ ಸಂಸ್ಥೆ ಸಿನ್ಹುವಾ ವರದಿ ಮಾಡಿದೆ.

ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ರಕ್ಷಿಸುವ ಕಾರ್ಯವನ್ನು 2 ಹಂತದಲ್ಲಿ ನಡೆಸಲಾಯಿತು. ವರದಿಯ ಪ್ರಕಾರ, ಆರು ಗಣಿಗಾರರ ಮೊದಲ ತಂಡವನ್ನು ಬೆಳಿಗ್ಗೆ ಸುಮಾರು 5:20 ಗಂಟೆಗೆ ಹೊರತರಲಾಯಿತು. ನಂತರ 7.25ರ ಹೊತ್ತಿಗೆ ಉಳಿದ 17 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರ ಆರೋಗ್ಯವು ಸುಸ್ಥಿತಿಯಲ್ಲಿದೆ ಎನ್ನಲಾಗಿದೆ. ಕಾಣೆಯಾಗಿರುವ ಇಬ್ಬರು ಕಾರ್ಮಿಕರನ್ನು ಹುಡುಕುವ ಕಾರ್ಯ ಮುಂದುವರೆದಿದೆ.