ದುಬೈನ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ರಜೆಯ ಮೇಲೆ ಲಂಡನ್ ಗೆ ತೆರಳಿದ್ದಾರೆ. ಈ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇವರ ಸೋಶಿಯಲ್ ಮೀಡಿಯಾದಲ್ಲಿ 14.5 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಸದ್ಯ ಈ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಇದರಲ್ಲಿ ಯುವರಾಜ ಆರಾಮವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಸುತ್ತಾಡುತ್ತಿರುವುದನ್ನು ಕಾಣಬಹುದು. ಇನ್ನು ರಾಜಮನೆತನದವರು ಅಪರೂಪವಾಗಿ ಪ್ರಯಾಣ ಬೆಳೆಸುವ ಅಂಡರ್ ಗ್ರೌಂಡ್ ಸಾರಿಗೆ ವ್ಯವಸ್ಥೆಯಲ್ಲಿ ಯುವರಾಜ ಪ್ರಯಾಣ ಬೆಳೆಸಿದ್ದಾರೆ. ಒಂದೆಡೆ ಇವರ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದ್ರೆ, ಇನ್ನೊಂದೆಡೆ ಇವರನ್ನು ಯಾರೋಬ್ಬರೂ ಗುರುತು ಹಿಡಿಯದಿರುವುದು ಆಶ್ಚರ್ಯ ತಂದಿದೆ.
ಇದನ್ನೂ ಓದಿ: Asia Cup: ಏಷ್ಯಾಕಪ್ ಆಡಲು ಈ ಇಬ್ಬರು ಆಟಗಾರರ ನಡುವೆ ಪೈಪೋಟಿ: ಯಾರಾಗ್ತಾರೆ ಇನ್?
ಲಂಡನ್ ಅಂಡರ್‌ಗ್ರೌಂಡ್ ಸೇವೆ ಮೆಟ್ರೋದಂತೆಯೇ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದೆ. ಇದು ಗ್ರೇಟರ್ ಲಂಡನ್ ಮತ್ತು ಇಂಗ್ಲೆಂಡ್‌ನ ಬಕಿಂಗ್‌ಹ್ಯಾಮ್‌ಶೈರ್, ಎಸೆಕ್ಸ್ ಮತ್ತು ಹರ್ಟ್‌ಫೋರ್ಡ್‌ಶೈರ್‌ನ ಪಕ್ಕದ ಕೌಂಟಿಗಳ ಕೆಲವು ಭಾಗಗಳಿಗೆ ಸೇವೆ ಸಲ್ಲಿಸುತ್ತದೆ.
ಸದ್ಯ ಈಗ ವೈರಲ್ ಆಗಿರುವ ಫೋಟೋದಲ್ಲಿ, ಶೇಖ್ ಹಮ್ದಾನ್ ತನ್ನ ಸ್ನೇಹಿತನೊಂದಿಗೆ ಕಿಕ್ಕಿರಿದ ಲಂಡನ್ ಟ್ಯೂಬ್ ಕಂಪಾರ್ಟ್‌ಮೆಂಟ್‌ನ ಮಧ್ಯದಲ್ಲಿ ನಿಂತಿರುವುದನ್ನು ಕಾಣಬಹುದು. ಅವರ ಸ್ನೇಹಿತನನ್ನು ಬದ್ರ್ ಅತೀಜ್ ಎಂದು ಗುರುತಿಸಿದೆ. ಇಷ್ಟೊಂದು ಜನರ ಮಧ್ಯೆ ಅವರು ಪ್ರಯಾಣ ಬೆಳೆಸಿದರೂ ಸಹ ಅವರನ್ನು ಪ್ರಯಾಣಿಕರು ಗುರುತಿಸಿಲ್ಲ.
ಮತ್ತೊಂದು ಫೋಟೋದಲ್ಲಿ, ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಲಂಡನ್‌ನಲ್ಲಿ ಶೇಖ್ ಹಮ್ದಾನ್ ಅವರನ್ನು ಭೇಟಿಯಾಗಿರುವುದನ್ನು ತೋರಿಸುತ್ತಿದೆ. ಪ್ರಿನ್ಸ್ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ತನ್ನ ತಂದೆ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಮಾನತುಗೊಳಿಸಿದ ಫಿಫಾ: ಕಾರಣ ಇದುವೇ!
ಜನರು ಈ ಬಾರಿ ಗುರುತಿಸದೇ ಇರಬಹುದು, ಆದರೆ ಕಳೆದ ತಿಂಗಳು ಶೇಖ್ ಹಮ್ದಾನ್ ಲಂಡನ್‌ನಲ್ಲಿ ದುಬೈ ನಿವಾಸಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ವೀಡಿಯೊ ವೈರಲ್ ಆಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.