Corona Second Wave: ಮತ್ತೆ ದೇಶ ಲಾಕ್ ಡೌನ್ ಆಗಲಿದೆಯಾ? ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

Corona Second Wave: ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ನ ಹೊಸ ಪ್ರಕರಣಗಳ ಸಂಖ್ಯೆ 2 ಲಕ್ಷದ ಹತ್ತಿರಕ್ಕೆ ತಲುಪಿದ ಬಳಿಕ, ಮತ್ತೆ ದೇಶಾದ್ಯಂತ ಲಾಕ್ ಡೌನ್ ಆಗುವ ಸಾಧ್ಯತೆಯ ಕುರಿತು ಶಂಕೆ ವ್ಯಕ್ತವಾಗುತ್ತಿದೆ. 

Written by - Nitin Tabib | Last Updated : Apr 14, 2021, 06:18 PM IST
  • ಭಾರತದಲ್ಲಿ ಲಾಕ್ ಡೌನ್ 2 ಜಾರಿಗೆ ಬರುತ್ತದೆಯಾ?
  • ವರ್ಲ್ಡ್ ಬ್ಯಾಂಕ್ ಅಧ್ಯಕ್ಷರ ಜೊತೆಗಿನ ಚರ್ಚೆಯ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
  • ವರ್ಲ್ಡ್ ಬ್ಯಾಂಕ್ ನೀಡಿರುವ ಸಲಹೆ ಏನು?
Corona Second Wave: ಮತ್ತೆ ದೇಶ ಲಾಕ್ ಡೌನ್ ಆಗಲಿದೆಯಾ? ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದೇನು? title=
Covid-19 Second Wave (Nirmala Sitharamana - File Photo)

ನವದೆಹಲಿ: Corona Second Wave - ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ (Coronavirus) ನ ಹೊಸ ಪ್ರಕರಣಗಳ ಸಂಖ್ಯೆ 2 ಲಕ್ಷದ ಹತ್ತಿರಕ್ಕೆ ತಲುಪಿದ ಬಳಿಕ, ಮತ್ತೆ ದೇಶಾದ್ಯಂತ ಲಾಕ್ ಡೌನ್ (Lockdown 2) ಆಗುವ ಸಾಧ್ಯತೆಯ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ದೇಶ ಪುನಃ ಲಾಕ್ ಡೌನ್ ಕಡೆಗೆ ಸಾಗುತ್ತಿದೆಯೇ? ಸೋಂಕು (Covid-19) ತಡೆಗಟ್ಟಲು ಇದೊಂದೇ ಉಪಾಯವಿದೆಯೇ? ಎಂಬ ಹಲವಾರು ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಏತನ್ಮಧ್ಯೇ ಈ ಕುರಿತು ವರ್ಲ್ಡ್ ಬ್ಯಾಂಕ್ ಗೆ ಹೇಳಿಕೆ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ಮೋದಿ ಸರ್ಕಾರ (Modi Government) ಕಳೆದ ವರ್ಷದಂತೆ ಈ ವರ್ಷವೂ ಕೂಡ ಲಾಕ್ ಡೌನ್ ವಿಧಿಸುವ ಕುರಿತು ಚಿಂತನೆ ನಡೆಸುತ್ತಿಲ್ಲ ಹಾಗೂ ಈ ಬಾರಿ ಲೋಕಲ್ ಕಂಟೆನ್ಮೆಂಟ್ ಜೋನ್ ಗಳಲ್ಲಿಯೇ ನಿರ್ಬಂಧನೆಗಳನ್ನು ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ವರ್ಲ್ಡ್ ಬ್ಯಾಂಕ್ (World Bank) ಗ್ರೂಪ್ ನ ಅಧ್ಯಕ್ಷ ಡೇವಿಡ್ ಮಾಲ್ ಪಾಸ್ ಜೊತೆಗೆ ಮಂಗಳವಾರ ವರ್ಚ್ಯುವಲ್ ಸಭೆಯೊಂದನ್ನು ನಡೆಸಿದ ಸೀತಾರಾಮನ್, ಪ್ರಸ್ತುತ ದೇಶಾದ್ಯಂತ ಲಾಕ್ ಡೌನ್ ವಿಧಿಸಲಾಗುವ ಯಾವುದೇ ಸೂಕ್ತ ಕಾರಣ ಇಲ್ಲ ಎಂದಿದ್ದಾರೆ. ಬುಧವಾರ ದೇಶಾದ್ಯಂತ ಒಟ್ಟು 1.84 ಲಕ್ಷ ಕೊವಿಡ್ (Covid-19) ನ ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಸಾವಿರಕ್ಕೂ ಅಧಿಕ ಜನರು ಈ ಮಾರಕ ಕಾಯಿಲೆಗೆ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲಕ್ಕಿಂತ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾದ ಮಹಾರಾಷ್ಟ್ರ (Maharashtra Curfew) ರಾಜ್ಯದಲ್ಲಿ ನಿನ್ನೆ ರಾತ್ರಿ 8 ಗಂಟೆಯಿಂದ ಮುಂದಿನ 15 ದಿನಗಳವರೆಗೆ ಲಾಕ್ ಡೌನ್ ನಂತಹ ನಿರ್ಬಂಧನೆಗಳನ್ನು ವಿಧಿಸಲಾಗಿದೆ.

