ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ರಂಜಾನ್ ತಿಂಗಳಲ್ಲಿ ಮುಸ್ಲಿಂ ಭಾಂದವರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ವಿಶೇಷವಾಗಿ ರಂಜಾನ್(Ramzan 2021) ಸಮಯದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ ಆದ್ದರಿಂದ ಕೋವಿಡ್ -19 ಮಾರ್ಗಸೂಚಿಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ- Ashwath Narayan: 'ಪದವಿ ಮತ್ತು ಸ್ನಾತಕೋತರ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಎಕ್ಸಾಮ್ ಸಾಧ್ಯವಿಲ್ಲ'
ಸರ್ಕಾರ(Karnataka Government) ಹೊರಡಿಸಿದ ಸುತ್ತೋಲೆಯ ಪ್ರಕಾರ, 60 ವರ್ಷಕ್ಕಿಂತ ಮೇಲ್ಪಟ್ಟವರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಇರಬೇಕು.
ಇದನ್ನೂ ಓದಿ- BS Yediyurappa: 'ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಲಾಕ್‌ಡೌನ್ ಇಲ್ಲ'
ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಮತ್ತು ಮಸೀದಿ(Mosques)ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದೇವಸ್ಥಾನಗಲ್ಲಿ ಕ್ಯೂನಲ್ಲಿ ನಿಲ್ಲುವ ಭಕ್ತರಿಗೆ ನೆಲದ ಮೇಲೆ ಗುರುತುಗಳು ಹಾಕಬೇಕು ಅವರು ದರಲ್ಲಿ ನಿಲ್ಲಬೇಕು ಮತ್ತು ಮಾಸ್ಕ ಧರಿಸುವುದು ಕಡ್ಡಾಯವಾಗಿದೆ.
ಇದನ್ನೂ ಓದಿ- Govt Office Timings Change: ಉತ್ತರ ಕರ್ನಾಟಕದ 9 ಜಿಲ್ಲೆಗಳ ಸರ್ಕಾರಿ ಕಚೇರಿಗಳಲ್ಲಿ ಸಮಯ ಬದಲಾವಣೆ!
ಪ್ರವಾಸಿ ತಾಣಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಸಂದರ್ಶಕರ ಪ್ರವೇಶವನ್ನು ನಿಷೇದಿಸಲಾಗುತ್ತದೆ ಎಂದು ಅದರಲ್ಲಿ ಹೇಳಲಾಗಿದೆ.
ಇದನ್ನೂ ಓದಿ- Bus Strike: 6 ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ : ಇಂದು ಕುಟುಂಬ ಸಮೇತ ಬೀದಿಗಿಳಿದ ಸಿಬ್ಬಂದಿ!
ಕೆಮ್ಮುವ ಮೊದಲು ನಿಯಮಗಳನ್ನು ಪಾಲಿಸಬೇಕು, ಮಸೀದಿಗಳ ಪ್ರವೇಶದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್(Thermal Screening) ಮತ್ತು ಹ್ಯಾಂಡ್ ಸ್ಯಾನಿಟೈಸರ್ ಮಾಡಬೇಕು. 'ಇಫ್ತಾರ್' ಸಮಯದಲ್ಲಿ ಮುಸ್ಲಿಂ ಭಾಂದವರು ಮನೆಯಲ್ಲಿ ತಮ್ಮ ಉಪವಾಸವನ್ನು ಮುರಿದು ಪ್ರಾರ್ಥನೆಗಾಗಿ ಮಾತ್ರ ಮಸೀದಿಗಳಿಗೆ ಬರುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ- BS Yediyurappa: 'ರಾಜ್ಯದಲ್ಲಿ ಅಗತ್ಯವಿದ್ದ ಏರಿಯಾಗಳಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತೆ'
ಮಸೀದಿಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು. ಮಸೀದಿಗೆ ಬರುವವರಲ್ಲಿ ಯಾರಿಗಾದರೂ ಕೋವಿಡ್(COVID-19) ಸೋಂಕಿಗೆ ಒಳಗಾದವರು ಕಂಡು ಬಂದಲ್ಲಿ ಅವರನ್ನ ತಕ್ಷಣವೇ ಪ್ರತ್ಯೇಕಿಸಿ ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ- Ramesh Jarkiholi CD Case: ರಮೇಶ್ ಜಾರಕಿಹೊಳೆ ಸಿಡಿ ಕೇಸ್ ಗೆ ಬ್ಲಾಸ್ಟಿಂಗ್ ಟ್ವಿಸ್ಟ್..!
ಈ ಕೊರೋನಾ ಸಮಯದಲ್ಲಿ ಮಸೀದಿಗಳಲ್ಲಿ ಮಾರ್ಗಸೂಚಿಗಳನ್ನ ಚಹು ತಪ್ಪದೆ ಪಾಲಿಸಬೇಕು ಎಂದು ಸರ್ಕಾರ ಮಸೀದಿ ಅಧಿಕಾರಿಗಳನ್ನು ಕೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.