Google Play Storeನಲ್ಲಿ ಪಟ್ಟಿಯಾದ WHO Covid-19 ಅಂಡ್ರಾಯಿಡ್ ಆಪ್, ಸಿಗಲಿದೆ ಈ ಮಾಹಿತಿ

WHO Covid-19 Updates: WHO ಕೋವಿಡ್ -19  ಅಪ್ಲಿಕೇಶನ್‌ನಲ್ಲಿ, ಬಳಕೆದಾರರು ಕರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ನಿಖರವಾದ ಮಾಹಿತಿ, ಸಂಗತಿಗಳು ಮತ್ತು ಡೇಟಾವನ್ನು  ಪಡೆಯಲಿದ್ದಾರೆ.

Written by - Nitin Tabib | Last Updated : Dec 26, 2020, 04:57 PM IST
  • Google Play Store ನಲ್ಲಿ ಪಟ್ಟಿಯಾದ WHO Covid-19 Updates ಆಪ್
  • ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕುರಿತು ನಿಖರ ಮಾಹಿತಿ ಸಿಗಲಿದೆ
  • ಈ ಆಪ್ ನಲ್ಲಿ ನೀವು ತಜ್ಞರ ಸಲಹೆಗಳನ್ನು ಕೂಡ ಪಡೆಯಬಹುದು.
Google Play Storeನಲ್ಲಿ ಪಟ್ಟಿಯಾದ WHO Covid-19 ಅಂಡ್ರಾಯಿಡ್ ಆಪ್, ಸಿಗಲಿದೆ ಈ ಮಾಹಿತಿ title=
WHO Covid-19 Updates (File Image)

WHO Covid-19 Updates: ಕೊರೊನಾವೈರಸ್ ಸಾಂಕ್ರಾಮಿಕ ರೋಗಗಳಿಂದ ಜನರನ್ನು ರಕ್ಷಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ಜನರಿಗೆ ಸುರಕ್ಷತಾ ಸಲಹೆ ಮತ್ತು ಕೋವಿಡ್ -19 ಸಂಬಂಧಿತ ಅಂಶಗಳನ್ನು ಒದಗಿಸಲು ನೂತನ  WHO Covid-19 Updates ಆಪ್ ಬಿಡುಗಡೆ ಮಾಡಿದ್ದು, ಪ್ರಸ್ತುತ ಇದನ್ನು ಪ್ಲೇ ಸ್ಟೋರ್‌ನಲ್ಲಿ ಪಟ್ಟಿ ಮಾಡಲಾಗಿದೆ. ಕೋವಿಡ್ -19 ಮಾರ್ಗಸೂಚಿಗಳು ಮತ್ತು ನವೀಕರಣಗಳನ್ನು ನೀಡಲು ಈ ಅಪ್ಲಿಕೇಶನ್ ಅನ್ನು WHO ಪ್ರಾರಂಭಿಸಿದೆ. ಈ ಅಪ್ಲಿಕೇಶನ್‌ನಲ್ಲಿ, ಬಳಕೆದಾರರು ಕರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಅತ್ಯಂತ ನಿಖರವಾದ ಮಾಹಿತಿ, ಸಂಗತಿಗಳು ಮತ್ತು ಡೇಟಾವನ್ನು ಪಡೆಯಲಿದ್ದಾರೆ. ಇದಕ್ಕೂ ಮೊದಲು WHO ಏಪ್ರಿಲ್‌ನಲ್ಲಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತ್ತು ಆದರೆ ನಂತರ ಅದನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿತ್ತು.