ನಿರ್ಮಲಾ ಸೀತಾರಾಮನ್ ಅವರ ಈ ಸಭೆಯ ಬಳಿಕ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, "ಕೊರೊನಾ ಮಹಾಮಾರಿಯ ಎರಡನೇ ಅಲೆಯನ್ನು ತಡೆಗಟ್ಟಲು ಭಾರತದ ವತಿಯಿಂದ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳನ್ನು ವಿತ್ತ ಸಚಿವರು ವರ್ಲ್ಡ್ ಬ್ಯಾಂಕ್ ಜೊತೆಗೆ ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಟೆಸ್ಟ್, ಟ್ರ್ಯಾಕ್, ಟ್ರೀಟ್, ವ್ಯಾಕ್ಸಿನೆಶನ್ ಹಾಗೂ ಕೊವಿಡ್ ಅಪ್ರೋಪ್ರಿಯೆಟ್ ಬಿಹೇವಿಯರ್ ಗಳಂತ ಕ್ರಮಗಳು ಶಾಮೀಲಾಗಿವೆ" ಎಂದು ಹೇಳಿದೆ.

ಇದನ್ನೂ ಓದಿ- Covid-19: ರಂಜಾನ್‌ಗಾಗಿ ರಾಜ್ಯ ಸರ್ಕಾರದಿಂದ 'ಹೊಸ ಮಾರ್ಗಸೂಚಿ'ಗಳು..!

ತಮ್ಮ ಈ ಸಭೆಯ ವೇಳೆ "ಕೊವಿಡ್ ಎರಡನೆಯ ಅಲೆಯ ಹೊರತಾಗಿಯೂ ಕೂಡ ದೊಡ್ಡ ಪ್ರಮಾಣದಲ್ಲಿ ಲಾಕ್ ಡೌನ್ ವಿಧಿಸಲಾಗುತ್ತಿಲ್ಲ. ಸಂಪೂರ್ಣ ಆರ್ಥಿಕತೆಯನ್ನು ಕಟ್ಟಿಹಾಕಲು ನಾವು ಬಯಸುತ್ತಿಲ್ಲ. ಕೊವಿಡ್ ರೋಗಿಗಳು ಅಥವಾ ಕ್ವಾರಂಟೀನ್ ಗೊಳಪಟ್ಟ ಮನೆಗಳನ್ನು ಅವುಗಳ ಮಟ್ಟದಲ್ಲಿ ಐಸೋಲೆಟ್ ನಡೆಸಿ, ಈ ಸಂಕಷ್ಟದ ವಿರುದ್ಧ ಹೊರಾದಲಾಗುವುದು ಮತ್ತು ಲಾಕ್ ಡೌನ್ ವಿಧಿಸಲಾಗುವುದಿಲ್ಲ" ಎಂದು ಸೀತಾರಾಮನ್ ಹೇಳಿದ್ದಾರೆ.

ಇದನ್ನೂ ಓದಿ- CBSE BOARD EXAM 2021: 10ನೇ ತರಗತಿಯ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ

ಇನ್ನೊಂದೆಡೆ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವರ್ಲ್ಡ್ ಬ್ಯಾಂಕ್, ಮಾಲ್ ಪಾಸ್ ಹಾಗೂ ವಿತ್ತ ಸಚಿವರು, ವರ್ಲ್ಡ್ ಬ್ಯಾಂಕ್ ಸಮೂಹದೊಂದಿಗೆ ಭಾರತದ ಪಾರ್ನರ್ಶಿಪ್ ನ ಮಹತ್ವದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಹೇಳಿದೆ. ಇವುಗಳಲ್ಲಿ ನಾಗರಿಕ ಸೇವೆಗಳು ಹಾಗೂ ಆರ್ಥಿಕ ಕ್ಷೇತ್ರದ ಸುಧಾರಣೆಗಳು,  ಜಲಸಂಪನ್ನೂಲ ನಿರ್ವಹಣೆ  ಹಾಗೂ ಆರೋಗ್ಯ ಶಾಮೀಲಾಗಿವೆ ಎಂದು ಅದು ಹೇಳಿದೆ. ಭಾರತದಲ್ಲಿ ಕೊವಿಡ್-19 ಹತೋಟಿಗೆ ಉಪಾಯಗಳು ಹಾಗೂ ಲಸಿಕೆ ಉತ್ಪಾದನಾ ಸಾಮರ್ಥ್ಯದ ಕುರಿತು ಕೂಡ ಅವರು ಚರ್ಚೆ ನಡೆಸಿದ್ದಾರೆ ಎಂದು ವರ್ಲ್ಡ್ ಬ್ಯಾಂಕ್ ಹೇಳಿದೆ.

ಇದನ್ನೂ ಓದಿ- ಭಾರತದಲ್ಲಿ ಎಲ್ಲಾ ವಿದೇಶಿ ಲಸಿಕೆಗಳಿಗೆ ಅನುಮತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News