ಇದನ್ನು ಓದಿ- ಬಹುತೇಕ ಎಲ್ಲಾ COVID-19 ರೋಗಿಗಳಲ್ಲೂ ಪ್ರತಿಕಾಯ ಅಭಿವೃದ್ಧಿ : WHO

ಹೊಸ ಅಪ್ಲಿಕೇಶನ್‌ನಲ್ಲಿಯೂ, ಕರೋನಾ ಸಂಬಂಧಿತ ಅಪ್ಡೇಟ್ ಗಳು ಹಳೆಯ ಆಪ್ ನಂತೆಯೇ ಕಾರ್ಯನಿರ್ವಹಿಸುತ್ತದೆ. ಈ ಅಪ್ಲಿಕೇಶನ್‌ನಲ್ಲಿ, ಮಹಾಮಾರಿಗೆ ಸಂಬಂಧಿತ ರೋಗಲಕ್ಷಣಗಳ ಬಗ್ಗೆ ಮತ್ತು ವಿಶ್ವಾದ್ಯಂತ ಸೋಂಕಿತ ಕೋವಿಡ್‌ನ ಒಟ್ಟು ಸಂಖ್ಯೆಯ ಮಾಹಿತಿಯನ್ನು ಒದಗಿಸಲಾಗುತ್ತದೆ. ಇದಲ್ಲದೆ, ಅನೇಕ ಆರೋಗ್ಯ ತಜ್ಞರು, ವೈದ್ಯರು ಮತ್ತು ತಜ್ಞರನ್ನು ಸಹ ಅಪ್ಲಿಕೇಶನ್‌ನಲ್ಲಿ ಇಂಪ್ಯಾನಲ್ ಮಾಡಲಾಗಿದೆ, ಅವರು ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.

ಇದನ್ನು ಓದಿ- Dexamethasone ನಿಂದಾಗುತ್ತೆ ಕೊರೊನಾ ರೋಗಿಗಳ ಚಿಕಿತ್ಸೆ, ಸಲಹೆ ನೀಡಿದ WHO

ಈ ಆಪ್ ನಿತ್ಯ ಸೋಂಕಿಗೆ ಒಳಗಾಗುವ  ಹೊಸ ಸೋಂಕಿತರ ಸಂಖ್ಯೆಯನ್ನು ಸಹ ಹೇಳುತ್ತದೆ. ಈ ಅಪ್ಲಿಕೇಶನ್ ಅನ್ನು ಡಿಸೆಂಬರ್ 20 ರಂದು WHO ಪ್ರಾರಂಭಿಸಿದೆ. ಇದರ ಗಾತ್ರ 8.8MB. ಇದನ್ನು ಆಂಡ್ರಾಯ್ಡ್ ಆವೃತ್ತಿ 4.1 ಅಥವಾ ಹೆಚ್ಚಿನ ಆವೃತ್ತಿಗಳಲ್ಲಿ ನೀವು ಇನ್ಸ್ಟಾಲ್ ಮಾಡಬಹುದು.

ಇದನ್ನು ಓದಿ- ಡೆಡ್ ಲೈನ್ ನಿಗದಿಪಡಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ಧಮ್ಕಿ ಹಾಕಿದ ಡೊನಾಲ್ಡ್ ಟ್ರಂಪ್..!

ಸಿಗಲಿವೆ ಈ ಅತ್ಯಾವಶ್ಯಕ ಮಾಹಿತಿಗಳು
ಈ ಅಪ್ಲಿಕೇಶನ್‌ನಲ್ಲಿ, ಕರೋನಾ ವೈರಸ್ ತಡೆಗಟ್ಟುವಿಕೆ, ಸೋಂಕಿಗೆ ಒಳಗಾದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಇತ್ಯಾದಿಗಳನ್ನು ಬಳಕೆದಾರರಿಗೆ ವಿಶ್ವಾಸಾರ್ಹ ವೈದ್ಯಕೀಯ ಮೂಲಗಳ ಸಹಾಯದಿಂದ ಮಾಹಿತಿ ಒದಗಿಸಲಾಗುವುದು. ಇದಲ್ಲದೆ, ಕರೋನಾಗೆ ಸಂಬಂಧಿಸಿದ ಹೊಸ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಬಳಕೆದಾರರಲ್ಲಿ ಅರಿವು ಮೂಡಿಸಲಾಗುವುದು. WHO ಬಳಕೆದಾರರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಲು ಪ್ರಾದೇಶಿಕ ತಜ್ಞರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News